ವಿದ್ಯುತ್ ಕಂಬ ಹತ್ತುವ ಸಾಧನ ಕಂಡುಹಿಡಿದ ಬೈಂದೂರು ಯತೀಶ್
ನವೆಂಬರ್ 10, ಮಂಗಳೂರು : ವಿದ್ಯುತ್ ನಿಗಮದ ಕಾರ್ಮಿಕ ಸಿಬ್ಬಂದಿ ಹೆಸರು ಈಗ "ಲೈನ್ ಮ್ಯಾನ್ "ನಿಂದ "ಪವರ್ ಮ್ಯಾನ್ "ಎಂದು ಬದಲಾಯಿಸಲಾಗಿದೆ. ಈ ನಡುವೆ ಇನ್ನೊಂದು ಸಿಹಿ ಸುದ್ದಿ ಏನೆಂದರೆ ಈ ಪವರ್ ಮ್ಯಾನ್ ಗಳ ಕಂಬ ಹತ್ತುವ ಸರ್ಕಸ್ ಗೆ ಬ್ರೇಕ್ ಬೀಳಲಿದೆ .
ದಿನನಿತ್ಯ ಕಾಲಿಗೆ ಹಗ್ಗ ಸಿಕ್ಕಿಸಿ ಸರ್ಕಸ್ ಮಾಡುತ್ತಾ ವಿದ್ಯುತ್ ಕಂಬ ಹತ್ತಿ ದುರಸ್ತಿ ಕಾರ್ಯ ನಡೆಸುವ ಈ ಶ್ರಮಜೀವಿಗಳಿಗೆ ಸಂತಸದ ಸಂಗತಿ ಎಂದರೆ ಇನ್ನೂ ವಿದ್ಯುತ್ ಕಂಬವನ್ನು ಅತ್ಯಂತ ಸುಲಭವಾಗಿ ಹತ್ತುವ ಸುಧಾರಿತ ಸಾಧನವನ್ನು ತಯಾರಿಸಲಾಗಿದೆ . ಇದರಿಂದ ಕಂಬ ಏರುವುದು ನೀರು ಕುಡಿದಷ್ಟು ಸುಲಭವಾಗಲಿದೆ .

ವಿದ್ಯುತ್ ಕಂಬ ಹತ್ತಿ ದುರಸ್ತಿ ಮಾಡುವ ಸಂದರ್ಭದಲ್ಲಿ ದುರಂತ ಸಂಭವಿಸಿ ಅದೆಷ್ಟು ಸಿಬ್ಬಂದಿಗಳು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಕಂಬದಿಂದ ಆಯತಪ್ಪಿ ಬಿದ್ದು ಹಲವಾರು ವಿದ್ಯುತ್ ನಿಗಮದ ಸಿಬ್ಬಂದಿಗಳು ತಮ್ಮ ಪ್ರಾಣ ಕಳೆದುಕೊಂಡ ನೂರಾರು ಉದಾಹರಣೆಗಳು ನಮ್ಮ ಮುಂದಿವೆ.
ಮೆಸ್ಕಾಂನಲ್ಲಿ ಪವರ್ ಮ್ಯಾನ್ ಹುದ್ದೆಗೆ ಕಡ್ಡಾಯವಾಗಿ ಕಂಬ ಹತ್ತುವ ಅನುಭವ ಇರಬೇಕು ಎಂಬ ನಿಯಮವಿದೆ. ಸಿಬ್ಬಂದಿ ನೇಮಕಾತಿ ಸಂದರ್ಭದಲ್ಲಿ ಕಂಬ ಹತ್ತುವುದನ್ನು ದೈಹಿಕ ಪರೀಕ್ಷೆಯ ಅತಿ ಮುಖ್ಯ ಭಾಗವಾಗಿ ಪರಿಗಣಿಸಲಾಗಿದೆ .ಈ ಕಾರಣದಿಂದಾಗಿ ಯಾರಿಗೆ ಬೇಕು ಈ ಕಂಬ ಹತ್ತುವ ಕಿರಿಕಿರಿ ಅಂತ ಹೆಚ್ಚಿನ ಯುವಕರು ಈ ಹುದ್ದೆಗೆ ಹೆಚ್ಚಾಗಿ ಆಸಕ್ತಿ ತೋರುವುದಿಲ್ಲ. ಆದರೆ ಇನ್ನು ಮುಂದೆ ವಿದ್ಯುತ್ ನಿಗಮದ ಪವರ್ ಮ್ಯಾನ್ ಹುದ್ದೆಗೆ ಕಂಬ ಹತ್ತುವ ಅನುಭವ ಬೇಕಿಲ್ಲ.

