ಮಂಗಳೂರು: ವಾಟ್ಸ್ಯಾಪ್ ಅಭ್ಯರ್ಥಿಗಳ ಮೇಲೆ ಎಫ್ ಐಆರ್
ಮಂಗಳೂರು, ಏ.1: ಚುನಾವಣಾ ಅಕ್ರಮದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳೀನ್ ಕುಮಾರ್ ಕಟೀಲ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಜನಾರ್ದನ ಪೂಜಾರಿ ಅವರ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಇದು ಸಹಜ ಸುದ್ದಿ ಎನಿಸಿದರೂ,ವಾಟ್ಸ್ಯಾಪ್ ದುರ್ಬಳಕೆ ಮಾಡಿರುವ ಆರೋಪದ ಮೇಲೆ ಇಬ್ಬರ ಮೇಲೆ ದೂರು ದಾಖಲಾಗಿರುವುದು ವಿಶೇಷ.
ಮೊಬೈಲ್ ಮೆಸೇಜಿಂಗ್ ಅಪ್ಲಿಕೇಷನ್ Whatsapp ಬಳಸಿಕೊಂಡು ಜಾತಿ ಆಧಾರಿತವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ಮತಯಾಚನೆ ಮಾಡುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಪೊಲೀಸರು ಪರಿಶೀಲನೆ ನಡೆಸಿ ಎಫ್ ಐಆರ್ ದಾಖಲಿಸಿದ್ದಾರೆ.ಚುನಾವಣಾ ಅಕ್ರಮದ ಹಿನ್ನೆಲೆಯಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆ 2010ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಹೆಚ್ಚುವರಿ ಉಪ ಆಯುಕ್ತ, ಹೆಚ್ಚುವರಿ ಚುನಾವಣಾಧಿಕಾರಿ ಬಿ. ಸದಾಶಿವ್ ಪ್ರಭು ಹೇಳಿದ್ದಾರೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ಉಳಿದಂತೆ ಮಾ.18ರಂದು ಕಾಂಗ್ರೆಸ್ ಅಭ್ಯರ್ಥಿ ಪೂಜಾರಿ ಅವರು 'ಮಂಗಳೂರಿನ ನಗರದಲ್ಲಿ ಪಾಲಿಕೆ ಆಸ್ತಿ ತೆರಿಗೆ ಹೆಚ್ಚಳ ಮಾಡುವುದಿಲ್ಲ' ಎಂದು ನೀಡಿದ ಆಶ್ವಾಸನೆ ಮೇಲೆ ದೂರು ದಾಖಲಿಸಲಾಗಿದೆ.
ಬಿಜೆಪಿ ಅಭ್ಯರ್ಥಿ ನಳೀನ್ ಕುಮಾರ್ ಅವರು ಆರೋಗ್ಯ ಸಚಿವ ಯು.ಟಿ ಖಾದರ್ ಅವರ ಮೇಲೆ 'ಕುಕ್ಕೆ ಸುಬ್ರಮಣ್ಯ ದೇಗುಲ ಟ್ರಸ್ಟಿಗೆ ಸೇರಬೇಕಾದ್ದ ಬಿಡಿಎ ನಿವೇಶನ ಕಬಳಿಕೆ' ಆರೋಪ ಹೊರೆಸಿ ನೀಡಿದ ಹೇಳಿಕೆ ಆಧಾರಿಸಿ ದೂರು ದಾಖಲಿಸಲಾಗಿದೆ. ಒಟ್ಟಾರೆ ಚುನಾವಣಾ ಅಕ್ರಮಗಳ ವಿವರ, ನಟಿ ಶ್ರುತಿ ಅವರು ನಳೀನ್ ಕುಮಾರ್ ಕಟೀಲ್ ಪರ ಪ್ರಚಾರ ಚಿತ್ರಗಳು ಮುಂದಿದೆ. [ಚಿತ್ರಗಳು: ಐಸಾಕ್ ರಿಚರ್ಡ್, ಮಂಗಳೂರು]

