ಚುನಾವಣೆಗೆ ಮುನ್ನ ನಳಿನ್ ವಿರುದ್ದ ಕುಡ್ಲದಲ್ಲಿ ನಡೆದ ಸಂಚು!

ಮಂಗಳೂರು, ಮೇ 3: ಲೋಕಸಭಾ ಚುನಾವಣೆಗೆ ಎರಡು ದಿನ ಮುನ್ನ ತಮ್ಮದೇ ಪಕ್ಷದ ಮುಖಂಡರು ಷಡ್ಯಂತ್ರ ರೂಪಿಸಿದರು ಎಂದು ದಕ್ಷಿಣ ಕನ್ನಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಪೊಲೀಸ್ ಮೆಟ್ಟಲೇರಿರುವುದು ರಾಜ್ಯ ಬಿಜೆಪಿ ಘಟಕದಲ್ಲಿ ಹೊಸ ಸಂಚಲನ ಮೂಡಿಸಿದೆ.

ಸ್ಥಳೀಯ ನ್ಯಾಯವಾದಿ ಮತ್ತು ಪಕ್ಷದ ರಾಷ್ಟೀಯ ಕಾರ್ಯಕಾರಿಣಿ ಸದಸ್ಯರಾದ ಪಿ ಪಿ ಹೆಗ್ಡೆ ಅವರು ಚುನಾವಣೆಗೆ ಮುನ್ನ ತನ್ನ ವಿರುದ್ಧ ಪಿತೂರಿ ಮಾಡಿ ಮಾನಹಾನಿ ನಡೆಸಲು ಕಾರಣರಾದರು ಎನ್ನುವ ಅಂಶಗಳನ್ನೊಳಗೊಂಡ ದೂರನ್ನು ನಳಿನ್ ಕುಮಾರ್ ಕಟೀಲ್ ನಗರದ ಬಂದರು ಪೊಲೀಸ್ ಠಾಣೆಯಲ್ಲಿ ಸಲ್ಲಿಸಿದ್ದಾರೆ. ದೂರನ್ನು ಪರಿಶೀಲಿಸಿ ಯಾವ ರೀತಿಯ ಕ್ರಮವನ್ನು ತೆಗೆದುಕೊಳ್ಳಬಹುದು ಎನ್ನುವುದರ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಬಂದರು ಠಾಣೆಯ ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.

ಏನಿದು ಘಟನೆ?
ಚುನಾವಣೆಯ ಎರಡು ದಿನ ಮೊದಲು ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಅವರು ಯುವತಿಯೋರ್ವಳೊಂದಿಗೆ ಮಧ್ಯರಾತ್ರಿ ನಿರಂತರ ದೂರವಾಣಿ ಸಂಭಾಷಣೆ ನಡೆಸುತ್ತಿದ್ದಾರೆ ಎಂಬ ವದಂತಿಯನ್ನು ಹರಿಯಬಿಡಲಾಗಿತ್ತು. ಮತ್ತು ಈ ಬಗ್ಗೆ ಖಾಸಗಿ ವಾಹಿನಿಯೊಂದು ಸುದ್ದಿಯನ್ನೂ ಒಂದು ಬಾರಿ ಪ್ರಸಾರ ಮಾಡಿತ್ತು. (ನಳಿನ್ ಕುಮಾರ್ ಕಟೀಲ್ ಸಂದರ್ಶನ)

ಈ ಬಗ್ಗೆ ಸಾಮಾಜಿಕ ಹೋರಾಟಗಾರೊಬ್ಬರು ಎನ್ನಲಾಗುವ ಸುದತ್ತ ಜೈನ್ ಅವರು, ನಳಿನ್ ಕುಮಾರ್ ಕಟೀಲ್ ಮೇಲೆ ಆರೋಪ ಹೊರಿಸಿ, ನಳಿನ್ ಅವರು ಯುವತಿಯೋರ್ವಳಿಗೆ ಮೂರು ಸಾವಿರಕ್ಕೂ ಅಧಿಕ ಕರೆಗಳನನ್ನು ಮಾಡಿದ್ದಾರೆ. ಇದು ಅನೈತಿಕ ಸಂಪರ್ಕವಲ್ಲವೇ?' ಎಂದು ಆರೋಪಿಸಿದ್ದರು.

ಮುಂದೆ ಓದಿ..

ಮಾನಹಾನಿ, ತೇಜೋವಧೆ

ಮಾನಹಾನಿ, ತೇಜೋವಧೆ

ಈ ಆರೋಪ ಮಾಡಿವರ ವಿರುದ್ದ ನಳಿನ್ ಕುಮಾರ್ ಕಟೀಲ್ ಮಾನಹಾನಿ ಮತ್ತು ಖಾಸಗಿ ಬದುಕಿನ ತೇಜೋವಧೆ ಮಾಡಿದ ಆರೋಪವನ್ನು ಹೊರಿಸಿ ಬಂದರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಲ್ಲದೇ, ದೂರವಾಣಿ ಕರೆಗಳ ಮಾಹಿತಿಯನ್ನು ಸೋರಿಕೆ ಮಾಡಿದ ಹಿನ್ನಲೆಯಲ್ಲಿ ಭಾರ್ತಿ ಏರ್ ಟೆಲ್ ಕಂಪೆನಿಯ ವಿರುದ್ಧವೂ ದೂರು ದಾಖಲಿಸಿದ್ದರು.

ಸಂಘ ಪರಿವಾರದವರ ಷಡ್ಯಂತ್ರ

ಸಂಘ ಪರಿವಾರದವರ ಷಡ್ಯಂತ್ರ

ನಳಿನ್ ವಿರುದ್ದ ಷಡ್ಯಂತ್ರ ರೂಪಿಸಲು ಆರು ತಿಂಗಳಿನಿಂದ ಸಿದ್ದತೆ ನಡೆಸಲಾಗುತ್ತಿತ್ತು. ಬಿಜೆಪಿ ಮತ್ತು ಸಂಘ ಪರಿವಾರದ ಮುಖಂಡರು ವಿಪಕ್ಷದ ನಾಯಕರ ಜೊತೆ ಕೈಜೋಡಿಸಿ ಈ ತಂತ್ರ ರೂಪಿಸಿದ್ದರು. ಈ ಷಡ್ಯಂತ್ರಕ್ಕೆ ನ್ಯಾಯವಾದಿಗಳು ಐವತ್ತು ಲಕ್ಷ ರೂಪಾಯಿಯ ಡೀಲ್ ನಡೆಸಿದ್ದರು ಎಂದು ನಿಷ್ಠಾವಂತ ಬಿಜೆಪಿ ಕಾರ್ಯಕರ್ತರು ಈಗ ಆರೋಪ ಹೊರಿಸುತ್ತಿದ್ದಾರೆ.

ಪರಿವಾರದ ಉದ್ದೇಶ

ಪರಿವಾರದ ಉದ್ದೇಶ

ನಳಿನ್ ಬದಲು ಬಂಟ್ವಾಳದ ಬಿಜೆಪಿ ನಾಯಕರೊಬ್ಬರನ್ನು ಲೋಕಸಭಾ ಅಭ್ಯರ್ಥಿಯನ್ನಾಗಿ ಮಾಡಬೇಕೆಂದು ಜಿಲ್ಲೆಯ ಸಂಘ ಪರಿವಾರದ ಪ್ರಭಾವಿ ಮುಖಂಡರೊಬ್ಬರು ಬಯಸಿದ್ದರು. ಅದಕ್ಕಾಗಿ, ನಳಿನ್ ಅವರನ್ನು ಈ ಬಾರಿಯ ಚುನಾವಣೆಯಲ್ಲಿ ಸೋಲಿಸಿದರೆ ಮುಂಬರುವ ಚುನಾವಣೆಯ ಸಮಯದಲ್ಲಿ ಇವರನ್ನು ಕಣಕ್ಕೆ ಇಳಿಯದಂತೆ ನೋಡಿಕೊಳ್ಳುವುದು ಸಂಘ ಪರಿವಾರದ ಮುಖಂಡರ ಉದ್ದೇಶ ಎನ್ನುವುದು ಬಿಜೆಪಿ ಕಾರ್ಯಕರ್ತರ ಆರೋಪ.

ಮಧ್ಯವರ್ತಿ

ಮಧ್ಯವರ್ತಿ

ಬಿಜೆಪಿ ಮತ್ತು ಸಂಘ ಪರಿವಾರದ ಮುಖಂಡರ ಈ ಷಡ್ಯಂತ್ರಕ್ಕೆ ಮಂಗಳೂರಿನ ಶ್ರೀಖರ ಪ್ರಭು ಎನ್ನುವವರೂ ಸಹಾಯ ಹಸ್ತ ಚಾಚಿದ್ದರು. ಬಿಜೆಪಿ ಮತು ವಿಪಕ್ಷದ ಮುಖಂಡರಿಂದ ಹಣದ ಗಂಟನ್ನು ತೆಗೆಸಿಕೊಡುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು ಎನ್ನುವುದು ಕಾರ್ಯಕರ್ತರ ನೋವಿನ ಮಾತು.

ವಿಚಲಿತರಾದ ನಳಿನ್

ವಿಚಲಿತರಾದ ನಳಿನ್

ಪಕ್ಷದೊಳಗಿನ ಷಡ್ಯಂತ್ರದಿಂದಾಗಿ ನಳಿನ್ ಕುಮಾರ್ ಕಟೀಲ್ ತೀವ್ರ ವಿಚಲಿತರಾಗಿದ್ದಾರೆ. ದೇಶದೆಲ್ಲೆಡೆ ಮೋದಿ ಅಲೆ ಇದ್ದಾಗ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಲು ಪಕ್ಷದ, ಸಂಘ ಪರಿವಾರದ ಕೆಲ ನಾಯಕರೇ ಮುಂದಾಗಿರುವುದು ಬಿಜೆಪಿ. ಕಾರ್ಯಕರ್ತರನ್ನು ವಂಚಿಸಿದಂತಾಗಿದೆ. ಇದು ಸ್ವಾರ್ಥ ರಾಜಕಾರಣಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಬಿಜೆಪಿ ಕಾರ್ಯಕರ್ತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+