ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಕಲಿ ಚಿನ್ನ ಅಡವಿಟ್ಟು ಬ್ಯಾಂಕಿಗೆ ಕೋಟ್ಯಾಂತರ ರೂ. ವಂಚನೆ, ದಂಪತಿ ಅರೆಸ್ಟ್

|
Google Oneindia Kannada News

ಮಂಗಳೂರು ಜುಲೈ 26: ನಕಲಿ ಚಿನ್ನವನ್ನು ಅಡವಿಟ್ಟು ಬ್ಯಾಂಕಿಗೆ ಕೋಟ್ಯಾಂತರ ರೂಪಾಯಿ ಪಂಗನಾಮ ಹಾಕಿದ ಪ್ರಕರಣ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ಈ ಸಂಬಂಧ ಮಂಗಳೂರಿನ ಬಂದರು ಪೊಲೀಸರು ನಗರದ ಬೊಂದೆಲ್ ನ ನಿವಾಸಿಗಳಾದ ವಿದ್ಯಾನಂದ ರಾವ್ ಮತ್ತು ಲಲಿತಾ ರಾವ್ ಅವರನ್ನು ಬಂಧಿಸಿದ್ದಾರೆ. ಪೊಲೀಸ್ ಮೂಲಗಳ ಮಾಹಿತಿಯಂತೆ ಇವರು ಮಂಗಳೂರಿನಲ್ಲಿ ಆಭರಣ ತಯಾರಿ ಅಂಗಡಿ ಹೊಂದಿದ್ದಾರೆ. ನಗರದ ಮಿಲಾಗ್ರಿಸ್ ಬಳಿಯ ಕಥೋಲಿಕ್ ಸಿರಿಯನ್ ಬ್ಯಾಂಕಿನಲ್ಲಿ ಇವರು ಚಿನ್ನ ಅಡವಿಟ್ಟು ಸಾಲ ಪಡೆದಿದ್ದರು.

Couple arrested for pledging fake gold of Rs 4.5 crore at Catholic Syrian Bank in Mangaluru

ದಂಪತಿ ಸುಮಾರು 4.5 ಕೋಟಿ ರೂಪಾಯಿಗಳ ಸಾಲ ಪಡೆದಿದ್ದು ಈ ಬಗ್ಗೆ ಬ್ಯಾಂಕಿನ ಆಡಳಿತ ಮಂಡಳಿಗೆ ಸಂಶಯ ಬಂದಿತ್ತು. ಈ ಕಾರಣಕ್ಕೆ ಅಡವಿಟ್ಟ ಚಿನ್ನವನ್ನು ಪರೀಕ್ಷೆಗೆ ಒಳಪಡಿಸಿದಾಗ ಕಂಚಿನ ಲೋಹಕ್ಕೆ ಚಿನ್ನದ ಲೇಪ ನೀಡಿದ್ದು ಪತ್ತೆಯಾಗಿದೆ. ಹೀಗೆ ಅಡವಿಟ್ಟ ಚಿನ್ನ ನಕಲಿ ಎಂದು ಗೊತ್ತಾಗಿದೆ.
ಕೂಡಲೇ ಬಂದರು ಪೋಲಿಸ್ ಠಾಣೆಗೆ ಬ್ಯಾಂಕಿನ ಆಡಳಿತ ಮಂಡಳಿ ದೂರು ನೀಡಿದ್ದು ಇದೀಗ ವಂಚನೆ ಮಾಡಿದ ದಂಪತಿಗಳನ್ನು ಪೋಲಿಸರು ಬಂಧಿಸಿ ಮೊಕದ್ದಮೆ ದಾಖಲು ಮಾಡಿದ್ದಾರೆ.

English summary
Couple arrested for pledging fake gold of Rs 4.5 crore at Catholic Syrian Bank in Mangaluru. The arrested accused are Vidyananda Rao (59), and his wife, Lalitha Rao (52), residents of Maryhill near Bondel in the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X