ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಸಿಲ ಎಫೆಕ್ಟ್:ಕರಾವಳಿಯಲ್ಲಿ ಸಾವನ್ನಪ್ಪುತ್ತಿವೆ ಕೋಳಿಗಳು

|
Google Oneindia Kannada News

ಮಂಗಳೂರು, ಮೇ 03: ಕರಾವಳಿಯಲ್ಲಿ ದಿನದಿಂದ ದಿನಕ್ಕೆ ಬಿಸಿಲತಾಪ ಏರುತ್ತಿದೆ. ತಾಪಮಾನದಲ್ಲಿ ಆಗುತ್ತಿರುವ ಏರಿಕೆಯ ಪರಿಣಾಮ ಕೋಳಿ ಸಾಕಣೆ ಉದ್ಯಮ ಮೇಲೆ ಬಿದ್ದಿದೆ.ಈ ಹಿನ್ನೆಲೆಯಲ್ಲಿ ಕುಕ್ಕುಟ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ.ಏರುತ್ತಿರುವ ಬಿಸಿಲ ತಾಪಕ್ಕೆ ಕೋಳಿಗಳು ಸಾವನ್ನಪ್ಪುತ್ತಿವೆ. ಪ್ರತಿ ಸಾವಿರಕ್ಕೆ 20ರಿಂದ 30 ಕೋಳಿಗಳು ಸಾವನ್ನಪ್ಪುತ್ತಿವೆ ಎಂದು ಹೇಳಲಾಗಿದೆ.

ಈ ಪರಿಣಾಮ ಕೋಳಿ ಸಾಕಾಣಿಕೆದಾರರು ನಷ್ಟ ಅನುಭವಿಸುವಂತಾಗಿದ್ದು, ಮಾರುಕಟ್ಟೆಯಲ್ಲಿ ಕೋಳಿ ಮಾಂಸದ ದರ ಕೂಡ ಏರಿಕೆಯಾಗುತ್ತಿದೆ.ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ , ಉಡುಪಿ ಜಿಲ್ಲೆಗಳಲ್ಲಿ ತಾಪಮಾನ 36 ರಿಂದ 37 ಡಿಗ್ರಿ ಸೆ.ದಾಖಲಾಗಿದೆ.ವಾತಾವರಣದಲ್ಲಿ ಆದ್ರತೆ ಇರುವುದರಿಂದ ಒತ್ತಡ ತಾಳಲಾರದೆ ಕೋಳಿಗಳು ಸಾಯುತ್ತಿವೆ ಎನ್ನುತ್ತಾರೆ ಕೋಳಿ ಸಾಕಣೆದಾರರರು.

ತುಂಬೆ ಅಣೆಕಟ್ಟಿನಲ್ಲಿ ಉಳಿದಿರುವುದು ಕೇವಲ 4.90 ಮೀಟರ್ ನೀರು!ತುಂಬೆ ಅಣೆಕಟ್ಟಿನಲ್ಲಿ ಉಳಿದಿರುವುದು ಕೇವಲ 4.90 ಮೀಟರ್ ನೀರು!

ಕೆಲವೊಮ್ಮೆ ಮೋಡ ಕವಿದ ವಾತಾವರಣ ಇದ್ದು, ಮಳೆ ಬರುತ್ತದೆ ಎಂಬ ಸ್ಥಿತಿ ಇದ್ದಾಗಲೂ ಕೋಳಿ ಮರಣ ಪ್ರಮಾಣ ಹೆಚ್ಚು. ಸಾಯುವ ಪ್ರಮಾಣ ಅಪರಾಹ್ನ 2ರಿಂದ ಸಂಜೆ 5ರ ಅವಧಿಯಲ್ಲಿ ಹೆಚ್ಚು. ಇತರ ಜಿಲ್ಲೆಗಳಲ್ಲಿ 40 ಡಿಗ್ರಿ ಸೆ.ತಾಪಮಾನ ಇದ್ದಾಗಲೂ ನೀರು ಸಿಂಪಡಿಸಿದರೆ ಬದುಕುತ್ತವೆ.ಆದರೆ ಕರಾವಳಿಯಲ್ಲಿ ಸಾಧ್ಯತೆ ಕಡಿಮೆ ಎನ್ನುತ್ತಾರೆ ಕೋಳಿ ಸಾಕಣೆದಾರರು.

Extreme heat affected poultry farming in coastal districts

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರಸ್ತುತ ಸುಮಾರು 2 ಸಾವಿರ ಮಂದಿ ಬಾಯ್ಲರ್‌ ಕೋಳಿ ಸಾಕಣೆದಾರರು ಇದ್ದು, 25ರಿಂದ 30 ಲಕ್ಷ ಕೋಳಿಗಳನ್ನು ಸಾಕುತ್ತಿದ್ದಾರೆ. ಈ ಜಾತಿಯ ಕೋಳಿಗಳಿಗೆ 23 ರಿಂದ 33 ಡಿಗ್ರಿ ಸೆ.ತಾಪಮಾನ ಅನುಕೂಲಕರ, 36 ಡಿ. ಸೆ. ದಾಟಿದರೆ ಕಷ್ಟ.

ಕರಾವಳಿಯಲ್ಲಿ ಬಿಸಿಲಿನ ತಾಪ:ಬಡವರ ಫ್ರಿಡ್ಜ್ ಗೆ ಭಾರೀ ಡಿಮ್ಯಾಂಡ್ಕರಾವಳಿಯಲ್ಲಿ ಬಿಸಿಲಿನ ತಾಪ:ಬಡವರ ಫ್ರಿಡ್ಜ್ ಗೆ ಭಾರೀ ಡಿಮ್ಯಾಂಡ್

ಬಾಯ್ಲರ್‌ ಕೋಳಿಗಳು ಸಾಮಾನ್ಯವಾಗಿ 4ರಿಂದ 6 ವಾರಗಳ ಕಾಲ ಬದುಕುತ್ತವೆ. ಬೇರೆ ಅವಧಿಗಳಲ್ಲಿ ಬಾಯ್ಲರ್‌ ಕೋಳಿಗಳ ಮರಣ ಪ್ರಮಾಣ ಶೇ.3 ರಿಂದ 4 ಇದ್ದರೆ ಮಾರ್ಚ್‌ನಿಂದ ಮೇ ಅಂತ್ಯದವರೆಗೆ ಶೇ.5 ರಿಂದ 6ಕ್ಕೇರುತ್ತದೆ. ಕೋಳಿಗಳ ಸಾವಿನ ಸಂಖ್ಯೆ ಹೆಚ್ಚಾಗಿರುವುದರಿದ ಪ್ರಸ್ತುತ ಮಾಂಸದ ಕೋಳಿಯ ಧಾರಣೆ 130 ರೂಪಾಯಿಗಳಿಗೆ ತಲುಪಿದೆ.

English summary
In Summer the sudden appearance of high temperature affected poultry farming in Dakshina Kannada and Udupi districts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X