ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೂಡುಶೆಡ್ಡೆ ಬೈಲು ದನಕಳ್ಳತನ ಪ್ರಕರಣ: ಮತ್ತೋರ್ವ ಪ್ರಮುಖ ಆರೋಪಿಯ ಬಂಧನ

|
Google Oneindia Kannada News

ಮಂಗಳೂರು, ಜುಲೈ.31: ಮಂಗಳೂರಿನ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಮೂಡುಶೆಡ್ಡೆ ಬೈಲು ಎಂಬಲ್ಲಿನ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಬೆದರಿಸಿ ಹಟ್ಟಿಯಿಂದ ದನಗಳನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಪ್ರಮುಖ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂದಿಸಿದ್ದಾರೆ.

ಬಂಧಿತನನ್ನು ಬಜ್ಪೆ ನಿವಾಸಿ ನಿಸಾರುದ್ದೀನ್ ಯಾನೆ ಪಾರಿವಾಳ ನಿಸಾರ್ (23) ಎಂದು ಗುರುತಿಸಲಾಗಿದೆ.

ಅಕ್ರಮ ಜಾನುವಾರು ಸಾಗಾಟ : ವಿಟ್ಲದಲ್ಲಿ ಭಜರಂಗಿ ಮತ್ತಿಬ್ಬರ ಬಂಧನಅಕ್ರಮ ಜಾನುವಾರು ಸಾಗಾಟ : ವಿಟ್ಲದಲ್ಲಿ ಭಜರಂಗಿ ಮತ್ತಿಬ್ಬರ ಬಂಧನ

ಜುಲೈ 16 ರಂದು ತಡ ರಾತ್ರಿ ಮೂಡುಶೆಡ್ಡೆ ಬೈಲು ಎಂಬಲ್ಲಿನ ನಿವಾಸಿ ಪುರುಷೋತ್ತಮ ಎಂಬುವವರ ಮನೆಯ ನುಗ್ಗಿದ ದನಗಳ್ಳರು ಹಟ್ಟಿಯಲ್ಲಿ ಕಟ್ಟಿ ಹಾಕಿದ ದನಗಳನ್ನು ಬಿಡಿಸಲು ಯತ್ನಿಸಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ಹಟ್ಟಿಯ ಬಳಿ ಬಂದ ಮನೆ ಮಂದಿಯನ್ನು ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಸಿದ್ದಾರೆ.

CB police arrested one more in Moodshedde cow theft case

ನಂತರ ತಾವು ತಂದಿದ್ದ ಟಾಟಾ ಸುಮೋದಲ್ಲಿ ದನಗಳನ್ನು ತಂಬಿಸಿ ಅಲ್ಲಿಂದ ಪರಾರಿಯಾಗಿದ್ದಾರೆ.

ಈ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ಪೈಕಿ ಇಮ್ರಾನ್ ಯಾನೆ ಕುಟ್ಟ ಇಮ್ರಾನ್ ಮತ್ತು ಉಮ್ಮರ್ ಫಾರೂಕ್ ಎಂಬುವವರನ್ನು ಈಗಾಗಲೇ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈ ದನಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿ ನಿಸಾರುದ್ದೀನ್ ನನ್ನು ಬಜಪೆ ಸಮೀಪದ ಮನೆಯೊಂದರಲ್ಲಿ ಬಂಧಿಸಲಾಗಿದೆ.

ಈತನ ವಿರುದ್ಧ ಈ ಹಿಂದೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಕಳವು, ಮನೆ ಕಳ್ಳತನ ಹಾಗೂ ದನ ಕಳ್ಳತನ ಹೀಗೆ ಒಟ್ಟು 4 ಪ್ರಕರಣಗಳು ದಾಖಲಾಗಿವೆ.

English summary
Mangaluru CCB police team succeeded in arresting one more notorious criminals connected to Moodshedde cow theft case. Accused identified as Nisaruddin (23) native of Bajpe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X