ಸ್ವಾತಂತ್ರ್ಯ ವೀರ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆ ಅನಾವರಣಗೊಳಿಸಿದ ಸಿಎಂ ಬೊಮ್ಮಾಯಿ

ಮಂಗಳೂರು, ನವೆಂಬರ್‌ 19: ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆಯನ್ನು ಮಂಗಳೂರಿನ ಬಾವುಟಗುಡ್ಡೆಯ ಟಾಗೋರ್ ಪಾರ್ಕ್‌ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಡಾ.ನಿರ್ಮಲಾನಂದ ಸ್ವಾಮೀಜಿ ಅನಾವರಣಗೊಳಿಸಿದರು.

ಭಾರತದಲ್ಲಿ ಬ್ರಿಟಿಷರಿಗೆ ಮೊದಲ ಸೋಲಿನ ಭೀತಿ ಹುಟ್ಟಿಸಿದ, ಭಾರತದ ಜನಸಾಮಾನ್ಯರಿಗೆ ಬ್ರಿಟಿಷರ ವಿರುದ್ಧ ಪ್ರಥಮ ಜಯ ದೊರಕಿಸಿಕೊಟ್ಟ ಮಂಗಳೂರು ಕ್ರಾಂತಿಯ ರೂವಾರಿ ಎನ್ನುವ ಹೆಗ್ಗಳಿಕೆಗೆ ಕೆದಂಬಾಡಿ ರಾಮಯ್ಯ ಗೌಡ ಪಾತ್ರರಾಗಿದ್ದರು.

ಪ್ರತಿಮೆ ಅನಾವರಣ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಮಂಗಳೂರಿಗೆ ಇವತ್ತು ಮಹತ್ವದ ದಿನ, ಇತಿಹಾಸಕ್ಕೆ ಮಹತ್ವ ಕೊಡುವ ದಿನ. ಬೆಳಕಿಗೆ ಬಾರದ ರಾಮಯ್ಯ ಗೌಡರ ಕಥೆ ಈಗ ಸುದ್ದಿಗೆ ಬಂದಿದೆ. ರಾಮಯ್ಯ ಗೌಡರಂಥ ನಿರಂತರ ಹೋರಾಟದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಇತಿಹಾಸದಲ್ಲಿ ಇಂಥಹ ಮತ್ತಷ್ಟು ಸತ್ಯಗಳು ಹೊರಗೆ ಬರಬೇಕಿದೆ ಎಂದು ಹೇಳಿದರು.

CM Basavraj Bommai Inaugurates Kedambadi Ramaiah Gowda Statue In Mangaluru

ಮಾತು ಮುಂದುವರಿಸಿದ ಅವರು ರಾಮಯ್ಯ ಗೌಡ ಒರ್ವ ಶ್ರೇಷ್ಟ ಕ್ರಾಂತಿಕಾರಿ ಪುರುಷ. ಅವರನ್ನು ಸೋಲಿಸಲು ಬ್ರಿಟಿಷ್ ಸೈನ್ಯ ಒಟ್ಟಾಗಿ ಬಂದು ಗಲ್ಲಿಗೇರಿಸಿತು. ಇಂತಹ ಹೋರಾಟದ ಕಥೆ ಇಡೀ ದೇಶಕ್ಕೆ ಪರಿಚಯ ಆಗಬೇಕು. ಇದೀಗ ಅವರ ಮೂರ್ತಿ ಸ್ಥಾಪನೆ ಮೂಲಕ ಅವರ ಇತಿಹಾಸ ಜಗತ್ತಿಗೆ ಗೊತ್ತಾಗಿದೆ. ಇಂತಹ ಅನಾಮಧೇಯ ಹೋರಾಟಗಾರರು ನಮ್ಮಲ್ಲಿ ಬಹಳಷ್ಟು ಜನ ಇದ್ದಾರೆ. ಇಂತ ಅನಾಮಧೇಯ ಹೋರಾಟಗಾರರ ಸ್ಮಾರಕ ಮಾಡಲು ನನಗೆ ಸ್ಪೂರ್ತಿ ಬಂದಿದೆ. ಇವತ್ತಿನ ಪೀಳಿಗೆಗೆ ಇದನ್ನು ತಿಳಿ ಹೇಳಿ ಸ್ಪೂರ್ತಿ ತುಂಬುವ ಕೆಲಸ ಆಗಬೇಕಿದೆ ಎಂದು ಹೇಳಿದರು.

