ಬಾಳಿಗಾ ಕೊಲೆ ಆರೋಪಿ ನರೇಶ್ ಶೆಣೈಗೆ ಶಿಕ್ಷೆಯಾಗಲೆಂದು ದೇವರಲ್ಲಿ ಪ್ರಾರ್ಥನೆ
ಮಂಗಳೂರು, ಮಾರ್ಚ್. 21 : ಮಾಹಿತಿಹಕ್ಕು ಕಾರ್ಯಕರ್ತ ವಿನಾಯಕ ಬಾಳಿಗಾ ಕೊಲೆಯಾಗಿ ಇಂದಿಗೆ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಬಾಳಿಗಾ ಸಹೋದರಿಯರು ವೆಂಕಟರಮಣನಿಗೆ ಕೈ ಮುಗಿದು, ಕೊಲೆ ಆರೋಪಿ ನರೇಶ್ ಶೆಣೈಗೆ ಶಿಕ್ಷೆಯಾಗುವಂತೆ ಪ್ರಾರ್ಥನೆ ಮಾಡಿದರು.
ಬಳಿಕ ವೆಂಕಟರಮಣ ದೇವಾಲಯದಿಂದ ವಿನಾಯಕ ಬಾಳಿಗಾ ಮನೆವರೆಗೆ ವಿಚಾರವಾದಿ ನರೇಂದ್ರ ನಾಯಕ್ ನೇತೃತ್ವದ 'ದೇಶ ಪ್ರೇಮಿ ಸಂಘಟನೆ' ಮತ್ತು ಇತರ ಸಂಘಟನೆಗಳ ಸದಸ್ಯರು ಮೌನ ಮೆರವಣಿಗೆ ನಡೆಸಿದರು.[ಬಾಳಿಗಾ ಕೊಲೆ ಪ್ರಕರಣ: ಸರ್ಕಾರಿ ವಿಶೇಷ ಅಭಿಯೋಜಕರಾಗಿ ರವೀಂದ್ರನಾಥ್]

2016 ಮಾರ್ಚ್ 21 ರಂದು ಕೊಲೆಯಾಗುವ ಮುನ್ನ ಸಂಜೆ ಬಾಳಿಗಾ ಅವರು ನಡೆದಾಡಿದ ಬೀದಿಗಳಲ್ಲಿ ವಿವಿಧ ಸಂಘಟನೆಗಳು ಮೆರವಣಿಗೆ ಹಮ್ಮಿಕೊಳ್ಳಲಾಗಿದ್ದು, ಬಾಳಿಗಾ ಅವರ ಹೆಜ್ಜೆಗೆ ನಮ್ಮ ಹೆಜ್ಜೆಯನ್ನು ಸೇರಿಸುವ ಮೂಲಕ ಬಾಳಿಗಾ ಕುಟುಂಬದ ಜೊತೆ ನಿಲ್ಲಬೇಕಿದೆ.
ಕೊಲೆಗಡುಕರ ವಿರುದ್ದ ಮಂಗಳೂರಿನ ಜನಸಾಮಾನ್ಯರ ಪ್ರತಿರೋಧದ ದ್ವನಿಯನ್ನು ಗಟ್ಟಿಯಾಗಿ ಮೊಳಗಿಸಬೇಕಿದೆ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಈ ಸಂದರ್ಭ ಕರೆಕೊಟ್ಟಿದ್ದಾರೆ. ಬಾಳಿಗಾ ಕೊಲೆ ಪ್ರಕರಣದಲ್ಲಿ ನಮೋ ಬ್ರಿಗೇಡ್ ಸ್ಥಾಪಕ ನಮೋ ನರೇಶ್ ಶೆಣೈ ಪ್ರಧಾನ ಆರೋಪಿಯಾಗಿದ್ದಾನೆ.[ವಿನಾಯಕ ಬಾಳಿಗ ಕೊಲೆ ಪ್ರಕರಣ: ಆರೋಪಿಗಳಿಗೆ ಜಾಮೀನು]

ನರೇಶ್ ಶೆಣೈ ಜಾಮೀನು ಪಡೆದು ಹೊರಬರುವಾಗ ಯುವ ಬ್ರಿಗೇಡ್ ಮುಖಂಡ ಚಕ್ರವರ್ತಿ ಸೂಲಿಬೆಲೆ ಜೈಲಿನ ಬಾಗಿಲಿಗೆ ತೆರಳಿ ಆಲಿಂಗನದ ಮೂಲಕ ಸ್ವಾಗತಿಸಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿತ್ತು.












Click it and Unblock the Notifications