ಪತ್ತನಾಡಿಯಲ್ಲಿ ಕುಡಿತದ ಚಟದಿಂದ ಹೊರಬರಲಾರದೆ ದಂಪತಿ ಆತ್ಮಹತ್ಯೆ
ಮಂಗಳೂರು, ನವೆಂಬರ್. 22: ಕುಡಿತದ ಚಟದಿಂದ ಹೊರಬರಲಾರದೆ ಮನನೊಂದು ದಂಪತಿಗಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳದ ಮಣಿನಾಲ್ಕೂರು ಗ್ರಾಮದ ಪತ್ತನಾಡಿ ಎಂಬಲ್ಲಿ ನಡೆದಿದೆ.
ಪತಿ ಪ್ರೇಮನಾಥ (67) ಹಾಗೂ ಪತ್ನಿ ಚಂದ್ರಾವತಿ (60) ಆತ್ಮಹತ್ಯೆ ಮಾಡಿಕೊಂಡ ದಂಪತಿ ಎಂದು ಗುರುತಿಸಲಾಗಿದೆ. ಪತ್ನಿ ಚಂದ್ರಾವತಿ ವಿಪರೀತ ಕುಡಿಯುವ ಚಟ ಹೊಂದಿದ್ದು, ಇದರಿಂದ ಪತಿ ಪ್ರೇಮನಾಥ್ ಬೇಸತ್ತಿದ್ದರು ಎಂದು ಹೇಳಲಾಗಿದೆ. ಕುಡಿತದ ಚಟದಿಂದ ಹೊರಬರಲಾಗದೆ ಮನನೊಂದು ಈ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತಪಡಿಸಲಾಗಿದೆ.

ಹಾಗೆಯೇ ಇನ್ನೊಂದು ಪ್ರಕರಣದಲ್ಲಿ ಬಂಟ್ವಾಳದ ಮಣಿನಾಲ್ಕೂರು ಎಂಬಲ್ಲಿ ದಂಪತಿಗಳಿಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಘಟನೆ ನಡೆದ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications