ಕಾಸರಗೋಡು ಮದ್ರಸಾ ಶಿಕ್ಷಕನ ಹತ್ಯೆ: ಮೂವರ ಬಂಧನ
ಮಂಗಳೂರು / ಕಾಸರಗೋಡು, ಮಾರ್ಚ್. 24 : ಮಸೀದಿ ಅಧ್ಯಾಪಕ ರಿಯಾಜ್ ಮೌಲವಿ (30) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ತನಿಖೆಯ ದೃಷ್ಠಿಯಿಂದ ಆರೋಪಿಗಳನ್ನು ಬಂಧಿಸಿರುವ ಬಗ್ಗೆ ಪೊಲೀಸರು ಯಾವುದೇ ಗುಟ್ಟು ಬಿಟ್ಟು ಕೊಡುತ್ತಿಲ್ಲ
ನೀತಿನ್, ಅಖೀಲ್, ಅಜೇಶ್ ಯಾನೆ ಬಂಧಿತ ಆರೋಪಿಗಳು. ಮಾರ್ಚ್ 20ರಂದು (ಸೋಮವಾರ) ಕಾಸರಗೋಡಿನ ಮಸೀದಿ ಬಳಿ ರಿಯಾಜ್ ಅವರನ್ನು ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದರು.[ಕಾಸರಗೋಡಿನಲ್ಲಿ ಮದ್ರಸಾ ಶಿಕ್ಷಕನ ಹತ್ಯೆ: ಇಂದು ಹರತಾಳ]

ರಿಯಾಜ್ ಮೌಲವಿ ಹತ್ಯೆ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಪೊಲೀಸರು, ಎರಡು ಹತ್ಯೆ ಪ್ರಕರಣಗಳ ಆರೋಪಿಯನ್ನು ಕೇಂದ್ರೀಕರಿಸಿ ತನಿಖೆ ನಡೆಸುವ ವೇಳೆ ಈ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣದಲ್ಲಿ ಇನ್ನಷ್ಟು ಆರೋಪಿಗಳಿರುವುದು ಶಂಕಿ ವ್ಯಕ್ತವಾಗಿದೆ. ಈ ಸಂಬಂಧ ಬಂಧಿತ ಆರೋಪಿಗಳನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿ ತನಿಖೆ ಮುಂದುವೆರೆಸಿದ್ದಾರೆ.












Click it and Unblock the Notifications