ಡಿ.ವಿ.ಸದಾನಂದ ಗೌಡರಿಗೆ ಮಾತೃ ವಿಯೋಗ

ಮಂಗಳೂರು, ಅ. 11 : ಕೇಂದ್ರ ರೈಲ್ವೆ ಸಚಿವ ಡಿ.ವಿ.ಸದಾನಂದ ಗೌಡ ಅವರ ತಾಯಿ ವಿಧಿವಶರಾಗಿದ್ದಾರೆ. ಶನಿವಾರ ಬೆಳಗ್ಗೆ ಸುಳ್ಯದ ಸ್ವಗೃಹದಲ್ಲಿ ಕಮಲಾ ಅವರು ಮೃತಪಟ್ಟಿದ್ದು, ಇಂದು ಸಂಜೆ ಅವರ ಅಂತ್ಯಕ್ರಿಯೆ ನಡೆಯಲಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ದೇವರಗುಂಡದ ಸ್ವಗೃಹದಲ್ಲಿ ಕಮಲಾ (91) ಶನಿವಾರ ಮುಂಜಾನೆ 203ರ ಸುಮಾರಿಗೆ ಧಿವಶರಾಗಿದ್ದಾರೆ. ವಯೋಸಹಜ ಅನಾರೋಗ್ಯ ಸಮಸ್ಯೆಯಿಂದ ಅವರು ಬಳಲುತ್ತಿದ್ದರು. ದೇವರಗುಂಡ ಗ್ರಾಮದಲ್ಲಿ ಇಂದು ಸಂಜೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ವರ್ಗದವರು ಹೇಳಿದ್ದಾರೆ.

Sadananda Gowda

ಸದಾನಂದ ಗೌಡರು ಪತ್ನಿ ಡಾಟಿ ಅವರೊಂದಿಗೆ ದೇವರಗುಂಡಕ್ಕೆ ಆಗಾಗ ಆಗಮಿಸಿ ತಾಯಿಯ ಯೋಗಕ್ಷೇಮವನ್ನು ವಿಚಾರಿಸುತ್ತಿದ್ದರು. ಸದಾನಂದ ಗೌಡ ಅವರ ಸಹೋದರಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸದಸ್ಯೆ ಸಾವಿತ್ರಿ ಶಿವರಾಮ್ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ಸಂಜೆ ಮೃತಪಟ್ಟಿದ್ದರು. [ಸದಾನಂದ ಗೌಡ ಸಹೋದರಿ ಸಾವಿತ್ರಿ ನಿಧನ]

ಸದಾನಂದಗೌಡರು ಯಾವುದೇ ಸಾಧನೆ ಮಾಡಿದರೂ, ಊರಿಗೆ ತೆರಳಿ ಅಮ್ಮನ ಆಶೀರ್ವಾದ ಪಡೆಯುತ್ತಿದ್ದರು. ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಜಯಗಳಿಸಿ ಕೇಂದ್ರ ರೈಲ್ವೆ ಸಚಿವರಾದ ಬಳಿಕ ಅಮ್ಮನ ಆಶೀರ್ವಾದ ಪಡೆದಿದ್ದರು. ನವದೆಹಲಿಯಲ್ಲಿದ್ದ ಸದಾನಂದಗೌಡರು ಶನಿವಾರ ಬೆಳಗ್ಗೆ 11 ಗಂಟೆ ತಾಯಿಯ ಮನೆಗೆ ಆಗಮಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+