ಉಡುಪಿ ಜಿಲ್ಲೆಯ ಯತೀಶ್ ಆಚಾರ್ಯ ಎಂಬ ಯುವಕ ಈ ಸುಧಾರಿತ ಸಾಧನವನ್ನು ತಯಾರಿಸಿದ್ದಾರೆ ವಿದ್ಯುತ್ ನಿಗಮ ಸಿಬ್ಬಂದಿಗಳ ನಿತ್ಯ ಬವಣೆಯನ್ನು ಮನಗಂಡ ಯತೀಶ್ ಆಚಾರ್ಯ ಅತ್ಯಂತ ಸುಲಭವಾಗಿ ಕಂಬ ಏರುವ ಸುಧಾರಿತ ಸಾಧನ ಸಿದ್ಧಪಡಿಸಿದ್ದಾರೆ. ಈ ಸಾಧನ ಬಳಸಿ ಯಾವುದೇ ಶ್ರಮವಿಲ್ಲದೆ ಸರಸರನೆ ಕಂಬ ಏರಬಹುದಾಗಿದೆ. ಅದಲ್ಲದೆ ಈ ಸಾಧನದ ಮೇಲೆ ಕುಳಿತು ಕಂಬದ ಮೇಲೆ ಕೆಲಸ ಮಾಡಬಹುದಾಗಿದೆ.
"ಎಲ್ " ಆಕೃತಿಯ ಕಬ್ಬಿಣದ ರಾಡ್ ಹಾಗೂ ಪ್ಲಾಸ್ಟಿಕ್ ಚಪ್ಪಲಿ ಬಳಸಿ ಅತ್ಯಂತ ಸುಧಾರಿತ ಸರಳ ಸಾಧನವನ್ನು ಯತೀಶ್ ತಯಾರಿಸಿದ್ದಾರೆ .ಈ ಸಾಧನಕ್ಕೆ ಪ್ಲಾಸ್ಟಿಕ್ ಚಪ್ಪಲಿ ಮಾತ್ರವಲ್ಲದೆ ಯಾವುದೇ ಮೆಟೀರಿಯಲ್ ನ ಸೇಫ್ಟಿ ಶೂಗಳನ್ನು ಕೂಡ ಅಳವಡಿಸಬಹುದಾಗಿದೆ.

ಈ ಹಿಂದೆ ಬೆಂಗಳೂರಿನ ಐಟಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದ ಯತೀಶ್ ತಮ್ಮ ತಂದೆಯ ಅನಾರೋಗ್ಯ ನಿಮಿತ್ತ ತನ್ನ ಹುಟ್ಟೂರು ಬೈಂದೂರಿಗೆ ಮರಳಿದ್ದರು . ತಮ್ಮ ಸಹೋದರನೊಂದಿಗೆ ಕಬ್ಬಿಣದ ಸಲಕರಣೆಗಳನ್ನು ತಯಾರಿಸುವ ಕೆಲಸವನ್ನು ಯತೀಶ್ ಮಾಡುತ್ತಿದ್ದಾರೆ .ಈ ನಡುವೆ ಊರಿನ ವಿದ್ಯುತ್ ನಿಗಮದ ಸಿಬ್ಬಂದಿ ಲೋಹಿತ್ ಎಂಬವರು ಕಂಬ ಹತ್ತುವ ಸಾಧನವನ್ನು ಸಿದ್ದ ಪಡಿಸಲು ಒತ್ತಾಯಿಸಿದ್ದರು .ಈ ಬಗ್ಗೆ ಗಮನ ಹರಿಸಿದ ಯತೀಶ್ ಈ ಸರಳ ಸಾಧನವನ್ನು ಈಗ ತಯಾರಿಸಿದ್ದಾರೆ. ಈ ಸರಳ ಸಾಧನವನ್ನು ತಯಾರಿಸಲು ತಗಲುವ ಖರ್ಚು ಕೇವಲ 1500 ರೂಪಾಯಿ.

ಈ ಹಿಂದೆ ಕೂಡ ವಿದ್ಯುತ್ ಕಂಬ ಹತ್ತುವ ಸಾಧನವನ್ನು ತಯಾರಿಸುವ ಪ್ರಯತ್ನಗಳು ನಡೆದಿವೆ . 2015 ರಲ್ಲಿ ಹೆಸ್ಕಾಂ ಕಾರ್ಮಿಕ ಮುತಾಲಿಕ್ ದೇಸಾಯಿ ಎಂಬುವರು ಸರಳ ಸಾಧನವನ್ನು ತಯಾರಿಸಿದ್ದರು. ಇತ್ತೀಚೆಗೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೆಳ್ಮಣ್ ಗ್ರಾಮದ ಮೆಸ್ಕಾಂ ನೌಕರ ಚಂದ್ರಪ್ಪ ಎಂಬುವರು ಕೂಡ ಈ ರೀತಿಯ ಸಾಧನವನ್ನು ಸಿದ್ಧಪಡಿಸಿದ್ದರು .

ಆದರೆ ಯತೀಶ್ ಅವರು ತಯಾರಿಸಿರುವ ಸಾಧನ ಅತ್ಯಂತ ಸುಧಾರಿತ, ಸರಳ ಮತ್ತು ಸುರಕ್ಷಿತ, ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹಾಗೂ ವಿದ್ಯುತ್ ನಿಗಮ ಈ ಸರಳ ಸಾಧನದ ಬಗ್ಗೆ ಗಮನ ಹರಿಸಬೇಕಿದೆ .
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications