ಫ್ಯಾಷನ್ ಶೋ: ವಧುವಿನಂತೆ ಸಿಂಗರಿಸಿಕೊಂಡು ಹೆಜ್ಜೆ ಹಾಕಿದ ಮಂಗಳೂರಿನ ಚೆಲುವೆಯರು

ಮಂಗಳೂರು, ಫೆಬ್ರವರಿ 06:ಹಿಮಾಲಯದಿಂದ ದಕ್ಷಿಣದ ಕನ್ಯಾಕುಮಾರಿವರೆಗೆ ಭಾರತ ಅನನ್ಯ ಭೌಗೋಳಿಕ ರಚನೆಯಿಂದ ಕೂಡಿದೆ. ಇಲ್ಲಿಯ ವೈವಿಧ್ಯಮಯ ಜನ ಸಮುದಾಯ, ವಿಭಿನ್ನ ಸಂಪ್ರದಾಯಗಳು ಮತ್ತು ಆಚರಣೆಗಳು, ಸಂಸ್ಕೃತಿ, ಪ್ರಾಚೀನ ಪರಂಪರೆ ಪ್ರತಿಯೊಬ್ಬರ ಕಣ್ಮನ ಸೆಳೆಯುತ್ತವೆ.

ಸಿಂಧೂ ಕಣಿವೆ ನಾಗರಿಕತೆಯಿಂದ ಆರಂಭಗೊಂಡ ಭಾರತೀಯ ಸಂಸ್ಕೃತಿ ವೇದಗಳ ಕಾಲದಲ್ಲಿ ಅಸಾಧಾರಣ ವಿಕಸನ ಕಂಡಿತು. ಇದಾದ ನಂತರ ಯುರೋಪಿಯನ್ನರ ವಸಾಹತು ಆಳ್ವಿಕೆ ಸಂದರ್ಭದಲ್ಲಿ ಈ ವಿಕಸನ ಮತ್ತಷ್ಟು ವೈವಿಧ್ಯಮಯವಾಯಿತು.

ಇವೆಲ್ಲವೂ ಇಲ್ಲಿನ ಉಡುಗೆ ತೊಡಿಗೆಗಳ ಮೇಲೂ ಪ್ರಭಾವ ಬೀರಿತು. ಭಾರತದ ಉತ್ತರದಿಂದ ದಕ್ಷಿಣದವರೆಗೂ ಪೂರ್ವದಿಂದ ಪಶ್ಚಿಮದವರೆಗೂ ಜನಜೀವನ, ಆಹಾರ ಪದ್ಧತಿ , ಸಂಪ್ರದಾಯ ಆಚರಣೆಗಳು ಎಲ್ಲವೂ ಭಿನ್ನ. ಅದರಲ್ಲೂ ವಧುವಿನ ಶೃಂಗಾರ ಸ್ವಲ್ಪ ಭಿನ್ನತೆಯಿಂದಲೇ ಅಕರ್ಷಿಸುತ್ತದೆ.

ಅಂದಹಾಗೆ ದೇಶದ ವಿಭಿನ್ನ ಸಂಸ್ಕೃತಿ , ಸಮುದಾಯದ ವಧುವನ್ನು ಒಂದೆಡೆ ನೋಡುವ ಅವಕಾಶ ಮಂಗಳೂರಿಗರಿಗೆ ದೊರೆತಿತ್ತು. ಹೌದು, ಮಂಗಳೂರು ಲಯನ್ಸ್ ಕ್ಲಬ್ ಹಾಗೂ ಚೇತನಾ ಬ್ಯೂಟಿ ಅಕಾಡೆಮಿ ಸಹಯೋಗದಲ್ಲಿ ಅತ್ಯಂತ ಆಕರ್ಷಣೀಯ ಭಾರತೀಯ ವಧುವಿನ ಶೃಂಗಾರ ವಿನ್ಯಾಸ ಫ್ಯಾಷನ್ ಶೋ ಮಂಗಳೂರಿನಲ್ಲಿ ಆಯೋಜಿಸಲಾಗಿತ್ತು.