ಚುನಾವಣೆ: ದ.ಕದಲ್ಲಿ ಒಟ್ಟು 56 ಕೇಸು ದಾಖಲು
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಇಲ್ಲಿವರೆಗೂ ಒಟ್ಟು 56 ದೂರು ದಾಖಲಾಗಿದೆ. ಅದರಲ್ಲಿ 38 ಚುನಾವಣಾ ಆಕ್ರಮವಾಗಿದ್ದರೆ ಉಳಿದ 18 ಅಬಕಾರಿ ಇಲಾಖೆ ದಾಖಲಿಸಿದ ಅಕ್ರಮಗಳಾಗಿದೆ: ಸದಾಶಿವ್ ಪ್ರಭು

ಅಭ್ಯರ್ಥಿಗಳ ಮೇಲೆ ಮೂರು ಎಫ್ ಐಆರ್
ಅಭ್ಯರ್ಥಿಗಳ ಮೇಲೆ ಮೂರು ಎಫ್ ಐಆರ್ ದಾಖಲಾಗಿದ್ದು, ಒಟ್ಟು 14.17 ಲಕ್ಷ ರು ನಗದು ವಶಪಡಿಸಿಕೊಳ್ಳಲಾಗಿದೆ. ಅಬಕಾರಿ ಇಲಾಖೆ ಸುಮಾರು 27 ಲೀಟರ್ ಮದ್ಯ ವಶಪಡಿಸಿಕೊಂಡಿದೆ ಎಂದು ಹೆಚ್ಚುವರಿ ಆಯುಕ್ತ ಸದಾಶಿವ ಪ್ರಭು ಹೇಳಿದ್ದಾರೆ.

ನಳೀನ್ ಕುಮಾರ್ ಪರ ಶ್ರುತಿ ಪ್ರಚಾರ
ನಳೀನ್ ಕುಮಾರ್ ಪರ ಚುನಾವಣಾ ಪ್ರಚಾರ ನಡೆಸಲು ಮಂಗಳೂರಿಗೆ ಬಂದಿರುವ ನಟಿ ಶ್ರುತಿ

ಮೋದಿಗೆ ಮತ, ಮಹಿಳೆಯರಿಗೆ ಹಿತ
ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಶ್ರುತಿ ಅವರು ಮೋದಿಗೆ ಮತ, ಮಹಿಳೆಯರಿಗೆ ಹಿತ ಎಂಬ ಸಂದೇಶ ಸಾರಿದರು.

ಮಹಿಳಾ ಸಂರಕ್ಷಣೆ, ಸಬಲೀಕರಣ ಬಗ್ಗೆ ಶ್ರುತಿ
ಮಹಿಳಾ ಸಂರಕ್ಷಣೆ, ಸಬಲೀಕರಣ ಬಗ್ಗೆ ಹೆಚ್ಚಿನ ಒತ್ತುಕೊಟ್ಟು ಮಾತನಾಡಿದ ನಟಿ ಶ್ರುತಿ, ಮೋದಿ ಅವರು ಪ್ರಧಾನಿಯಾದರೆ ಮಾತ್ರ ಮಹಿಳಾ ಸಬಲೀಕರಣ ಸಾಧ್ಯ. ಸಮಾಜದಲ್ಲಿ ಮಹಿಳೆಯರಿಗೆ ಸೂಕ್ತ ಸ್ಥಾನಮಾನ ದೊರೆಕಬೇಕಾದರೆ ಬಿಜೆಪಿಗೆ ಮತ ಹಾಕಿ. ನಳೀನ್ ಕುಮಾರ್ ಅವರನ್ನು ಗೆಲ್ಲಿಸಿ. ಮೋದಿ ಪ್ರಧಾನಿಯಾಗುವುದೇ ನಮ್ಮೆಲ್ಲರ ಗುರಿ ಎಂದರು












Click it and Unblock the Notifications