• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೂಡಬಿದಿರೆಯ ಜನಪ್ರಿಯ 'ಗಾರ್ಡ್' ಗೆ ಅಂತಿಮ ನಮನ

By ಐಸಾಕ್ ರಿಚರ್ಡ್, ಮಂಗಳೂರು
|

ಮಂಗಳೂರು, ಡಿ.3: ಮಂಗಳವಾರ ಮುಂಜಾನೆ ನಿಧನರಾದ ಮೂಡಬಿದಿರೆಯ ಆಳ್ವಾಸ್ ಆಸ್ಪತ್ರೆಯಲ್ಲಿ ಸೆಕ್ಯುರಿಟಿ ಗಾರ್ಡ್ ಈ ಭಾಗದ ಜನಪ್ರಿಯ ವ್ಯಕ್ತಿ ರಾಧಾಕೃಷ್ಣ ನಾಯಕ್ ಅವರಿಗೆ ಅಂತಿಮ ನಮನ ಸಲ್ಲಿಸಲಾಗಿದೆ.

ಕಳೆದ ಹದಿನೈದು ವರ್ಷಗಳಿಂದ ರಾಧಾಕೃಷ್ಣ ನಾಯಕ್(54) ಅವರು ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದರು. ಅವರಿಗೆ ಅಪರೇಷನ್ ನಡೆದ ಬಳಿಕ ತಮ್ಮ ದೇಹದ ತೂಕವನ್ನು ಕಳೆದುಕೊಂಡು ಹಾಸಿಗೆ ಹಿಡಿದಿದ್ದರು.

ಹೀಗೆ ಮಾನಸಿಕವಾಗಿ, ದೈಹಿವಾಗಿ ಕುಗ್ಗಿ ಹೋಗಿದ್ದ ನಾಯಕ್ ಮಂಗಳವಾರ ಮುಂಜಾನೆ ನಗರದ ಕೆಎಂಸಿ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದರು. ಪತ್ನಿ ರಾಧಾ ಮತ್ತು ತಮ್ಮ ಉದಯ್ ನಾಯಕ್ ಅಲ್ಲದೆ ಅಪಾರ ಅಭಿಮಾನಿಗಳನ್ನು ಆರ್ ಕೆ ನಾಯಕ್ ಅಗಲಿದ್ದಾರೆ. ಆರ್ ಕೆ ನಾಯಕ್ ಅವರ ಅಂತಿಮ ಯಾತ್ರೆಯ ಚಿತ್ರಗಳು ನಿಮಗಾಗಿ ಇಲ್ಲಿದೆ...

ಆರ್ ಕೆ ನಾಯಕ್ ಎಂದೇ ಜನಪ್ರಿಯರಾಗಿದ್ರು

ಆರ್ ಕೆ ನಾಯಕ್ ಎಂದೇ ಜನಪ್ರಿಯರಾಗಿದ್ರು

ಕಾರ್ಕಳದ ಬಂಗ್ಲೆಗುಡ್ಡೆ ನಿವಾಸಿಯಾಗಿದ್ದ ರಾಧಾಕೃಷ್ಣ ನಾಯಕ್ ಅವರನ್ನು ಎಲ್ಲರೂ ಆರ್ ಕೆ ನಾಯಕ್ ಎಂದೇ ಕರೆಯುತ್ತಿದ್ದರು. ಆಳ್ವಾಸ್ ಆಸ್ಪತ್ರೆಯ ಭದ್ರತಾ ಸಿಬಂದಿಯಾಗಿದ್ದ ಇವರ ಜನಪ್ರಿಯತೆ ಇವರ ಉಡುಗೆ ತೊಡುಗೆ ದೈತ್ಯ ದೇಹ ಕಾರಣವಾಗಿತ್ತು.

ನಾಯಕ್ ರನ್ನು ಬೆರಗುಗಣ್ಣಿಂದ ನೋಡುತ್ತಿದ್ದರು

ನಾಯಕ್ ರನ್ನು ಬೆರಗುಗಣ್ಣಿಂದ ನೋಡುತ್ತಿದ್ದರು

ಆಳ್ವಾಸ್ ನುಡಿಸಿರಿಗೆ ಭೇಟಿ ನೀಡಿದವರು ಆರ್ ಕೆ ನಾಯಕ್ ರನ್ನು ಬೆರಗುಗಣ್ಣಿಂದ ನೋಡುತ್ತಿದ್ದರು. ಕೆಲವರು ಧೈರ್ಯ ಮಾಡಿ ಜೊತೆಗೆ ನಿಂತು ಫೋಟೋ ತೆಗೆಸಿಕೊಳ್ಳುತ್ತಿದ್ದರು.

