ಪವಿತ್ರ ಹಜ್ ಯಾತ್ರೆ ಮುಗಿಸಿದ ಮಂಗಳೂರಿನ 757 ಯಾತ್ರಿಗಳು
ಮಂಗಳೂರು, ಆಗಸ್ಟ್ 31: ಮಂಗಳೂರಿನಿಂದ ಹಜ್ ಯಾತ್ರೆಗೆ ತೆರಳಿದ್ದ ಯಾತ್ರಿಕರು ಇಂದು ಯಾತ್ರೆ ಮುಗಿಸಿ ಮರಳಲಿದ್ದಾರೆ. ಸರ್ಕಾರದ ಹಜ್ ಸಮಿತಿಯಿಂದ ಮಂಗಳೂರು ಹಜ್ ಕ್ಯಾಂಪ್ ಮೂಲಕ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನಗಳಲ್ಲಿ ಹಜ್ ಯಾತ್ರಿಕರು ತೆರಳಿದ್ದರು.
ಹಜ್ ಯಾತ್ರೆ ಮುಗಿಸಿ 757 ಮಂದಿಯ ತಂಡ ಮರಳಲಿದೆ. ಇಂದು ಮೊದಲ ಏಐ 5196 ವಿಮಾನವು ಸೌದಿ ಸಮಯ ಬೆಳಿಗ್ಗೆ 6.45ಕ್ಕೆ ಜಿದ್ದಾದಿಂದ ಹೊರಟು ಭಾರತೀಯ ಕಾಲಮಾನ 2:35ಕ್ಕೆ ಹಾಗೂ ಏಐ 5198 ವಿಮಾನವು ಬೆಳಿಗ್ಗೆ 10:45ಕ್ಕೆ ಹೊರಟು ಸಂಜೆ 6:35ಕ್ಕೆ ಮಂಗಳೂರು ತಲುಪಲಿದೆ.
ಗಣೇಶ ಚತುರ್ಥಿ : ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು
ಸೆಪ್ಟಂಬರ್ 1 ಭಾನುವಾರ ಮಧ್ಯಾಹ್ನ ಏಐ 5200 ವಿಮಾನವು ಮಧ್ಯಾಹ್ನ 12:30ಕ್ಕೆ, ಏಐ 5202 ಮಧ್ಯಾಹ್ನ 1:30ಕ್ಕೆ ಹಾಗೂ ಸೆಪ್ಟಂಬರ್ 2ರಂದು ಸೋಮವಾರ ಏಐ 5204 ವಿಮಾನವು ಬೆಳಿಗ್ಗೆ 10 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ.