• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬರಬಹುದು ನಂಗು... ನಿಂಗು… ಡೆಂಗ್ಯೂ- ವೈರಲ್ ಆಯ್ತು ಪಾಪ್ ಶೈಲಿ ಹಾಡು

|

ಮಂಗಳೂರು, ಜುಲೈ 27: ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚಾಗುತ್ತಲೇ ಇದೆ. ಡೆಂಗ್ಯೂ ಜ್ವರದಿಂದ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆಯೂ ಬೆಳೆಯುತ್ತಿದೆ. ಡೆಂಗ್ಯೂ ನಿರ್ಮೂಲನೆಗೆ ಜಿಲ್ಲಾಡಳಿತ ಜಾಗೃತಿ ಅಭಿಯಾನವನ್ನೂ ಆರಂಭಿಸಿದೆ.

ಈ ನಡುವೆಯೇ ಡೆಂಗ್ಯೂ ಬಗ್ಗೆ ಜಾಗೃತಿ ಮೂಡಿಸುವ ಪಾಪ್ ಶೈಲಿಯ ಹಾಡೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತುಳು- ಕನ್ನಡ ಸಾಹಿತ್ಯ ಹೊಂದಿರುವ ಪಾಪ್ ಶೈಲಿಯ ಹಾಡು ಕಳೆದೆರಡು ದಿನಗಳಿಂದ ಮೊಬೈಲ್ ನಲ್ಲಿ ಹರಿದಾಡುತ್ತಿದೆ.

 ಡೆಂಗ್ಯೂ ನಿಯಂತ್ರಣಕ್ಕೆ ಮಂಗಳೂರಿನಲ್ಲಿ ಡೆಂಗ್ಯೂ ಡ್ರೈವ್ ಡೇ ಡೆಂಗ್ಯೂ ನಿಯಂತ್ರಣಕ್ಕೆ ಮಂಗಳೂರಿನಲ್ಲಿ ಡೆಂಗ್ಯೂ ಡ್ರೈವ್ ಡೇ

ಡೆಂಗ್ಯೂ ...ಡೆಂಗ್ಯೂ.....ಡೆಂಗ್ಯೂ ಬರಬಹುದು ನಂಗು..ನಿಂಗು... ಡೆಂಗ್ಯೂ ಗ್ ಇಜ್ಜಿ ಬೇಧ ಭಾವ...ಡೆಂಗ್ಯೂ ಬತ್ತಂಡ್ ಈ ಪೋವಾ... ಎಂದು ಆರಂಭವಾಗುವ ಈ ಹಾಡು ಹಾಸ್ಯದ ಜೊತೆ ಜೊತೆಗೇ ಡೆಂಗ್ಯೂ ಬಗ್ಗೆ ಜಾಗೃತಿ ಮೂಡಿಸುವಲ್ಲೂ ಪರಿಣಾಮಕಾರಿಯಾಗಿದೆ. ಮಂಗಳೂರಿನ ಕಲಾವಿದ ವಿಸ್ಮಯ ವಿನಾಯಕ್ ಈ ಹಾಡಿಗೆ ಸಾಹಿತ್ಯ ರಚಿಸಿದ್ದು, ಅವರದ್ದೇ ಧ್ವನಿ ಈ ಹಾಡಿನಲ್ಲಿದೆ. ಆರ್.ಜೆ.ಅರ್ಪಿತ್ ಅವರೂ ಜತೆಯಾಗಿದ್ದಾರೆ.

ಡೆಂಗ್ಯೂ ಕುರಿತು ಜಾಗೃತಿ ಮೂಡಿಸುವ ಕೆಲಸ 1 ನಿಮಿಷ 15 ಸೆಕೆಂಡ್‌ನ ಈ ಹಾಡಿನಲ್ಲಿ ನಡೆದಿದೆ. ನಿಂತ ನೀರಿನಲ್ಲಿ ಸೊಳ್ಳೆ ಉತ್ಪತ್ತಿಯಾಗುತ್ತದೆ. ಆದ್ದರಿಂದ ಮನೆ ಅಕ್ಕಪಕ್ಕ ಎಲ್ಲೂ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ನೀರು ನಿಂತಿರುವುದು ಕಂಡುಬಂದರೆ ಅದನ್ನು ಖಾಲಿ ಮಾಡಬೇಕು. ಇಲ್ಲವಾದಲ್ಲಿ ಸೊಳ್ಳೆ ಕಚ್ಚಿ ಸಾವು ಖಚಿತ ಎಂದೂ ಎಚ್ಚರಿಕೆ ನೀಡಲಾಗಿದೆ.

English summary
Mangaluru artist Vismaya Vinayak's pop song on dengue awareness is viral in social media. Tulu -Kannada lyrics Pop style song has been circulating on mobile for the past two days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X