ಡಬ್ಲ್ಯು ಡಬ್ಲ್ಯು ಇ ರೆಸ್ಲಿಂಗ್ ನ ಅಂಡರ್ ಟೇಕರ್ ಹೋಲುವ ಹ್ಯಾಟ್, ಬಟ್ಟೆ, ಚೈನ್ ಧರಿಸುತ್ತಿದ್ದ ಆರ್ ಕೆ ನಾಯಕ್ ರನ್ನು ಆಳ್ವಾಸ್ ಕಾಲೇಜ್ ಅಥವಾ ಆಸ್ಪತ್ರೆ ಬಳಿ ಗುರುತಿಸುವುದು ಸುಲಭವಾಗಿತ್ತು. ಅದರೆ, ಈ ವಸ್ತ್ರ ವಿನ್ಯಾಸವೆಲ್ಲ ಹೈದರಾಬಾದ್ ಕಡೆಯಿಂದ ಬಂದ ಬಳುವಳಿ ಎನ್ನುವವರೂ ಇದ್ದಾರೆ.

ಆರ್ ಕೆ ನಾಯಕರಿಗೂ ಸಿನಿಮಾ ಹುಚ್ಚಿತ್ತು

ಆರ್ ಕೆ ನಾಯಕರಿಗೂ ಸಿನಿಮಾ ಹುಚ್ಚಿತ್ತು

ದೈತ್ಯ ದೇಹಿ ಆರ್ ಕೆ ನಾಯಕರಿಗೂ ಸಿನಿಮಾ ಹುಚ್ಚಿತ್ತು. ಅದರೆ, ಸಾಹಸ ದೃಶ್ಯವೊಂದರಲ್ಲಿ ಪಾಲ್ಗೊಂಡಿದ್ದಾಗ ಗಾಯಗೊಂಡವರು ಮತ್ತೆ ಬಣ್ಣದ ಬದುಕಿಗೆ ಮರಳು ಆಗಲಿಲ್ಲ. ಹೈದರಾಬಾದಿನಲ್ಲಿ ಹೋಟೆಲ್ ಉದ್ಯಮಿ ಕೈಗೂಡಲಿಲ್ಲ,

ಭದ್ರತಾ ಸಿಬ್ಬಂದಿಯಾಗಿ ಜನಪ್ರಿಯತೆ ಗಳಿಸಿದರು.

ಸಾವಿರಾರು ಮಂದಿ ಜೊತೆ ಫೋಟೋ

ಸಾವಿರಾರು ಮಂದಿ ಜೊತೆ ಫೋಟೋ

ಆರ್ ಕೆ ನಾಯಕ್ ಅವರಿರುವ ಸುಮಾರು 14 ರಿಂದ 16 ಸಾವಿರಕ್ಕೂ ಅಧಿಕ ಫೋಟೊಗಳು ಇದುವರೆವಿಗೂ ಕ್ಲಿಕ್ಕಿಸಲಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ.

ಆಳ್ವಾಸ್ ಸಂಸ್ಥೆಯ ಡಾ. ಮೋಹನ್ ಆಳ್ವಾ ಅವರಿಗೆ ನಿಷ್ಠಾವಂತರಾಗಿದ್ದ ಆರ್ ಕೆ ನಾಯಕ್ ಅವರನ್ನು ಈ ಭಾಗದ ಜನರು ಹಾಗೂ ಮುಂಬರುವ ನುಡಿಸಿರಿಗೆ ಬರುವ ಜನರು ಖಂಡಿತಾ ಮಿಸ್ ಮಾಡಿಕೊಳ್ಳದೇ ಇರಲು ಸಾಧ್ಯವಿಲ್ಲ.

ಆರ್ ಕೆ ನಾಯಕ್ ಜೊತೆ ಅಭಿಮಾನಿ

ಆರ್ ಕೆ ನಾಯಕ್ ಜೊತೆ ಅಭಿಮಾನಿ

ಆಳ್ವಾಸ್ ವಿದ್ಯಾ ಸಂಸ್ಥೆ ಮಾಜಿ ಉದ್ಯೋಗಿ ವಿನ್ಯಾಸಗಾರ ಪ್ರಕಾಶ್ ಶೆಟ್ಟಿ ಉಳೈಪಾಡಿ ಅವರು ಆರ್ ಕೆ ನಾಯಕ್ ಜೊತೆಗಿನ ತಮ್ಮ ಫೋಟೊವನ್ನು ಹಂಚಿಕೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Nayak, who had been working as a security man at Alva's hospital for the past fifteen years passed away on Tuesday December 2. A very popular man in the vicinity of Moodbidri, a centre of attraction during Alva's Nudisiri events, Karkala Banglegudde Radhakrishna Nayak, popularly known as R K Nayak,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more