ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ತಡೆಗೆ ನೆರವು ನೀಡಿದ ಇನ್ಫೋಸಿಸ್

|
Google Oneindia Kannada News

ಮಂಗಳೂರು, ಮಾರ್ಚ್ 28: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ವೈರಸ್‌ ತಡೆಗಟ್ಟಲು ಇನ್ಫೋಸಿಸ್ ಫೌಂಡೇಶನ್ ನೆರವು ನೀಡಿದೆ. ಇನ್ಫೋಸಿಸ್ ಫೌಂಡೇಶನ್ ಸ್ಪಂದನೆಗೆ ಜಿಲ್ಲಾಡಳಿತ ಧನ್ಯವಾದ ತಿಳಿಸಿದೆ.

Recommended Video

Bengaluru police proves humanity is still alive | Oneindia Kannada

ಇನ್ಫೋಸಿಸ್ ಫೌಂಡೇಶನ್ 28 ಲಕ್ಷ ರೂಪಾಯಿಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ ಕೊರೊನಾ ವೈರಸ್‌ ತಡೆಗೆ ನೀಡಿದೆ. ಜಿಲ್ಲಾಡಳಿತ ಈ ಬಗ್ಗೆ ಹಲವು ಸಂಸ್ಥೆಗಳಿಗೆ ಮನವಿ ಮಾಡಿತ್ತು. ಆ ಪೈಕಿ ಶೀಘ್ರವಾಗಿ ಇನ್ಫೋಸಿಸ್ ಫೌಂಡೇಶನ್ ಸಂಸ್ಥಾಪಕಿ ಸುಧಾ ಮೂರ್ತಿ ನೆರವಿಗೆ ಬಂದಿದ್ದಾರೆ. ಈಗಾಗಲೇ ಅನೇಕ ತುರ್ತು ಸಮಯದಲ್ಲಿ ಸಹಾಯದ ಹಸ್ತ ಚಾಚಿರುವ ಅವರು ಮತ್ತೊಮ್ಮೆ ಸ್ಪಂದಿಸಿದ್ದಾರೆ.

ಕೊರೊನಾವನ್ನು ಶಾಶ್ವತವಾಗಿ ಹೋಗಲಾಡಿಸಲು ಸಾಧ್ಯವೇ?: ವಿಶ್ವ ಸಂಸ್ಥೆಯ ತಜ್ಞರು ಏನಂತಾರೆ?ಕೊರೊನಾವನ್ನು ಶಾಶ್ವತವಾಗಿ ಹೋಗಲಾಡಿಸಲು ಸಾಧ್ಯವೇ?: ವಿಶ್ವ ಸಂಸ್ಥೆಯ ತಜ್ಞರು ಏನಂತಾರೆ?

ವೈದ್ಯಕೀಯ ಉಪಕರಣ ಹಾಗೂ ಚಿಕಿತ್ಸೆ ಬೇಕಾಗುವ ವಸ್ತುಗಳನ್ನು ಇದರಿಂದ ಜಿಲ್ಲಾಡಳಿತ ಸರಬರಾಜು ಮಾಡಿದೆ. ಸ್ಯಾನಿಟೈಸರ್, ಮಾಸ್ಕ್ ಸೇರಿದಂತೆ ಅನೇಕ ವಸ್ತುಗಳನ್ನು ನೀಡದೆ. ಆ ವಸ್ತುಗಳ ವಿವರ ಹೀಗಿದೆ.

Coronavirus Sudha Murthy Donates 28 Laks To Dakshina Kannada

500 ಮಿಲಿ ಲೀಟರ್‌ನ 5000 ಬಾಟಲ್ ಸ್ಯಾನಿಟೈಸರ್, 1,65000 ಮಾಸ್ಕ್, 2000 ಎನ್ 95 ಮಾಸ್ಕ್, 50 ಕ್ಯಾಪ್ ಗಳು, 60 ವಿಶೇಷ ಮಾದರಿಯ ಸರ್ಜಿಕಲ್ ಗ್ಲೌಸ್, 03 ಬ್ಲಾಕ್ ಸರ್ಜಿಕಲ್ ಗ್ಲೌಸ್, 85 ಗಾಗಲ್ಸ್, 300 ಫಾಗ್ ಫ್ರೀ ಮಾಸ್ಕ್ ಗಳನ್ನು ಮಂಗಳೂರು ಜಿಲ್ಲಾಡಳಿತ ನೀಡಿದೆ.

ಭಾರತಕ್ಕೆ 2.9 ಮಿಲಿಯನ್ ಡಾಲರ್ ನೆರವು ಘೋಷಿಸಿದ ಅಮೆರಿಕಭಾರತಕ್ಕೆ 2.9 ಮಿಲಿಯನ್ ಡಾಲರ್ ನೆರವು ಘೋಷಿಸಿದ ಅಮೆರಿಕ

ಈವರೆಗೆ ಭಾರತದಲ್ಲಿ 826 ಪಾಸಿಟಿವ್ ಪ್ರಕರಣಗಳು ದಾಖಲಾಗಿದೆ. ಕರ್ನಾಟಕದಲ್ಲಿ 55 ಪಾಸಿಟಿವ್ ಕೇಸ್‌ಗಳು ದೃಢಪಟ್ಟಿವೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಕೊರೊನಾ ಭೀತಿ ಹೆಚ್ಚಿದೆ.

English summary
Coronavirus: Infosys foundation Sudha Murthy donates 28 laks to Dakshina Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X