ಸಿಡಿಲಿನ ಸಾವು - ನೋವು ತಡೆಗೆ ರೆಡಿಯಾಗುತ್ತಿದೆ ಹೈಟೆಕ್ ಅಪ್ಲಿಕೇಶನ್

ಮಂಗಳೂರು, ಮೇ 31: ಮುಂಗಾರು ಶ್ರೀಘ್ರದಲ್ಲೇ ಕರ್ನಾಟಕ ಕರಾವಳಿ ಪ್ರವೇಶಿಸಲಿದೆ. ಪ್ರತಿವರ್ಷ ಕರಾವಳಿ ಜಿಲ್ಲೆಯಲ್ಲಿ ಮಳೆಯಷ್ಟೇ ಸಿಡಿಲು, ಗುಡುಗು ಭಯವನ್ನುಂಟು ಮಾಡುವುದಲ್ಲದೆ, ಸಾವು - ನೋವಿಗೆ ಕಾರಣವಾಗುತ್ತದೆ. ಇದನ್ನು ತಪ್ಪಿಸಲೆಂದೇ ರಾಜ್ಯಮಟ್ಟದಲ್ಲಿ ಸಿಡಿಲು - ಗುಡುಗು ಮುನ್ಸೂಚನೆಗೆ ಅಪ್ಲಿಕೇಶನ್ ವೊಂದನ್ನು ತಯಾರಿಸಲು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮುಂದಾಗಿದೆ.

ಸುಮಾರು 55 ಲಕ್ಷ ರೂ. ವೆಚ್ಚದಲ್ಲಿ ಈ ಅಪ್ಲಿಕೇಶನ್ ತಯಾರಿಸುವ ಯೋಚನೆಯಿದೆ ಎನ್ನುತ್ತಾರೆ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನಿರ್ದೇಶಕ ಡಾ.ಜಿ.ಶ್ರೀನಿವಾಸ್ ರೆಡ್ಡಿ.

High tech app is now getting ready to prevent deaths by thunders and lightening

ಯೋಜನೆಗೆ ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಒಂದು ತಿಂಗಳಲ್ಲಿ ಎಲ್ಲ ಪ್ರಕ್ರಿಯೆ ಮುಗಿದು ಸೆನ್ಸಾರ್ ಸ್ಟೇಷನ್ ಹಾಕಲಾಗುತ್ತದೆ. ಒಂದು ಸ್ಟೇಷನ್ ಸುತ್ತಮುತ್ತಲ 100 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಲಿದೆ ಎನ್ನುತ್ತಾರೆ ಶ್ರೀನಿವಾಸ ರೆಡ್ಡಿ.

ಅಪ್ಲಿಕೇಶನ್ ಕಾರ್ಯಾಚರಣೆ ಆರಂಭಿಸಿದ ಬಳಿಕ ಸೆನ್ಸೆರ್ ಸ್ಟೇಷನ್ ನಿಂದ ಮಳೆಯ, ಸಿಡಿಲು - ಗುಡುಗು ಬಗ್ಗೆ ಮುನ್ಸೂಚನೆ ಬರುತ್ತದೆ. ಸಾಮಾನ್ಯವಾಗಿ 30 ರಿಂದ 45 ನಿಮಿಷ ಮೊದಲೇ ಈ ಬಗ್ಗೆ ಮುನ್ಸೂಚನೆ ಬರುವುದರಿಂದ ಅವಘಡಗಳನ್ನು ತಪ್ಪಿಸಲು ಸಾಧ್ಯವಾಗುತ್ತದೆ. ಸಂಬಂಧಪಟ್ಟ ಪ್ರದೇಶದ ರೈತರಿಗೆ ಮುನ್ಸೂಚನೆ ನೀಡಿ ಅಲ್ಲಿಂದ ತೆರಳುವಂತೆ ಸೂಚನೆಯನ್ನೂ ನೀಡಲಾಗುತ್ತದೆ.

High tech app is now getting ready to prevent deaths by thunders and lightening

ಸಿಡಿಲು - ಗುಡುಗು ಮುನ್ಸೂಚನೆಗಾಗಿ ಅಪ್ಲಿಕೇಶನ್ ತಯಾರಿಸುತ್ತಿರುವುದು ದೇಶದಲ್ಲೇ ಇದೆ ಮೊದಲು. ಇನ್ನು ಸೆನ್ಸಾರಿನ ಮಾಹಿತಿ ಆಧಾರದ ಮೇಲೆ ಸಂಬಂಧಪಟ್ಟ ಪ್ರದೇಶದ ರೈತರಿಗೆ ಮುನ್ಸೂಚನೆ ನೀಡಲಿದ್ದೇವೆ. ರಾಜ್ಯದ 30 ಲಕ್ಷಕ್ಕೂ ಅಧಿಕ ರೈತರ ಮೊಬೈಲ್ ನಂಬರ್ ನಮ್ಮಲ್ಲಿರುವುದರಿಂದ ಇದು ರೈತರಿಗೆ ದೊಡ್ಡ ಮಟ್ಟದ ನೆರವಾಗಲಿದೆ. ಆಂಧ್ರದಲ್ಲಿಯೂ ಇದೆ ಮಾದರಿ ಅಪ್ಲಿಕೇಶನ್ ಈ ಬಾರಿ ತಯಾರಿಸುತ್ತಾರಾದರೂ, ಸಂಬಂಧಪಟ್ಟವರಿಗೆ ಮಾಹಿತಿ ನೀಡುವ ವ್ಯವಸ್ಥೆ ಅವರಲಿಲ್ಲ ಎನ್ನುತ್ತಾರೆ ಶ್ರೀನಿವಾಸ್ ರೆಡ್ಡಿ.

High tech app is now getting ready to prevent deaths by thunders and lightening

ಪ್ರತಿ ವರ್ಷ ರಾಜ್ಯ ಗುಡುಗು ಸಿಡಲಿನ ದಾಳಿಗೆ ಕನಿಷ್ಠ 70 ರಿಂದ 80 ಮಂದಿ ಸಾಯುತ್ತಿದ್ದಾರೆ. ಇತ್ತೀಚಿನ ಮುಂಗಾರು ಮುನ್ನ ಸಿಡಿಲಿನ ಅಪಘಾತಕ್ಕೆ ಬಂಟ್ವಾಳದಲ್ಲಿ ಮೂರೂ ಮಂದಿ ಸಾವಿಗೀಡಾಗಿದ್ದರು. ಈ ಸಾವು - ನೋವು ಕಡಿಮೆಗೊಳಿಸುವ ಉದ್ದೇಶದಿಂದ ಮೊಬೈಲ್ ಅಪ್ಲಿಕೇಶನ್ ಅಳವಡಿಸುವ ಯೋಜನೆ ಕೈಗೊಳ್ಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+