ಕರ್ನಾಟಕ ಕರಾವಳಿ ಜನರಿಗೆ ಬಿಯರ್ ಕೊಡಲ್ಲ ಅಂತಿದೆ ಅಬಕಾರಿ ಇಲಾಖೆ!
ಬೆಂಗಳೂರು, ಸೆ.24: ಕರಾವಳಿ ಜನರಿಗೆ ಬಿಯರ್ ಕೊಡುವುದಿಲ್ಲ ದೇಸಿ ಮದ್ಯವನ್ನೇ ಮಾರಾಟ ಮಾಡಿ ಎಂದು ಅಬಕಾರಿ ಇಲಾಖೆ ಹೇಳಿದೆ. ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಕರಾವಳಿಯಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳೇ ಬಿಯರ್ ನ ಅಭಾವ ಸೃಷ್ಟಿಸಿ, ದುಬಾರಿ ಬೆಲೆಯ ಮದ್ಯ ಸೇವನೆಗೆ ಪ್ರಚೋದಿಸುತ್ತಿದ್ದಾರೆ ಎನ್ನುವ ದೂರುಗಳು ಕೇಳಿಬಂದಿದೆ.
ಹೆಚ್ಚಿನ ಅಬಕಾರಿ ಆದಾಯಗಳಿಸುವ ಉದ್ದೇಶದಿಂದ ದೇಶಿ ಮದ್ಯ ಮಾರಾಟಕ್ಕೆ ಸರ್ಕಾರವೇ ಟಾರ್ಗೆಟ ನಿಗದಿ ಮಾಡುವ ಮೂಲಕ ಕರಾವಳಿಯಲ್ಲಿ ಬಿಯರ್ ಗೆ ಬರ ಸೃಷ್ಟಿಯಾಗಿದೆ.
ಉಡುಪಿ ಜಿಲ್ಲೆಯಲ್ಲಿ 2 ತಿಂಗಳಿಂದ ಮದ್ಯ ಮಾರಾಟ ಸನ್ನದುದಾರರಿಗೆ ಹೆಚ್ಚು ಮದ್ಯ ಖರೀದಿಸಿ ಒತ್ತಾಯಿಸಲಾಗುತ್ತಿದೆ. ಬಿಯರ್ ಖರೀದಿಯನ್ನು ನಿರಾಕರಿಸಲಾಗುತ್ತಿದೆ. 100 ಬಾಕ್ಸ್ ಮದ್ಯವನ್ನು ಖರೀದಿ ಮಾಡಿದರೆ 40 ರಿಂದ 50 ಬಾಕ್ಸ್ ಬಿಯರ್ ನೀಡುತ್ತಿದ್ದಾರೆ, ಮದ್ಯದ ದರ ಹೆಚ್ಚಳದಿಂದ ಜನರು ಬಿಯರ್‌ನ್ನೇ ಇಷ್ಟಪಡುತ್ತಿದ್ದಾರೆ.

ಮದ್ಯದ ದುಬಾರಿ ಬೆಲೆ ಕಾರಣ ಹಾಗೂ ತಾಪಮಾನದ ಹಿನ್ನೆಲೆಯಲ್ಲಿ ಹೆಚ್ಚಾಗಿ ಬಿಯರ್ ಬಳಸುತ್ತಿದ್ದಾರೆ. ಆದರೆ ಅಬಖಾರಿ ಇಲಾಖೆಯೇ ಬಿಯರ್ ಬದಲು ಮದ್ಯ ಮಾರಾಟಕ್ಕೆ ಬಾರ್ ಮತ್ತು ರೆಸ್ಟೋರೆಂಟ್ ಗಳ ಮೇಲೆ ಭಾರಿ ಒತ್ತಡ ಹೇರುತ್ತಿದೆ.












Click it and Unblock the Notifications