ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೊಳಕೆಯೊಡೆದು ಗಿಡವಾಗುತ್ತೆ ಈ ಯೂಸ್ ಅಂಡ್ ಥ್ರೋ ಪೆನ್

|
Google Oneindia Kannada News

ಮಂಗಳೂರು, ಜುಲೈ 22: ಆಧುನಿಕ ಕಾಲದ ಬಹುದೊಡ್ಡ ಸಮಸ್ಯೆ ಪ್ಲಾಸ್ಟಿಕ್ ಎಂದರೆ ಖಂಡಿತ ತಪ್ಪಾಗಲಾರದು. ಆ ಮಟ್ಟಿಗೆ ಪ್ಲಾಸ್ಟಿಕಾಸುರ ನಮ್ಮ ನಡುವೆ ಬೆಳೆದು ನಿಂತಿದ್ದಾನೆ. ಮಹಾನಗರಗಳಲ್ಲಿ ಪ್ರತಿದಿನ ಉತ್ಪತ್ತಿಯಾಗುವ ಲಕ್ಷ ಲಕ್ಷ ಟನ್ ಘನತ್ಯಾಜ್ಯಗಳಲ್ಲಿ ಸಿಂಹ ಪಾಲು ಪ್ಲಾಸ್ಟಿಕ್ ನದ್ದೇ.

ಪ್ಲಾಸ್ಟಿಕ್ ಅತಿಯಾದ ಬಳಕೆ ಮಾನವನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂಬುದನ್ನು ಅನೇಕ ಸಂಶೋಧನೆಗಳು ಸಾಬೀತುಪಡಿಸಿದರೂ ಅದರ ಬಳಕೆ ತಗ್ಗಿಸುವಲ್ಲಿ ಮಾತ್ರ ಪ್ರಯತ್ನಗಳು ಸಾಲುತ್ತಿಲ್ಲ.

 ಮಂಗಳೂರನ್ನು ಹಸಿರಾಗಿಸುವ ಹಾದಿಯಲ್ಲಿ ಜೀತ್ ಮಿಲನ್‌ ಮಂಗಳೂರನ್ನು ಹಸಿರಾಗಿಸುವ ಹಾದಿಯಲ್ಲಿ ಜೀತ್ ಮಿಲನ್‌

ಆದರೆ ಈ ನಿಟ್ಟಿನಲ್ಲಿ ಏನಾದರೂ ಬದಲಾವಣೆ ತರಬೇಕು ಎಂಬ ಉದ್ದೇಶದೊಂದಿಗೆ, ನಾವು ದಿನ ನಿತ್ಯ ಬಳಸುವ, ಬಳಸಿ ಬಿಸಾಡುವ ಪೆನ್ ಗಳನ್ನು ಪರಿಸರಸ್ನೇಹಿ ಮಾಡುವ ವಿಶಿಷ್ಟ ಪ್ರಯತ್ನ ಪಕ್ಕದ ಕೇರಳದಲ್ಲಿ ನಡೆದಿದೆ. ದಕ್ಷಿಣ ಕನ್ನಡ ಗಡಿಭಾಗದ ಬಂದ್ಯೋಡು ಸಮೀಪದ ಅಡ್ಕದಲ್ಲಿರುವ ಸ್ವಸಹಾಯ ಸಂಘದ ಅಂಗವಿಕಲ ಸದಸ್ಯರು ಇಂತಹದೊಂದು ಪರಿಸರಸ್ನೇಹಿ ಪೆನ್ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ.

ecofriendly pen that grow as plant invented in mangaluru

ದಿನ ನಿತ್ಯ ರಾಶಿ ರಾಶಿ ಪೆನ್ ಗಳು ಕಸದ ಬುಟ್ಟಿ ಸೇರುತ್ತವೆ. ಪ್ಲಾಸ್ಟಿಕ್ ತ್ಯಾಜ್ಯದಲ್ಲಿ ಇವುಗಳ ಪಾಲು ಕಮ್ಮಿಯೇನಿಲ್ಲ. ಆದ್ದರಿಂದಲೇ ಈ ಪೆನ್ ಗಳನ್ನು ಕಾಗದದಿಂದ ತಯಾರಿಸುವ ಕೆಲಸ ನಡೆದಿದೆ. ಅಷ್ಟೇ ಅಲ್ಲ, ಈ ಪೆನ್ ಗಳ ಮೂಲಕ ಗಿಡ ಬೆಳೆಸುವ ಕಾರ್ಯವನ್ನೂ ಮಾಡಲಾಗುತ್ತಿದೆ.

ಅದ್ಹೇಗೆ ಅಂತೀರಾ?
ಈ ಕಾಗದದ ಪೆನ್ನಿನ ಹಿಂಬದಿಯಲ್ಲಿ ತರಕಾರಿ ಬೀಜಗಳನ್ನು ಹಾಕಲಾಗಿರುತ್ತದೆ. ಪೆನ್ನಿನ ಇಂಕ್ ಮುಗಿದ ಬಳಿಕ ಇದನ್ನು ಎಸೆದರೆ ಮಣ್ಣಲ್ಲಿ ಕರಗಿ ಬೀಜಗಳು ಮೊಳಕೆಯೊಡೆಯುತ್ತವೆ. ಹೀಗೊಂದು ವಿಶಿಷ್ಟ ಲೇಖನಿಯನ್ನು ಈ ಸ್ವಸಹಾಯ ಸಂಘದ ಸದಸ್ಯರು ತಯಾರಿಸುತ್ತಿದ್ದಾರೆ. ಒಂದು ಪೆನ್ನಿಗೆ 5 ರಿಂದ 8ರೂಪಾಯಿ ಬೆಲೆಯನ್ನು ನಿಗದಿಪಡಿಸಲಾಗಿದೆ.

ecofriendly pen that grow as plant invented in mangaluru

ಈ ಪರಿಸರ ಸ್ನೇಹಿ ಪೆನ್ ಗಳಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾರುಕಟ್ಟೆ ಇಲ್ಲದಿದ್ದರೂ ರಾಜ್ಯದ ಇತರೆಡೆ ಹೆಚ್ಚು ಬೇಡಿಕೆಯಿದೆ. ಸರ್ಕಾರಿ ಸಭೆ ಸಮಾರಂಭಗಳಲ್ಲಿ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಮಾದರಿ ಉತ್ಪನ್ನ ಎಂದು ಬಳಕೆಯಾಗುತ್ತಿದೆ. ವಿವಿಧ ಬಣ್ಣಗಳಲ್ಲಿ ಪೆನ್ ಗಳು ಲಭ್ಯವಿದ್ದು, ನೋಡಲೂ ಆಕರ್ಷಣೀಯವಾಗಿವೆ.

ಪರಿಸರ ಸ್ನೇಹಿ ಪೆನ್ ಮಾತ್ರವಲ್ಲದೇ ಈ ಸಂಘದ ಸದಸ್ಯರು ಪೇಪರ್ ಬ್ಯಾಗ್, ಕೊಡೆಗಳನ್ನು ತಯಾರಿಸಿ ಯಶಸ್ಸು ಗಳಿಸಿದ್ದಾರೆ.

English summary
Co operative group in Adka of mangaluru making eco friendly pen that not only reduce plastic waste but also have seeds that grow into trees,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X