ಪುತ್ತೂರು: ಸೆಲ್ಫಿ ನೆಪದಲ್ಲಿ ಸಾನಿಯಾ ಅಯ್ಯರ್ ಕೈ ಹಿಡಿದು ಎಳೆದ ಅಭಿಮಾನಿ: ಧರ್ಮದೇಟು
ಪುತ್ತೂರಿನಲ್ಲಿ ಸೆಲ್ಫಿ ನೆಪದಲ್ಲಿ ಅಭಿಮಾನಿಯೋರ್ವ ಸಾನಿಯಾ ಅಯ್ಯರ್ ಅವರ ಕೈ ಹಿಡಿದು ಎಳೆದಿದ್ದು, ಸಾನಿಯಾ ಕೈ ಹಿಡಿದು ಎಳೆದ ಅಭಿಮಾನಿಗೆ ಯುವಕರು ಥಳಿಸಿದ್ದಾರೆ.
ಮಂಗಳೂರು, ಜನವರಿ, 29: ಸೆಲ್ಫಿ ನೆಪದಲ್ಲಿ ಅಭಿಮಾನಿಯೋರ್ವ ಸಾನಿಯಾ ಅಯ್ಯರ್ ಅವರ ಕೈ ಹಿಡಿದು ಎಳೆದ ಘಟನೆ ಪುತ್ತೂರಿನಲ್ಲಿ ನಡೆದಿದೆ.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರ ಗದ್ದೆಯಲ್ಲಿ ಮೂವತ್ತನೇ ವರ್ಷದ ಕೋಟಿಚೆನ್ನಯ್ಯ ಜೋಡುಕರೆ ಕಂಬಳ ಕೂಟ ನಡೆಯುತ್ತಿದ್ದು, ಶನಿವಾರ ರಾತ್ರಿ ವಿಶೇಷ ಅಹ್ವಾನಿತರಾಗಿ ಬಿಗ್ ಬಾಸ್ ಖ್ಯಾತಿಯ ಸಾನಿಯಾ ಅಯ್ಯರ್ ಭಾಗವಹಿಸಿದ್ದರು. ವೇದಿಕೆಯಲ್ಲಿ ಸಾನಿಯಾ ಐ ಲವ್ ಯೂ ಪುತ್ತೂರು ಎಂಬ ವಾಕ್ಯದೊಂದಿಗೆನೇ ಭಾಷಣ ಆರಂಭಿಸಿದ್ದರು.
ಸಾನಿಯಾ ಕೈ ಹಿಡಿದು ಎಳೆದ ಅಭಿಮಾನಿ
ಈ ವೇಳೆ ಅಭಿಮಾನಿಯೋರ್ವ ಭಾಷಣದುದಕ್ಕೂ ಸಾನಿಯಾ ಐ ಲವ್ ಯೂ ಎಂದು ಕೂಗುತ್ತಿದ್ದ. ಭಾಷಣ ಮುಗಿಸಿ ಕಾರ್ಯಕ್ರಮದಿಂದ ನಿರ್ಗಮಿಸಲು ವೇದಿಕೆಯಿಂದ ಕೆಳಗಿಳಿಯುತ್ತಿದ್ದ ವೇಳೆ ಅಭಿಮಾನಿ ಸೆಲ್ಫಿಗಾಗಿ ಸಾನಿಯಾ ಕೈ ಹಿಡಿದಿದ್ದಾನೆ. ಇದರಿಂದ ಮುಜುಗರಕೊಳ್ಳಗಾದ ಸಾನಿಯಾ ಸೆಲ್ಫಿಯನ್ನು ತಿರಸ್ಕರಿಸಿ ತೆರಳಿದ್ದಾರೆ.

ಮದ್ಯದ ನಶೆಯಲ್ಲಿ ಅಭಿಮಾನಿ ಕೃತ್ಯ
ಅಭಿಮಾನಿ ಮದ್ಯದ ನಶೆಯಲ್ಲಿ ಕೃತ್ಯ ಎಸಗಿದ್ದು, ಸಾನಿಯಾ ಭಾಷಣದುದ್ದಕ್ಕೂ ಆಭಾಸಗೊಳ್ಳುವಂತೆ ವರ್ತಿಸಿದ್ದ ಎಂದು ತಿಳಿದುಬಂದಿದೆ. ಅಲ್ಲದೇ ಈ ವ್ಯಕ್ತಿ ಜನರಿಗೆ ಕಿರಿಕಿರಿಯಾಗುವಷ್ಟು ತೊಂದರೆ ಮಾಡಿದ್ದಾನೆ. ನಂತರ ಸಾನಿಯಾ ತೆರಳುತ್ತಿದ್ದಂತೆಯೇ ಸ್ಥಳೀಯ ಯುವಕರು ಪಾನಮತ್ತ ಅಭಿಮಾನಿಗೆ ಧರ್ಮದೇಟು ನೀಡಿ ಕಂಬಳದಿಂದ ಹೊರಗೆ ಕಳುಹಿಸಿದ್ದಾರೆ. ಈ ಬಗ್ಗೆ ಪೊಲೀಸರಿಗೂ ಮಾಹಿತಿ ಲಭ್ಯವಾಗಿದೆ. ಆದರೆ ಯಾರೂ ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಕ್ರಮವಾಗಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನಾವಣೆ ಹೇಳಿದ್ದಾರೆ.

ತುಳುನಾಡಿನ ಸಂಸ್ಕೃತಿ ನಮಗೆ ಜೀವನ ಪಾಠ
ಅದಕ್ಕೂ ಮುನ್ನ ವೇದಿಕೆಯಲ್ಲಿ ಭಾಷಣ ಮಾಡಿದ ನಟಿ ಸಾನಿಯಾ ಅಯ್ಯರ್, ನನಗೆ ತುಳು ಬರುವುದಿಲ್ಲ. ಆದರೆ ನನಗೆ ತುಳು ಭಾಷೆ ಅಂದರೆ ತುಂಬಾ ಇಷ್ಟ. ಕಂಬಳ ಕೇವಲ ಸಾಂಸ್ಕೃತಿಕ ಕಲೆ ಅಥವಾ ಕ್ರೀಡೆ ಅಲ್ಲ. ಕಂಬಳ ಎನ್ನುವುದು ಜೀವನದ ಮೌಲ್ಯವಾಗಿದೆ. ತುಳುನಾಡಿನ ಸಂಸ್ಕೃತಿ ನಮಗೆ ಜೀವನ ಪಾಠ ಕಲಿಸಿಕೊಡುತ್ತದೆ. ಎಲ್ಲಾ ಕಲೆಗಳ ಹಿಂದೆ ಪಾಠಗಳಿವೆ ಎಂದು ಹೇಳಿದ್ದರು.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications