• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೈಲ್ವೆ ನಿಲ್ದಾಣಕ್ಕೆ ನಾರಾಯಣ ಗುರು ಹೆಸರಿಡಿ ಎಂದ ಖಾದರ್: ವೇದಿಕೆಯಲ್ಲೇ ಟಾಂಗ್‌ ಕೊಟ್ಟ ಸಿಎಂ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ನವೆಂಬರ್‌ 19: ಮಂಗಳೂರಿನ‌ ವಿಮಾನ ನಿಲ್ದಾಣಕ್ಕೆ ರಾಣಿ ಅಬ್ಬಕ್ಕ ಹೆಸರು, ರೈಲ್ವೆ ನಿಲ್ದಾಣಕ್ಕೆ ನಾರಾಯಣ ಗುರು ಹೆಸರಿಡಬೇಕೆಂದು ಕಾಂಗ್ರೆಸ್‌ ಮುಖಂಡ ಯು.ಟಿ ಖಾದರ್ ಸಿಎಂ ಬಸವರಾಜ ಬೊಮ್ಮಾಯಿಗೆ ಮನವಿ ಮಾಡಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರ ಸಮರವೀರ ಕೆದಂಬಾಡಿ ರಾಮಯ್ಯ ಗೌಡರ ಶೌರ್ಯದ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮನವಿ ಮಾಡಿದ್ದ ಯು.ಟಿ ಖಾದರ್‌ಗೆ ವೇದಿಕೆಯ ಭಾಷಣದಲ್ಲೇ ಸಿಎಂ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.

ಮಂಗಳೂರು ರೈಲ್ವೆ‌‌ ನಿಲ್ದಾಣಕ್ಕೆ ನಾರಾಯಣ ಗುರು, ವಿಮಾನ ನಿಲ್ದಾಣಕ್ಕೆ ಅಬ್ಬಕ್ಕ ಹೆಸರಿಡಿ: ಸಿಎಂಗೆ ಖಾದರ್ ಮನವಿಮಂಗಳೂರು ರೈಲ್ವೆ‌‌ ನಿಲ್ದಾಣಕ್ಕೆ ನಾರಾಯಣ ಗುರು, ವಿಮಾನ ನಿಲ್ದಾಣಕ್ಕೆ ಅಬ್ಬಕ್ಕ ಹೆಸರಿಡಿ: ಸಿಎಂಗೆ ಖಾದರ್ ಮನವಿ

ಕಾರ್ಯಕ್ರಮದ ವೇದಿಕೆಯಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ನಮ್ಮ ಮಣ್ಣಲ್ಲೇ ಹುಟ್ಟಿದ ಕ್ರಾಂತಿ ಪುರುಷರನ ಪ್ರತಿಮೆ ಸ್ಥಾಪನೆಗೆ ಇಷ್ಟು ವರ್ಷ ಬೇಕಾಯ್ತಾ..? ನಮ್ಮ ಯು.ಟಿ.ಖಾದರ್ ಒಳ್ಳೆ ಭಾಷಣ ಮಾಡುತ್ತಾರೆ. ಅವರ ಭಾಷಣದಲ್ಲಿ ಒಳಾರ್ಥ ಇರುತ್ತದೆ ಎಂದು ಬಹಿರಂಗವಾಗಿ ಹೇಳಿದರು.

ವಿಮಾನ ನಿಲ್ದಾಣಕ್ಕೆ ನಿಮ್ಮ ಸರ್ಕಾರವೇ ಇದ್ದಾಗ ಹೆಸರು ಇಡಬಹುದಿತ್ತು

ವಿಮಾನ ನಿಲ್ದಾಣಕ್ಕೆ ನಿಮ್ಮ ಸರ್ಕಾರವೇ ಇದ್ದಾಗ ಹೆಸರು ಇಡಬಹುದಿತ್ತು

ಕದಂಬಾಡಿ ರಾಮಯ್ಯ ಗೌಡರ ಶೌರ್ಯದ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ತುಂಬಿದ ಸಭೆಯಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಯು.ಟಿ ಖಾದರ್‌ ಆತ್ಮೀಯ ಸ್ನೇಹಿತನಾಗಿ ನನಗೆ ಅವರ ಮಾತಿನ ಒಳಾರ್ಥ ಗೊತ್ತು. ವಿಧಾನಸಭೆಯಲ್ಲಿ ಕೆಲವು ಮಾತನಾಡಬೇಕು. ಆದರೆ ಈ ಸಭೆ ಅತ್ಯಂತ ಪವಿತ್ರವಾಗಿದೆ. ರೇಲ್ವೆ ನಿಲ್ದಾಣಕ್ಕೆ, ವಿಮಾನ ನಿಲ್ದಾಣಕ್ಕೆ ನಿಮ್ಮ ಸರ್ಕಾರವೇ ಇದ್ದಾಗ ಹೆಸರು ಇಡಬಹುದಿತ್ತು. ಈ ದೇಶದಲ್ಲಿ ಬಹಳ ಪುಕ್ಕಟೆಯಾಗಿ ಸಲಹೆ ಸೂಚನೆ ಕೊಡಬಹುದು. ಆದರೆ ಮೊದಲು ಯಾಕೆ ಮಾಡಿಲ್ಲ ಎನ್ನುವುದನ್ನು ಯೋಚಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ಕಟೀಲ್‌ ಆರೋಗ್ಯ ವಿಚಾರಿಸಿದ ಸಿಎಂ ಬಸವರಾಜ ಬೊಮ್ಮಾಯಿಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ಕಟೀಲ್‌ ಆರೋಗ್ಯ ವಿಚಾರಿಸಿದ ಸಿಎಂ ಬಸವರಾಜ ಬೊಮ್ಮಾಯಿ

ರೈಲ್ವೆ ನಿಲ್ದಾಣಕ್ಕೆ ನಾರಾಯಣ ಗುರುಗಳ ಹೆಸರಿಡಬೇಕು

ರೈಲ್ವೆ ನಿಲ್ದಾಣಕ್ಕೆ ನಾರಾಯಣ ಗುರುಗಳ ಹೆಸರಿಡಬೇಕು

ಇದಕ್ಕೂ ಮೊದಲು ವೇದಿಕೆಯಲ್ಲಿ ಭಾಷಣ ಮಾಡಿದ್ದ ಮಾಜಿ ಸಚಿವ ಯು.ಟಿ ಖಾದರ್, ಸ್ವಾತಂತ್ರ್ಯ ಹೋರಾಟಗಾರರು ಜಾತಿ, ಧರ್ಮ ಮೀರಿ ನಿಂತ ವ್ಯಕ್ತಿತ್ವವಾಗಿದೆ. ಸ್ವಾತಂತ್ರ್ಯ ಹೋರಾಟಗಾರರ ತತ್ವ ನಮಗೆ ಮುಖ್ಯವಾಗಬೇಕು. ಅವರ ಜಾತಿಯಲ್ಲ. ಎಲ್ಲರ ಇತಿಹಾಸಗಳು ಪಠ್ಯದಲ್ಲಿ ದಾಖಲಾಗಿ ಮುಂದಿನ ಪೀಳಿಗೆಗೆ ತಿಳಿಯಲಿ. ನಿರ್ಮಲಾನಂದನಾಥ ಸ್ವಾಮೀಜಿಯವರ ಮಾರ್ಗದರ್ಶನ ಜಿಲ್ಲೆಗೆ ಬೇಕು. ಸಿಎಂ ಬೊಮ್ಮಾಯಿ ಕೂಡ ಜಿಲ್ಲೆಗೆ ಯಾವುದೇ ಯೋಜನೆ ಇಲ್ಲ ಅಂದಿಲ್ಲ. ಮಂಗಳೂರು ವಿಮಾನ ನಿಲ್ದಾಣಕ್ಕೆ ಅಬ್ಬಕ್ಕರಾಣಿ ಹಾಗೂ ರೈಲ್ವೆ ನಿಲ್ದಾಣಕ್ಕೆ ನಾರಾಯಣ ಗುರುಗಳ ಹೆಸರಿಡಬೇಕು. ಈ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳು ಗಮನ ಹರಿಸಲಿ ಎಂದು ಒತ್ತಾಯಿಸಿದ್ದರು.

