ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಳ್ಳಾಲ; 40 ವಿದ್ಯಾರ್ಥಿಗಳಿಗೆ ಕೋವಿಡ್, ಕಾಲೇಜಿಗೆ ಬೀಗ

|
Google Oneindia Kannada News

ಮಂಗಳೂರು, ಫೆಬ್ರವರಿ 03: ದಕ್ಷಿಣ ಕನ್ನಡದ ಉಳ್ಳಾಲದ ರಾಣಿ ಅಬ್ಬಕ್ಕ ವೃತ್ತದ ಸಮೀಪ ಇರುವ ನರ್ಸಿಂಗ್ ಕಾಲೇಜನ್ನು ಸೀಲ್ ಡೌನ್ ಮಾಡಲಾಗಿದೆ. ಕಾಲೇಜು ಆರಂಭವಾದ ಬಳಿಕ ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ನಡೆಸಿದಾಗ 40 ವಿದ್ಯಾರ್ಥಿಗಳಿಗೆ ಸೋಂಕು ಇರುವುದು ಖಚಿತವಾಗಿದೆ.

ಉಳ್ಳಾಲ ನಗರಸಭೆಯ ಅಧಿಕಾರಿಗಳು ಆಸ್ಪತ್ರೆ ಮತ್ತು ಕಾಲೇಜನ್ನು ಸೀಲ್ ಡೌನ್ ಮಾಡಲು ಬುಧವಾರ ಆದೇಶ ನೀಡಿದ್ದಾರೆ. ಫೆಬ್ರವರಿ 19ರ ತನಕ ಕಾಲೇಜನ್ನು ಸೀಲ್ ಡೌನ್ ಮಾಡಲಾಗುತ್ತದೆ. ಕಾಲೇಜಿನಲ್ಲಿ ಕೇರಳ ಮೂಲದ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಕೇಂದ್ರ ಬಜೆಟ್ 2021; ಬರಲಿದೆ ಮತ್ತಷ್ಟು ಕೋವಿಡ್ ಲಸಿಕೆ ಕೇಂದ್ರ ಬಜೆಟ್ 2021; ಬರಲಿದೆ ಮತ್ತಷ್ಟು ಕೋವಿಡ್ ಲಸಿಕೆ

ಖಾಸಗಿ ಕಾಲೇಜಿಗೆ ಉಳ್ಳಾಲ ನಗರ ಸಭೆ ಆಯುಕ್ತ ರಾಯಪ್ಪ ಭೇಟಿ ನೀಡಿದರು. ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ಕ್ವಾರಂಟೈನ್ ಮಾಡಿ, ಚಿಕಿತ್ಸೆ ನೀಡಲು ತೀರ್ಮಾನಿಸಲಾಗಿದೆ. ಕಾಲೇಜು ಆರಂಭದ ಬಳಿಕ ಕೇರಳದಿಂದ ವಿದ್ಯಾರ್ಥಿಗಳು ಆಗಮಿಸಿದ್ದರು.

ಐದು ರಾಜ್ಯಗಳಲ್ಲಿ 5,000 ಡೋಸ್ ಕೋವಿಡ್ ಲಸಿಕೆ ವ್ಯರ್ಥಐದು ರಾಜ್ಯಗಳಲ್ಲಿ 5,000 ಡೋಸ್ ಕೋವಿಡ್ ಲಸಿಕೆ ವ್ಯರ್ಥ

COVID Positive For 40 Students Nursing College Seal Down

ಲಾಕ್ ಡೌನ್ ಅವಧಿಯಲ್ಲಿ ಕಾಲೇಜನ್ನು ಬಂದ್ ಮಾಡಲಾಗಿತ್ತು. ಈಗ ಪುನಃ ಕಾಲೇಜು ಆರಂಭಿಸಲಾಗಿದ್ದು, ಪ್ರತಿ ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ. ಈಗ ಸೋಂಕು ಕಂಡುಬಂದಿರುವ ವಿದ್ಯಾರ್ಥಿಗಳಿಗೆ ಕ್ವಾರಂಟೈನ್‌ಗೆ ಸೂಚನೆ ನೀಡಲಾಗಿದೆ.

Important ಸುದ್ದಿ: ಭಾರತದ ಯಾವ ರಾಜ್ಯಕ್ಕೆ ಎಷ್ಟು ಕೊರೊನಾ ಲಸಿಕೆ? Important ಸುದ್ದಿ: ಭಾರತದ ಯಾವ ರಾಜ್ಯಕ್ಕೆ ಎಷ್ಟು ಕೊರೊನಾ ಲಸಿಕೆ?

ಫೆಬ್ರವರಿ 2ರ ವರದಿಯಂತೆ ದಕ್ಷಿಣ ಕನ್ನಡದಲ್ಲಿ 23 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಒಟ್ಟು ಸೋಂಕಿತರ ಸಂಖ್ಯೆ 33,827ಕ್ಕೆ ಏರಿಕೆಯಾಗಿದೆ. ಜಿಲ್ಲೆಯ ಸಕ್ರಿಯ ಪ್ರಕರಣಗಳು 285.

ಕೇರಳ ರಾಜ್ಯದಲ್ಲಿ ಹೊಸ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಮಂಗಳವಾರದ ವರದಿ ಪ್ರಕಾರ 5716 ಹೊಸ ಪ್ರಕರಣಗಳು ರಾಜ್ಯದಲ್ಲಿ ದಾಖಲಾಗಿವೆ. ಒಟ್ಟು ಸೋಂಕಿತರ ಸಂಖ್ಯೆ 9,38,354ಕ್ಕೆ ಏರಿಕೆಯಾಗಿದೆ.

English summary
Private nursing college in Ullal, Dakshina Kannada seal down till February 19, 2021 after 40 students tested positive for COVID 19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X