ಯಾರು ಈ ಕೆದಂಬಾಡಿ ರಾಮಯ್ಯ..?

ಜನಸಾಮಾನ್ಯರು ಹಾಗೂ ರೈತರ ಮೇಲೆ ಬ್ರಿಟಿಷರ ಕ್ರೌರ್ಯ ಹಾಗೂ ದಬ್ಬಾಳಿಕೆಯನ್ನು ಸಹಿಸದ ಕೆದಂಬಾಡಿ ರಾಮಯ್ಯ ಗೌಡರು 1837ರಲ್ಲಿ ಬ್ರಿಟಿಷರ ವಿರುದ್ಧ ರೈತ ಸೇನೆಯನ್ನು ಕಟ್ಟಿ, ಸ್ಮರಣೀಯ ಹೋರಾಟ ನಡೆಸಿದವರು. ಬೆಳ್ಳಾರೆಯಿಂದ ಸುಮಾರು 2000ದಷ್ಟು ಇದ್ದ ರೈತ ಸೇನೆಯು ಕೆದಂಬಾಡಿ ರಾಮಯ್ಯ ಗೌಡರ ಮನೆಯಿಂದ ಹೊರಟು ಮೊದಲಿಗೆ ಬೆಳ್ಳಾರೆಯಲ್ಲಿದ್ದ ಖಜಾನೆಯನ್ನು ವಶಪಡಿಸಿಕೊಂಡಿತು. ಹಾಗೆ ಬಂದ ರೈತ ದಂಡು ಸುಮಾರು 90 ಕಿ.ಮೀ.ದೂರದಲ್ಲಿರುವ ಮಂಗಳೂರು ಕಲೆಕ್ಟರ್ ಆಫೀಸ್‌ನ್ನು ಮುತ್ತಿಗೆ ಹಾಕಿತು. ಬಳಿಕ ನಗರದ ಗುಡ್ಡದ ಮೇಲಿನ ಲೈಟ್ ಹೌಸ್‌ನಲ್ಲಿ ವಿಜಯದ ಸಂಕೇತವಾದ ಬಾವುಟವನ್ನು ಹಾರಿಸಿದರು. ಮುಂದಕ್ಕೆ ಈ ಪ್ರದೇಶವು ಬಾವುಟಗುಡ್ಡವೆಂದೇ ಗುರುತಿಸಿಕೊಂಡಿತು.

CM Basavraj Bommai Inaugurates Kedambadi Ramaiah Gowda Statue In Mangaluru

ಈ ಮೂಲಕ ಕೆದಂಬಾಡಿ ರಾಮಯ್ಯ ಗೌಡರ ನೇತೃತ್ವದಲ್ಲಿ 13 ದಿನಗಳ ಕಾಲ ಸ್ಥಾಪಿತ ಸರಕಾರವನ್ನು ಮುನ್ನಡೆಸಲಾಯಿತು. ಇದು ಭಾರತದ ನೆಲದಲ್ಲಿ ಬ್ರಿಟಿಷರಿಗೆ ಒದಗಿದ ಪ್ರಥಮ ಸೋಲು ಹಾಗೂ ಭಾರತದ ಸಾಮಾನ್ಯ ಜನರಿಗೆ ಬ್ರಿಟಿಷರ ವಿರುದ್ಧ ದೊರಕಿದ ಪ್ರಪ್ರಥಮ ಜಯ. ಈ ಹೋರಾಟದಲ್ಲಿ ಹುತಾತ್ಮರಾದ ಕೆದಂಬಾಡಿ ರಾಮಯ್ಯ ಗೌಡರ ಹೆಸರನ್ನು ಭಾರತದ ಇತಿಹಾಸದ ಪುಟಗಳಲ್ಲಿ ದಾಖಲಿಸಿ ಮಂಗಳೂರಿನ ಚಾರಿತ್ರಿಕ ಸ್ಥಳವಾದ ಬಾವುಟಗುಡ್ಡೆಯಲ್ಲಿ ಅವರ ಕಂಚಿನ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಈ ಮೂಲಕ ಅವರ ಹೆಸರನ್ನು ಈ ನಾಡಿನಲ್ಲಿ ಶಾಶ್ವತವಾಗಿ ಉಳಿಸುವ ಪ್ರಯತ್ನ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+