ಬಾವುಟಗುಡ್ಡೆಯಲ್ಲಿ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆ

ಬಾವುಟಗುಡ್ಡೆಯಲ್ಲಿ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆ

ಭಾರತದಲ್ಲಿ ಬ್ರಿಟಿಷರಿಗೆ ಮೊದಲ ಸೋಲಿನ ಭೀತಿ ಹುಟ್ಟಿಸಿದ, ಭಾರತದ ಜನಸಾಮಾನ್ಯರಿಗೆ ಬ್ರಿಟಿಷರ ವಿರುದ್ಧ ಪ್ರಥಮ ಜಯ ದೊರಕಿಸಿಕೊಟ್ಟ ಮಂಗಳೂರು ಕ್ರಾಂತಿಯ ರೂವಾರಿ ಎನ್ನುವ ಹೆಗ್ಗಳಿಕೆಗೆ ಕೆದಂಬಾಡಿ ರಾಮಯ್ಯ ಗೌಡ ಅವರ ಪ್ರತಿಮೆಯನ್ನು ಶನಿವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅನಾವಣರಣಗೊಳಿಸಿದರು. ಮಂಗಳೂರಿನ ಬಾವುಟಗುಡ್ಡೆಯ ಟಾಗೋರ್ ಪಾರ್ಕ್‌ನಲ್ಲಿ ಕೆದಂಬಾಡಿ ರಾಮಯ್ಯ ಗೌಡ ಪ್ರತಿಮೆ ನಿರ್ಮಾಣ ಮಾಡಲಾಗಿದೆ.

ಹೋರಾಟದ ಕಥೆ ಇಡೀ ದೇಶಕ್ಕೆ ಪರಿಚಯ ಆಗಬೇಕು

ಹೋರಾಟದ ಕಥೆ ಇಡೀ ದೇಶಕ್ಕೆ ಪರಿಚಯ ಆಗಬೇಕು

ಈ ವೇಳೆ ಮಾತನಾಡಿದ್ದ ಸಿಎಂ ಬೊಮ್ಮಾಯಿ, ಕೆದಂಬಾಡಿ ರಾಮಯ್ಯ ಗೌಡ ಒರ್ವ ಶ್ರೇಷ್ಟ ಕ್ರಾಂತಿಕಾರಿ ಪುರುಷ. ಅವರನ್ನು ಸೋಲಿಸಲು ಬ್ರಿಟಿಷ್ ಸೈನ್ಯ ಒಟ್ಟಾಗಿ ಬಂದು ಗಲ್ಲಿಗೇರಿಸಿತು. ಇಂತಹ ಹೋರಾಟದ ಕಥೆ ಇಡೀ ದೇಶಕ್ಕೆ ಪರಿಚಯ ಆಗಬೇಕು. ಇದೀಗ ಅವರ ಮೂರ್ತಿ ಸ್ಥಾಪನೆ ಮೂಲಕ ಅವರ ಇತಿಹಾಸ ಜಗತ್ತಿಗೆ ಗೊತ್ತಾಗಿದೆ. ಇಂತಹ ಅನಾಮಧೇಯ ಹೋರಾಟಗಾರರು ನಮ್ಮಲ್ಲಿ ಬಹಳಷ್ಟು ಜನ ಇದ್ದಾರೆ. ಇಂತ ಅನಾಮಧೇಯ ಹೋರಾಟಗಾರರ ಸ್ಮಾರಕ ಮಾಡಲು ನನಗೆ ಸ್ಪೂರ್ತಿ ಬಂದಿದೆ. ಇವತ್ತಿನ ಪೀಳಿಗೆಗೆ ಇದನ್ನು ತಿಳಿ ಹೇಳಿ ಸ್ಪೂರ್ತಿ ತುಂಬುವ ಕೆಲಸ ಆಗಬೇಕಿದೆ ಎಂದರು.

ಬಸವರಾಜ ಬೊಮ್ಮಾಯಿ
Know all about
ಬಸವರಾಜ ಬೊಮ್ಮಾಯಿ
English summary
CM Basavaraj Bommai gives Taunt to UT Khader after he appealed to Name Mangaluru Railway station after Narayana Guru. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X