ಉಗ್ರರರಿಂದ ಆತಂಕ, ಕರಾವಳಿ ಕಾವಲು ಪಡೆಗೆ ಸನ್ನದ್ಧರಾಗುವಂತೆ ಸೂಚನೆ

ಮಂಗಳೂರು ಏಪ್ರಿಲ್ 27 : ಶ್ರೀಲಂಕಾದಲ್ಲಿ ಸರಣಿ ಆತ್ಮಾಹುತಿ ಬಾಂಬ್‌ ಸ್ಫೋಟ ದುರಂತದ ಬೆನ್ನಲ್ಲೇ ಶ್ರೀಲಂಕಾ ಭದ್ರತಾ ಪಡೆಗಳು ಉಗ್ರರ ಬೇಟೆ ಆರಂಭಿಸಿದೆ.

ಶ್ರೀಲಂಕಾದಲ್ಲಿ ಉಗ್ರರ ಅಡಗುತಾಣಗಳ ಮೇಲೆ ದಾಳಿ ನಡೆಯುತ್ತಿರುವ ಕಾರಣ ಉಗ್ರರು ಸಮುದ್ರದ ಮೂಲಕ ದಾಳಿ ನಡೆಸುವ ಸಾಧ್ಯತೆ ಇರುವ ಕಾರಣ ಭಾರತದಲ್ಲೂ ಕಟ್ಟೆಚ್ಚರವಹಿಸಲಾಗಿದೆ.

ಈ ಪರಿಣಾಮ ದೇಶದ ಕರಾವಳಿಯಲ್ಲೂ ಕಟ್ಟೆಚ್ಚರ ವಹಿಸಲಾಗುತ್ತಿದೆ. ಉಗ್ರರು ಸಮುದ್ರ ಮಾರ್ಗದ ಮೂಲಕ ದಕ್ಷಿಣ ಭಾರತ ಪ್ರವೇಶಿಸುವ ಗುಪ್ತಚರ ಮಾಹಿತಿ ಇರುವ ಹಿನ್ನೆಲೆಯಲ್ಲಿ ಆಳ ಸಮುದ್ರದಲ್ಲಿ ನಡೆಯುವ ಚಟುವಟಿಕೆ ಗಳ ಮೇಲೆ ಹದ್ದಿನ ಕಣ್ಣು ಇರಿಲಾಗಿದೆ .

Coastal security police kept on High alert

ಸಮುದ್ರ ದಲ್ಲಿ ಸಂಚರಿಸುವ ಅನುಮಾನಾಸ್ಪದ ದೋಣಿಗಳನ್ನು ತಡೆದು ಶೋಧ ನಡೆಸಲಾಗುತ್ತಿದೆ . ಭಾರತೀಯ ನೌಕಾ ಪಡೆ, ತಟರಕ್ಷಣಾ ಪಡೆಯ ಹಡಗುಗಳು ರಾತ್ರಿ ಹಗಲೆನ್ನದೆ ಸಮುದ್ರದಲ್ಲಿ ಗಸ್ತು ತಿರುಗುತ್ತಿವೆ .

ಶ್ರೀಲಂಕಾ ಸರಣಿ ಸ್ಫೋಟದ ಬಳಿಕ ಇತ್ತೀಚಿನ ದಿನಗಳಲ್ಲಿ ಉದ್ಭವಿಸಿರುವ ಆತಂಕ ಪರಿಸ್ಥಿತಿಯ ಕಾರಣ ರಾಜ್ಯದ ಕರಾವಳಿ ಕಾವಲು ಪಡೆಯ ಪೊಲೀಸರಿಂದ ಸಮುದ್ರ ಗಸ್ತು ತೀವ್ರಗೊಳಿಸಲಾಗಿದೆ . ಈ ಹಿನ್ನೆಲೆಯಲ್ಲಿ ಐಎಸ್‌ಡಿ ಡಿಜಿಪಿ ಎ.ಎಂ. ಪ್ರಸಾದ್‌ ಹಾಗು ಹಿರಿಯ ಅಧಿಕಾರಿಗಳು ಉಡುಪಿ ಜಿಲ್ಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕರಾವಳಿಯ ಕಾವಲು ಪಡೆಯ ಇಂಟರ್‌ಸೆಪ್ಟರ್‌ ಬೋಟ್‌ ಗಳು ಸಮದ್ರದಲ್ಲಿ ಪೆಟ್ರೋಲಿಂಗ್‌ ಆರಂಭಿಸಿವೆ .

ಶ್ರೀಲಂಕಾದಲ್ಲಿ ಸಂಭವಿಸಿರುವ ಉಗ್ರರ ಆತ್ಮಾಹುತಿ ದಾಳಿ ಹಿನ್ನೆಲೆಯಲ್ಲಿ ಕರಾವಳಿ ಕಾವಲು ಪೊಲೀಸ್‌ ವತಿಯಿಂದ ಕರ್ನಾಟಕ ಕರಾವಳಿಯ ಮಂಗಳೂರಿನಿಂದ ಕಾರವಾರದ ತನಕ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+