ಅಗ್ನಿ ಅವಘಡ: ಹೊತ್ತಿ ಉರಿದ ಮಂಗಳೂರಿನ ಹೃದಯ ಭಾಗದ ಕಟ್ಟಡ
ಮಂಗಳೂರು, ಸೆಪ್ಟೆಂಬರ್. 27: ಮಂಗಳೂರಿನ ಹೃದಯ ಭಾಗದಲ್ಲಿರುವ ಕಟ್ಟಡ ಒಂದಕ್ಕೆ ಬೆಂಕಿ ತಗುಲಿ ಹೊತ್ತಿ ಉರಿದಿದ್ದು, ಕೆಲಹೊತ್ತು ಆ ಭಾಗದಲ್ಲಿ ಆತಂಕದ ವಾತಾವರಣ ಸೃಷ್ಠಿಯಾಗಿತ್ತು.
ಇಂದು ಗುರುವಾರ ಹಂಪನಕಟ್ಟೆ ವೃತ್ತದ ಬಳಿ ಇರುವ ಸೆಲೆಕ್ಷನ್ ಸೆಂಟರ್ ಹೆಸರಿನ ಮೂರು ಅಂತಸ್ತಿನ ಕಟ್ಟಡದಲ್ಲಿ ಈ ಘಟನೆ ನಡೆದಿದ್ದು, ಆ ಕಟ್ಟಡದಲ್ಲಿರುವ ಬಟ್ಟೆ ಮಳಿಗೆ, ಗೋಡೌನ್, ಇನ್ನಿತರ ಸಾಮಗ್ರಿಗಳು ಬೆಂಕಿಯ ಕೆನ್ನಾಲಗೆಗೆ ಉರಿದು ಬೂದಿಯಾಗಿವೆ.

ಮುಂಜಾನೆಯಿಂದ ಭಾರೀ ಸಿಡಿಲಿನ ಆರ್ಭಟ ಇತ್ತು. ಸಿಡಿಲಿನ ಕಾರಣದಿಂದ ಶಾರ್ಟ್ ಸರ್ಕಿಟ್ ಆಗಿ ಬೆಂಕಿ ಹತ್ತಿಕೊಂಡಿರುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಈ ಕಟ್ಟಡದಲ್ಲಿ ನವೀಕರಣದ ಕೆಲಸವೂ ನಡೀತಿದ್ದು, ಈ ನಡುವೆ ಬೆಂಕಿ ಹೊತ್ತಿ ಕಟ್ಟಡವನ್ನು ಆವರಿಸಿದೆ.

ಕಟ್ಟಡದಲ್ಲಿ ದಟ್ಟ ಹೊಗೆಯುಂಟಾಗಿದ್ದರಿಂದ ಘಟನೆ ಬೆಳಕಿಗೆ ಬಂದಿದೆ. ಅದಕ್ಕೂ ಮೊದಲೇ ಒಳಭಾಗದಲ್ಲಿದ್ದ ಸಾಮಗ್ರಿಗಳು ಬೆಂಕಿಗಾಹುತಿಯಾಗಿದ್ದವು. ಘಟನೆಯ ಮಾಹಿತಿ ದೊರೆಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಆಗ್ನಿಶಾಮಕದಳದ ಸಿಬ್ಬಂದಿ ಮತ್ತು ಪೊಲೀಸರು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.












Click it and Unblock the Notifications