ಧರ್ಮಸ್ಥಳದಲ್ಲಿ ಪ್ರದರ್ಶನಗೊಂಡ ಸುಂದರವಾದ ಮಾದರಿ ಮನೆ
ಅಚ್ಚುಕಟ್ಟಾದ ಮನೆಯ ಸುಂದರ ವಿನ್ಯಾಸ. ಸುತ್ತಲೂ ಕೃಷಿ ಹಾಗೂ ಹೂದೋಟ. ಬದಲಿ ಇಂಧನ ವ್ಯವಸ್ಥೆಯ ಉಪಯೋಗ. ಸ್ವಚ್ಛತೆಗೆ ಪ್ರಾಮುಖ್ಯತೆ ನೀಡುತ್ತಿರುವ ಮನೆಯ ವಾತಾವರಣ... ಇದು ಯಾವುದೇ ನೈಜ ಮನೆಯಲ್ಲ; ಬದಲಾಗಿ ಮನೆಯ ಒಂದು ಮಾದರಿ.
ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಡೆದ ಲಕ್ಷದೀಪೋತ್ಸವದಲ್ಲಿ ದೀಪಾಲಂಕಾರ, ಉತ್ಸವ, ಧಾರ್ಮಿಕ ಆಚರಣೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ನಡುವೆ ಅಚ್ಚುಕಟ್ಟಾಗಿ ನಿಮಾಣಗೊಂಡಿರುವ ಮನೆಯ ಮಾದರಿಯೊಂದು ಎಲ್ಲರ ಗಮನಸೆಳೆಯಿತು.
ಈ ಮಾದರಿ ಮನೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಿರ್ಮಾಣಗೊಂಡಿದ್ದು, ಮನೆಯೆಂದರೆ ಲಕ್ಷದೀಪೋತ್ಸವದಲ್ಲಿ ನಿರ್ಮಿತವಾಗಿರುವ ಮಾದರಿ ಮನೆಯಂತಿರಬೇಕು ಎಂಬ ಸಂದೇಶ ಸಾರುತ್ತಿದೆ.
ಮಾದರಿ ಮನೆ ಹಲವಾರು ವೈಶಿಷ್ಟ್ಯತೆಗಳನ್ನು ಹೊಂದಿದೆ. ಸೌರಶಕ್ತಿಯನ್ನು ಮನೆಯಲ್ಲಿ ಯಾವೆಲ್ಲ ಕಾರ್ಯಗಳಿಗೆ ಬಳಸಬಹುದು ಹಾಗೂ ವಿದ್ಯುತ್‍ಗೆ ಬದಲಿ ವ್ಯವಸ್ಥೆಯಾಗಿ ಸೌರಶಕ್ತಿಯನ್ನು ಹೇಗೆ ಉಪಯೋಗಿಸಬಹುದು ಎಂಬ ಕುರಿತು ಮಾಹಿತಿ ನೀಡುತ್ತಿದೆ.

ಸೋಲಾರ್ ಲೈಟ್ ಅಳವಡಿಕೆ
ಮನೆಯಲ್ಲಿ ಸೋಲಾರ್ ಲೈಟ್ ಹಾಗೂ ಬಿಸಿ ನೀರಿಗಾಗಿ ಸೋಲಾರ್ ಅಳವಡಿಸಲಾಗಿದೆ. ದನದ ಹಾಲು ಕರೆಯುವ ಯಂತ್ರವೂ ವಿದ್ಯುತ್ ಬದಲು ಸೌರಶಕ್ತಿಯನ್ನೇ ಉಪಯೋಗಿಸುತ್ತದೆ. ಮನೆಯಲ್ಲಿ ಹೈನುಗಾರಿಕೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತಿದೆ. ಹಸುವಿನ ಗೊಬ್ಬರವನ್ನು ಕೃಷಿ ಹಾಗೂ ಗೋಬರ್ ಗ್ಯಾಸ್‍ಗೆ ಬಳಸಲಾಗುತ್ತಿದೆ. ಕೃಷಿಯಲ್ಲಿ ಕಡಿಮೆ ನೀರು ಬಳಸುವ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಲಾಗಿದೆ.

ಇಂಧನ ಉಳಿತಾಯ ಸೂತ್ರ
ಕಡಿಮೆ ಕಟ್ಟಿಗೆ ಉಪಯೋಗಿಸಿ ಅಡುಗೆ ಮಾಡವ ಒಲೆಯೂ ಈ ಮನೆಯಲ್ಲಿದೆ. ಸೌದೆ, ಬೆರಣಿ ಹಾಗೂ ಕೃಷಿ ತ್ಯಾಜ್ಯವನ್ನು ಉಪಯೋಗಿಸಿ ಅಡುಗೆ ಮಾಡಬಹುದು. ಇತರ ಒಲೆಗಳಿಗೆ ಹೋಲಿಸಿದರೆ ಈ ಒಲೆ ಕಡಿಮೆ ಹೊಗೆ ಬಿಡುತ್ತದೆ. ಈ ಒಲೆಯಿಂದ ಸಮಯ ಹಾಗೂ ಇಂಧನದ ಉಳಿತಾಯ ಸಾಧ್ಯವಿದೆ.

ಹೂ ಗಿಡಗಳಿಂದ ಆವೃತವಾದ ಮನೆ
ಮನೆಯ ಮಾದರಿಯಲ್ಲಿ ತುಳಸಿಕಟ್ಟೆ, ಬಾವಿ, ಜೇನು ಸಾಕಣಿಕಾ ಯಂತ್ರ ಹಾಗೂ ಶೌಚಾಲಯದ ಮಾದರಿಯೂ ಇದೆ. ಅಲಂಕಾರಕ್ಕಾಗಿ ನೈಜ ಹೂವಿನ ಗಿಡಗಳನ್ನು ಬಳಸಲಾಗಿದೆ. ವಿವಿಧ ರೀತಿಯ ಕೃಷಿಯನ್ನು ಬಿಂಬಿಸುವ ಸಸಿಗಳಿವೆ.

ಕಡಿಮೆ ಖರ್ಚಿನಲ್ಲಿ ಮಾದರಿ ಮನೆ
ಮರ, ಬಿದಿರು ಹಾಗೂ ಸಿಮೆಂಟ್ ಉಪಯೋಗಿಸಿ ಈ ಮಾದರಿ ಮನೆಯನ್ನು ನಿರ್ಮಿಸಲಾಗಿದೆ. ಧರ್ಮಸ್ಥಳದ ಲಕ್ಷದೀಪೋತ್ಸವಕ್ಕೆಂದೇ ಈ ಮಾದರಿ ಮನೆಯನ್ನು ನಿರ್ಮಿಸಿದ್ದು ವಿಶೇಷವಾಗಿದೆ. ಮನೆಯೆಂದರೆ ಕೇವಲ ಐಷಾರಮಿ ಬಂಗಲೆಗಳಲ್ಲ; ಬದಲಾಗಿ ಕಡಿಮೆ ಖರ್ಚಿನಲ್ಲಿ ಇಂತಹ ಮಾದರಿ ಮನೆಯ ನಿರ್ಮಾಣವನ್ನು ಮಾಡಬಹುದು ಎಂದು ಸಾರುತ್ತಿದೆ.
-
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
Sri Rama Navami 2026: ಶ್ರೀ ರಾಮನವಮಿ; ಧರ್ಮದ ಜಯದ ದಿವ್ಯ ಸಂದೇಶ












Click it and Unblock the Notifications