ಜನಾರ್ಧನ ಪೂಜಾರಿ ವಿರುದ್ಧ ತಿರುಗಿಬಿದ್ದ ದಕ್ಷಿಣ ಕನ್ನಡ ಮುಸ್ಲಿಂ ಒಕ್ಕೂಟ
Recommended Video

ಮಂಗಳೂರು, ಡಿಸೆಂಬರ್ 03: ಶ್ರೀ ರಾಮ ಮಂದಿರ ನಿರ್ಮಾಣದ ಕುರಿತು ಕಾಂಗ್ರೆಸ್ ಹಿರಿಯ ಮುಖಂಡ ಬಿ. ಜನಾರ್ಧನ ಪೂಜಾರಿ ನೀಡಿದ ಹೇಳಿಕೆ ಬಗ್ಗೆ ಭಾರೀ ವಿರೋಧ ವ್ಯಕ್ತವಾಗುತ್ತಿದ್ದು, ಕಾಂಗ್ರೆಸ್ ವಿರುದ್ಧ ಅಲ್ಪಸಂಖ್ಯಾತರು ತಿರುಗಿ ಬೀಳುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.
ಜನಾರ್ಧನ ಪೂಜಾರಿ ಅವರ ಹೇಳಿಕೆಯನ್ನು ದಕ್ಷಿಣ ಕನ್ನಡ ಮುಸ್ಲಿಂ ಒಕ್ಕೂಟದ ಅಧಕ್ಷ ಕೆ ಅಶ್ರಫ್ ವಿರೋಧಿಸಿದ್ದಾರೆ.
ಅಯೋಧ್ಯೆಯ ಬಾಬ್ರಿಮಸೀದಿ ಮತ್ತು ರಾಮ ಜನ್ಮ ಭೂಮಿ ವಿವಾದಿತ ವ್ಯಾಜ್ಯ ಸುಪ್ರೀಂ ಕೋರ್ಟ್ ನಲ್ಲಿ ಇತ್ಯರ್ಥಕ್ಕೆ ಬಾಕಿಯಿರುವ ಈ ಸಂದರ್ಭದಲ್ಲಿ ಜನಾರ್ಧನ ಪೂಜಾರಿ ಈ ರೀತಿಯ ಹೇಳಿಕೆ ನೀಡಿ ಒಂದು ನಿರ್ಧಿಷ್ಟ ಸಮುದಾಯದ ವಿರುದ್ಧ ಮತ್ತು ಇನ್ನೊಂದು ಸಮುದಾಯದ ಪರ ಮಾತನಾಡಿದ್ದಾರೆ ಎಂದು ಅಶ್ರಫ್ ಅಕ್ರೋಶ ವ್ಯಕ್ತಪಡಿಸಿದ್ದಾರೆ.

ನಿರಂತರವಾಗಿ ದಶಕಗಳಿಂದ ಚುನಾವಣೆಯಲ್ಲಿ ಬೆಂಬಲಿಸುತ್ತಾ ಬಂದಿರುವ ಒಂದು ನಿಷ್ಟಾವಂತ ಸಮುದಾಯದ ಧಾರ್ಮಿಕ ಭಾವನೆ ಮತ್ತು ನಂಬಿಕೆಗೆ ಪೂಜಾರಿ ಅವರು ತೀವ್ರ ಘಾಸಿ ಉಂಟು ಮಾಡಿದ್ದಾರೆ.
ಹಿರಿಯ ರಾಜಕೀಯ ನಾಯಕರಾಗಿ ಅವರ ನಡೆ ಸಂಶಯಕ್ಕೆ ಎಡೆಯಾಗಿದ್ದು, ಪಕ್ಷದ ಸಿದ್ಧಾಂತಕ್ಕೆ ಹಾನಿಯಾಗುವುದರಲ್ಲಿ ಸಂಶಯವಿಲ್ಲ. ಮುಸ್ಲಿಂ ಅಲ್ಪ ಸಂಖ್ಯಾತ ಮತದಾರರು ಈ ರೀತಿಯ ಧ್ವಂದ ನಿಲುವು ಹೊಂದಿದ ನಾಯಕರ ಮೇಲೆ ವಿಶ್ವಾಸ ಕಳೆದುಕೊಳ್ಳುವ ಕಾಲ ದೂರವಿಲ್ಲ.
ಅಷ್ಟೇ ಅಲ್ಲ, ಪೂಜಾರಿಯವರ ಈ ದ್ವಂದ್ವ ನಿಲುವಿನ ಬಗ್ಗೆ ಜಿಲ್ಲೆ ಮತ್ತು ರಾಜ್ಯ ಮುಸ್ಲಿಂ ಅಲ್ಪ ಸಂಖ್ಯಾತ ಕಾಂಗ್ರೆಸ್ ನಾಯಕರು ಮೌನ ಮುರಿದು ತಕ್ಷಣ ಪ್ರತಿಕ್ರಿಯಿಸಲಿ ಎಂದು ಒತ್ತಾಯಿಸಿದ್ದಾರೆ.












Click it and Unblock the Notifications