ಮಗುವಿಗೆ ರಕ್ತ ಕ್ಯಾನ್ಸರ್, ಹಣ ಸಹಾಯ ಮಾಡಿ

ದಕ್ಷಿಣ ಕನ್ನಡ ಜಿಲ್ಲೆ, ಪುತ್ತೂರು ತಾಲೂಕು, ಕೊಡಿಂಬಾಡಿ ಗ್ರಾಮದ ಹೊಸಗದ್ದೆಯಲ್ಲಿ ವಾಸವಿರುವ ಪ್ರಸಾದ್ ಹಾಗು ಪೂರ್ಣಿಮಾ ಅವರ ಮಗಳು ಪಲ್ಲವಿ ವಿದ್ಯಾನಗರದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂರನೇ ತರಗತಿಯಲ್ಲಿ ಓದುತ್ತಿದ್ದಾಳೆ.
ಆಗಾಗ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದರಿಂದ ಪುತ್ತೂರಿನ ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ನಂತರ ಮಂಗಳೂರಿನ ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ರಕ್ತದ ಸ್ಯಾಂಪಲ್ ಪರೀಕ್ಷೆ ಮಾಡಿಸಿದಾಗ ರಕ್ತ ಕ್ಯಾನ್ಸರ್ ಇದೆ ಎಂದು ವೈದ್ಯರಾದ ಡಾ. ದಿನೇಶ್ ಶೇಠ್ ಅವರು ಪ್ರಮಾಣಪತ್ರ ನೀಡಿದ್ದಾರೆ.
ತಾವು ದಿನಗೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಗಂಡ ಕೂಡ ಹೃದಯ ಬೇನೆಯಿಂದ ಬಳಲುತ್ತಿರುವುದರಿಂದ ಮಗಳ ಚಿಕಿತ್ಸೆಗೆ ಹಣಕಾಸು ಸಹಾಯ ಮಾಡಬೇಕೆಂದು ಪೂರ್ಣಿಮಾ ಅವರು ಕೋರಿದ್ದಾರೆ. ಈಗಾಗಲೆ 60 ಸಾವಿರ ರು. ಖರ್ಚಾಗಿದ್ದು, ಉತ್ತಮ ಚಿಕಿತ್ಸೆ ನೀಡಿ ಸಂಪೂರ್ಣ ಗುಣಮುಖಳಾಗಲು 8 ಲಕ್ಷ ರು. ಹಣದ ಅಗತ್ಯವಿದೆ. ಇಷ್ಟೊಂದು ಮೊತ್ತ ಭರಿಸಲು ಬಡವರಾದ ತಮ್ಮಿಂದ ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಆಸಕ್ತ ದಾನಿಗಳು ಮಗುವಿನ ಚಿಕಿತ್ಸೆಗಾಗಿ ಕೆಳಗೆ ನಮೂದಿಸಲಾಗಿರುವ ಬ್ಯಾಂಕ್ ವಿಳಾಸಕ್ಕೆ ಹಣ ವರ್ಗಾಯಿಸಬಹುದು. ಯಾವುದಕ್ಕೂ ಪೂರ್ಣಿಮಾ ಅವರೊಂದಿಗೆ ಮೊಬೈಲ್ ನಲ್ಲಿ ಮಾತನಾಡಿ ನಂತರ ಹಣ ನೀಡಬೇಕೆನಿಸಿದರೆ ನೀಡಬಹುದು.
ಹೆಸರು : ಪ್ರಸಾದ್
ಬ್ಯಾಂಕ್ : ಕರ್ನಾಟಕ ಬ್ಯಾಂಕ್ ಉಪ್ಪಿನಂಗಡಿ
ಉಳಿತಾಯ ಖಾತೆ ಸಂಖ್ಯೆ : 8082500100486101
IFSC code : KARB0000808
ಬ್ಯಾಂಕ್ ವಿಳಾಸ : ಕರ್ನಾಟಕ ಬ್ಯಾಂಕ್, ಶ್ರೀ ಲಕ್ಷ್ಮೀ ಆರ್ಕೇಡ್, ಉಪ್ಪಿನಂಗಡಿ - 574 242, ದಕ್ಷಿಣ ಕನ್ನಡ.
ಫೋನ್ : 74064 24145












Click it and Unblock the Notifications