ಕುದ್ರೋಳಿ ದೇವಾಲಯದಲ್ಲಿ ದಸರಾ ಸಂಭ್ರಮ
ಮಂಗಳೂರು, ಸೆ. 25 : ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ದಸರಾ ಮಹೋತ್ಸವದ ಸಂಭ್ರಮ ಆರಂಭಗೊಂಡಿದೆ. ನವದುರ್ಗೆಯರ ಮೂರ್ತಿಗಳನ್ನು ದೇವಾಲಯದ ಆವರಣದಲ್ಲಿ ಪ್ರತಿಷ್ಠಾಪಿಸಲಾಗಿದ್ದು, ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಸರಾಕ್ಕೆ ಚಾಲನೆ ನೀಡಲಿದ್ದಾರೆ.
ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಸೆ.25ರಿಂದ ಅ.5ರ ತನಕ 2014ರ ದಸರಾ ಮಹೋತ್ಸವ ನಡೆಯಲಿದೆ. ಗುರುವಾರ ಬೆಳಗ್ಗೆ ವಿವಿಧ ವೇಷ ಭೂಷಣಗಳ ಭವ್ಯ ಮೆರವಣಿಗೆಯಲ್ಲಿ ಶಾರದಾ ಮಾತೆ ಹಾಗೂ ನವದುರ್ಗೆಯರ ಮೂರ್ತಿಗಳನ್ನು ತಂದು ದೇವಾಲಯದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. [ಮಂಗಳೂರು ದಸರಾ, ಸಿಎಂಗೆ ಆಹ್ವಾನ]
ಸೆ.27ರ ಶನಿವಾರ ಸಂಜೆ 6.30ಕ್ಕೆ ಸಿಎಂ ಸಿದ್ದರಾಮಯ್ಯ ದಸರಾವನ್ನು ಉದ್ಘಾಟಿಸಲಿದ್ದು, ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ಸಚಿವ ಜನಾರ್ದನ ಪೂಜಾರಿ ವಹಿಸಲಿದ್ದಾರೆ. ಸೆ.25ರಿಂದ ಅ.3ರವರೆಗೆ ಪ್ರತಿದಿನ ಕುದ್ರೋಳಿ ಸಂತೋಷಿ ಕಲಾ ಮಂಟಪದಲ್ಲಿ ನಾಡಿನ ಹೆಸರಾಂತ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಕುದ್ರೋಳಿ ದೇವಾಲಯದ ಚಿತ್ರಗಳು [ಚಿತ್ರಗಳು : ಐಸಾಕ್ ರಿರ್ಚಡ್ ಮಂಗಳೂರು]

ಮಂಗಳೂರು ದಸರಾ ಆರಂಭ
ಪುರಾಣ ಪ್ರಸಿದ್ಧ ಕುದ್ರೋಳಿ ಗೋಕರ್ಣನಾಥೇಶ್ವರ ದೇವಾಲಯದಲ್ಲಿ 2014ರ ದಸರಾ ಆರಂಭಗೊಂಡಿದೆ. ಸೆ.25ರಿಂದ ಅ.5ರವೆರೆಗೆ ಮಂಗಳೂರು ದಸರಾ ನಡೆಯಲಿದೆ.

ಮುಖ್ಯಮಂತ್ರಿಗಳಿಂದ ಉದ್ಘಾಟನೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಸಂಜೆ 6.30ಕ್ಕೆ ದಸರಾವನ್ನು ಉದ್ಘಾಟಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ಸಚಿವ ಜನಾರ್ದನ ಪೂಜಾರಿ ವಹಿಸಲಿದ್ದಾರೆ.

ನವದುರ್ಗೆಯರ ಮೂರ್ತಿ ಪ್ರತಿಷ್ಠಾಪನೆ
ಗುರುವಾರ ನವದುರ್ಗೆಯ ಮೂರ್ತಿ ಪ್ರತಿಷ್ಠಾಪನೆ ಕಾರ್ಯ ಕುದ್ರೋಳಿ ದೇವಾಲಯದಲ್ಲಿ ನಡೆಯಿತು. ವಿವಿಧ ವೇಷಧಾರಿಗಳು ನವದುರ್ಗೆಯರ ಮೂರ್ತಿಗಳ ಭವ್ಯ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಅ.4ರಂದು ಭವ್ಯ ಮೆರವಣಿಗೆ
ಅ.4ರಂದು ಸಂಜೆ 4ಗಂಟೆಗೆ ಕುದ್ರೋಳಿ ಕ್ಷೇತ್ರದಿಂದ ಶಾರದಾ ಮಾತೆ ಹಾಗೂ ನವದುರ್ಗೆಯರ ಮೂರ್ತಿಗಳನ್ನೊಳಗೊಂಡ '2014 ಮಂಗಳೂರು ದಸರಾ'ದ ಬೃಹತ್ ಮೆರವಣಿಗೆ ಬಿ.ಜನಾರ್ದನ ಪೂಜಾರಿ ನೇತೃತ್ವದಲ್ಲಿ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮಗಳು
ಸೆ.25ರ ಗುರುವಾರದಿಂದ ಅ.3ರವರೆಗೆ ಪ್ರತಿದಿನ ಕುದ್ರೋಳಿ ಸಂತೋಷಿ ಕಲಾ ಮಂಟಪದಲ್ಲಿ ನಾಡಿನ ಹೆಸರಾಂತ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.












Click it and Unblock the Notifications