ಪಂಚಭೂತಗಳಲ್ಲಿ ಲೀನರಾದ ದೀಪಕ್ ರಾವ್...ಅಮರ್ ರಹೇ…
ಮಂಗಳೂರು, ಜನವರಿ 04: ಕಾಟಪಳ್ಳದಲ್ಲಿ ಹತ್ಯೆಯಾದ ದೀಪಕ್ ರಾವ್ ಅವರ ಅಂತ್ಯಕ್ರಿಯೆ ಜನತಾ ಕಾಲೋನಿ ರುದ್ರಭೂಮಿಯಲ್ಲಿ ಶಿವಾಜಿ ಕ್ಷತ್ರಿಯ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಿತು. ದೀಪಕ್ ಚಿತೆಗೆ ಸಹೋದರ ಅಗ್ನಿ ಸ್ಪರ್ಶ ಮಾಡಿದರು. ಈ ಮೂಲಕ ದೀಪಕ್ ಪಂಚಭೂತಗಳಲ್ಲಿ ಲೀನರಾದರು.
ಈ ವೇಳೆ ನೆರೆದಿದ್ದ ಸಾವಿರಾರು ಜನರು ದೀಪಕ್ ರಾವ ಅಮರ್ ಹೇ ಎಂದು ಜೈಕಾರ ಕೂಗಿ ಅಂತಿಮ ದರ್ಶನ ಪಡೆದರು.
ಮಂಗಳೂರು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ಕಾಟಿಪಳ್ಳದಲ್ಲಿರುವ ಕೊಲೆಯಾದ ದೀಪಕ್ ರಾವ್ ಅವರ ಮನೆಗೆ ಗುರುವಾರ ಭೇಟಿ ನೀಡಿ 10 ಲಕ್ಷ ರು, ಪರಿಹಾರ ನೀಡುವುದಾಗಿ ಭರವಸೆ ನೀಡಿದರು.
ವಿ ಎಚ್ ಪಿ ಮುಖಂಡ ಗೋಪಾಲ್ ಜೀ ಅವರು ದೀಪಕ್ ಮನೆ ಭೇಟಿ ನೀಡಿ ಕುಟುಂಬಸ್ಥರನ್ನು ಹಾಗೂ ಪ್ರತಿಭಟನಾಕಾರರನ್ನು ಮನವೊಲಿಸಿದರು. ಗೋಪಾಲ್ ಜೀ ಮಾತಿಗೆ ಒಪ್ಪಿದ ಪ್ರತಿಭಟನಾಕಾರರು ಹಾಗೂ ಕುಟುಂಬಸ್ಥರು ಅಂತ್ಯಕ್ರಿಯೆಗೆ ಒಪ್ಪಿಕೊಂಡರು.
ಹಾಗೂ ದೀಪಕ್ ಶವಯಾತ್ರೆ ನಡೆಸಲು ಜಿಲ್ಲಾಧಿಕಾರಿ ಸೆಂಥಿಲ್ ಅವಕಾಶ ನೀಡಿದ್ದು. ಕಾಟಿಪಳ್ಳದ ನಿವಾಸದಿಂದ ಅಂತಿಮಯಾತ್ರೆ ಆರಂಭವಾಗಿದ್ದು, ಜನತಾ ಕಾಲೋನಿಯಲ್ಲಿರುವ ಹಿಂದೂ ರುದ್ರಭೂಮಿಯತ್ತ ಸಾಗಿದೆ. ನಂತರ ಶಿವಾಜಿ ಕ್ಷತ್ರಿಯ ವಿಧಿ-ವಿಧಾನದಂತೆ ದೀಪಕ್ ಅಂತ್ಯಕ್ರಿಯೆ ನಡೆಯಲಿದೆ.
ಮಂಗಳೂರಲ್ಲಿ ದೀಪಕ್ ಹತ್ಯೆ: ಚಿತ್ರಗಳಲ್ಲಿ ಪ್ರಕ್ಷುಬ್ಧ ಕರಾವಳಿ

ಅಂತಿಮಯಾತ್ರೆಯಲ್ಲಿ ಸಾವಿರಾರು ಜನರು ಭಾಗಿಯಾಗಿದ್ದು, ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಮುಂಜಾಗ್ರತೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.












Click it and Unblock the Notifications