 ವಿಭಿನ್ನ ಸಂಸ್ಕೃತಿ ಪರಿಚಯ

ವಿಭಿನ್ನ ಸಂಸ್ಕೃತಿ ಪರಿಚಯ

ದೇಶದ ವಿವಿಧ ರಾಜ್ಯಗಳ, ಜಾತಿ, ಧರ್ಮದ ವಧುವಿನ ವಸ್ತ್ರ ಹಾಗೂ ವರ್ಣಾಲಂಕಾರದ ಪೋಷಾಕುಗಳನ್ನು ಧರಿಸಿದ ಮಾಡೆಲ್ ಗಳು ರಾಂಪ್ ನಲ್ಲಿ ಹೆಜ್ಜೆ ಹಾಕುವ ಮೂಲಕ ದೇಶದ ವಿಭಿನ್ನ ಸಂಸ್ಕೃತಿಯನ್ನು ಪರಿಚಯಿಸಿದರು.

 ನೆರೆದವರನ್ನು ಸೆಳೆದ ಫ್ಯಾಷನ್ ವಾಕ್

ನೆರೆದವರನ್ನು ಸೆಳೆದ ಫ್ಯಾಷನ್ ವಾಕ್

ಮರಾಠಿ, ಬೆಂಗಾಲಿ, ಕ್ರಿಶ್ಚಿಯನ್, ಕೊಂಕಣಿ, ಕೋಲಿ, ಗುಜರಾತಿ, ರಾಜಸ್ಥಾನಿ, ಬಿಹಾರಿ ಹಾಗೂ ಸ್ಥಳೀಯ ತುಳುನಾಡಿನ ವಧುಗಳ ಶೃಂಗಾರ ವಿನ್ಯಾಸ ಮಾಡಿಕೊಂಡ ಮಾಡೆಲ್ ಗಳ ಫ್ಯಾಷನ್ ವಾಕ್ ನೆರೆದವರನ್ನು ಸೆಳೆಯಿತು.

 ಶಾರದಾ ಮಾತೆಯಂತೆಯೇ ಅಲಂಕಾರ

ಶಾರದಾ ಮಾತೆಯಂತೆಯೇ ಅಲಂಕಾರ

ದಸರಾ ಹಬ್ಬದ ದಿನಗಳಲ್ಲಿ ದೇಶ ವಿದೇಶದಲ್ಲಿ ಪ್ರಸಿದ್ಧಿ ಪಡೆದ ಮಂಗಳೂರಿನ ಕುದ್ರೋಳಿ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲ್ಪಡುವ ಶಾರದಾ ಮಾತೆಯಂತೆಯೇ ಅಲಂಕಾರ ಮಾಡಿಕೊಂಡು ರಾಂಪ್ ಮೇಲೆ ನಡೆದ ಮಾಡೆಲ್ ಒಬ್ಬರಿಗೆ ಭಾರೀ ಕರತಾಟನದ ಮೆಚ್ಚುಗೆಯೂ ದೊರೆಯಿತು.

 ಜನ ಮೆಚ್ಚುಗೆ ಪಡೆಯುವಲ್ಲಿ ಯಶಸ್ವಿ

ಜನ ಮೆಚ್ಚುಗೆ ಪಡೆಯುವಲ್ಲಿ ಯಶಸ್ವಿ

ಒಟ್ಟಿನಲ್ಲಿ ಈ ಫ್ಯಾಷನ್ ಶೋ ನಲ್ಲಿ ಭಾಗವಹಿಸಿದ್ದ ಮಾಡೆಲ್ ಗಳು ನೋಡುಗರ ಹುಬ್ಬೇರುವಂತೆ ಮಾಡಿದ್ದಲ್ಲದೇ, ಜನ ಮೆಚ್ಚುಗೆ ಪಡೆಯುವಲ್ಲಿ ಯಶಸ್ವಿಯಾದರು. ಮಾಡೆಲ್ ಗಳು ಹಸನ್ಮುಖಿಗಳಾಗಿ, ಅತ್ಯಂತ ಲವಲವಿಕೆಯಿಂದ ಈ ಶೋ ನಲ್ಲಿ ಭಾಗವಹಿಸಿದ್ದು ಕಂಡುಬಂದಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+