ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಿನ ಆರ್ ಎಸ್ ಎಸ್ ಶಕ್ತಿ ಕೇಂದ್ರದಲ್ಲಿ ಏಕದಂತನಿಗೆ ಪೂಜೆ ಸಲ್ಲಿಸಿದ ಕ್ರೈಸ್ತ ಧರ್ಮಗುರು, ಭಗಿನಿಯರು

|
Google Oneindia Kannada News

ಮಂಗಳೂರು, ಸೆಪ್ಟೆಂಬರ್.16: ಗಣೇಶ ಚತುರ್ಥಿ ಕೇವಲ ಹಿಂದೂಗಳ ಉತ್ಸವ ಮಾತ್ರವಾಗಿರದೇ ಸರ್ವ ಧರ್ಮಿಯರೂ ಸೇರಿ ವಿಜೃಂಭಣೆಯಿಂದ ಆಚರಿಸುವ ಹಲವಾರು ನಿದರ್ಶನಗಳ ನಮ್ಮ ಮುಂದಿದೆ. ಈ ಪಟ್ಟಿಗೆ ಇನ್ನೊಂದು ಹೆಸರು ಸೇರ್ಪಡೆಯಾಗಿದೆ.

ಮಂಗಳೂರಿನ ಸಂಘನಿಕೇತನದಲ್ಲಿ ಪೂಜಿಸಲಾಗುವ ಸಾರ್ವಜನಿಕ ಗಣೇಶೋತ್ಸವದಲ್ಲಿ ಕ್ರೈಸ್ತ ಧರ್ಮಗುರುಗಳು ಹಾಗು ಭಗಿನಿಯರು ಭಾಗವಹಿಸಿದ್ದಾರೆ.

ಬೆಂಗಳೂರಿನ ಗಣೇಶ ವಿಸರ್ಜನೆ: ಅಭೂತಪೂರ್ವ ಮೆರವಣಿಗೆಗೆ ಸಿದ್ಧತೆಬೆಂಗಳೂರಿನ ಗಣೇಶ ವಿಸರ್ಜನೆ: ಅಭೂತಪೂರ್ವ ಮೆರವಣಿಗೆಗೆ ಸಿದ್ಧತೆ

ಆರ್ ಎಸ್ ಎಸ್ ನ ಶಕ್ತಿ ಕೇಂದ್ರ ಎಂದೇ ಹೇಳಲಾಗುವ ಸಂಘನಿಕೇತನದ ಗಣೇಶೋತ್ಸವ ಸೌಹಾರ್ದತೆಗೆ ವೇದಿಕೆಯಾಗುತ್ತಿದೆ. ಈ ಬಾರಿ ಕ್ರೈಸ್ತ ಧರ್ಮಗುರುಗಳು ಹಾಗು ಕ್ರೈಸ್ತ ಭಗಿನಿಯರು ಈ ಗಣೇಶನ ಪಾದತಲಕ್ಕೆ ಹಣ್ಣುಹಂಪಲು ಸಮರ್ಪಿಸಿ ಪ್ರಾರ್ಥನೆ ಸಲ್ಲಿಸಿದ್ದಾರೆ.

christian priests and Nuns offered pooja to Ganesha

ಕಳೆದ ಬಾರಿಯೂ ಬಾಲ ಏಸು ಕ್ಷೇತ್ರದ ಧರ್ಮಗುರುಗಳು ಬಂದು ಗಣಪತಿಗೆ ಪೂಜೆ ಮಾಡಿಸಿ ಪ್ರಾರ್ಥನೆ ಸಲ್ಲಿಸಿದ್ದರು.

ಸಂಘನಿಕೇತನದ ವತಿಯಿಂದ ಈ ಬಾರಿ 71ನೇ ವರ್ಷದ ಗಣೇಶ ಚತುರ್ಥಿ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಂಘನಿಕೇತನ ಸಭಾಂಗಣದಲ್ಲಿ ಇರಿಸಲಾದ ಗಣೇಶನ ವಿಗ್ರಹಕ್ಕೆ ಮಂಗಳೂರಿನ ಕ್ಯಾಥೊಲಿಕ್ ಸಭಾ ಮತ್ತು ಸೈಂಟ್ ಜೋಸೆಫ್ ಕಾನ್ವೆಂಟ್ ನ ಭಗಿನಿಯರು ಬಂದು ಫಲಪುಷ್ಪ ಸಮರ್ಪಿಸಿ, ಪ್ರಾರ್ಥನೆಯನ್ನು ಸಲ್ಲಿಸಿದ್ದಾರೆ.

 ವಿಸರ್ಜನೆಯ ಬಳಿಕವೂ ಗಿಡವಾಗಿ ನೆಲೆ ನಿಲ್ಲುವ ಪರಿಸರ ಸ್ನೇಹಿ ಗಣಪ ವಿಸರ್ಜನೆಯ ಬಳಿಕವೂ ಗಿಡವಾಗಿ ನೆಲೆ ನಿಲ್ಲುವ ಪರಿಸರ ಸ್ನೇಹಿ ಗಣಪ

ಮಂಗಳೂರು ಕ್ಯಾಥೊಲಿಕ್ ಸಭಾದ ಕಾರ್ಯದರ್ಶಿ ಸೆಲೆಸ್ಟೀನ್ ಡಿಸೋಜಾ, ಸೈಂಟ್ ಜೋಸೆಫ್ ಕಾನ್ವೆಂಟ್ ನ ಭಗಿನಿಯರಾದ ಸಿಸ್ಟರ್ ಜ್ಯೋತಿ, ಸಿಸ್ಟರ್ ಮರಿಯಾ, ಸಿಸ್ಟರ್ ಅನಿತ, ಸಿಸ್ಟರ್ ರೋಸಾ, ಸಿಸ್ಟರ್ ಸುಜಾತ ಗಣೇಶನಿಗೆ ಪ್ರಾರ್ಥನೆ ಸಲ್ಲಿಸಿದರು.

christian priests and Nuns offered pooja to Ganesha

ಹಲವು ವರ್ಷಗಳಿಂದ ಈ ಕ್ರೈಸ್ತ ಧರ್ಮಕೇಂದ್ರಗಳ ಧರ್ಮಗುರುಗಳು ಗಣೇಶೋತ್ಸವದಂದು ಸಂಘನಿಕೇತನಕ್ಕೆ ಬಂದು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

ಮೈಸೂರು: ಹಿಂದು-ಮುಸ್ಲಿಂ ಒಟ್ಟಾಗಿ ಗೌರಿ-ಗಣೇಶ ಹಬ್ಬ ಆಚರಣೆಮೈಸೂರು: ಹಿಂದು-ಮುಸ್ಲಿಂ ಒಟ್ಟಾಗಿ ಗೌರಿ-ಗಣೇಶ ಹಬ್ಬ ಆಚರಣೆ

ಯಾವುದೇ ಜಾತಿ-ಧರ್ಮ ರಾಜಕೀಯವಿಲ್ಲದೆ ನಾವೆಲ್ಲರೂ ಒಂದಾಗಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದೇವೆ. ಮುಂದೆಯೂ ಇದೇ ರೀತಿ ಭಾಗಿಯಾಗಲು ದೇವರು ಅನುಗ್ರಹಿಸಲಿ ಎಂದು ಕ್ರೈಸ್ತ ಧರ್ಮಗುರುಗಳು ಹಾಗು ಭಗಿನಿಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

English summary
Christian priests and Nuns attended Ganeshotsava in Sanghanikeetan at Mangaluru. Nuns offered pooja to lord Ganesha
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X