ಮಂಗಳೂರು ನಿವಾಸಿ ಅಪಹರಿಸಿ ಮಡಿಕೇರಿಯಲ್ಲಿ ಬಿಟ್ಟರು

ಮಂಗಳೂರು, ಫೆ. 12 : ಮಂಗಳೂರಿನ ಬಿಕರ್ನಕಟ್ಟೆಯ ನಿವಾಸಿಯೊಬ್ಬರನ್ನು ಎಂ.ಸಂತೋಷ್ ಕುಮಾರ್ ಎಂಬವರನ್ನು ಅಪರಿಚಿತರ ತಂಡ ಕಾರಿನಲ್ಲಿ ಅಪಹರಿಸಿ ದರೋಡೆ ಮಾಡಿದ್ದಾರೆ. ಮಡಿಕೇರಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ತನಿಖೆ ನಡೆಸುವಂತೆ ಪೊಲೀಸರು ಪ್ರಕರಣವನ್ನು ಕದ್ರಿ ಠಾಣೆಗೆ ವರ್ಗಾವಣೆ ಮಾಡಿದ್ದಾರೆ.

ಜ.27ರಂದು ಸಂತೋಷ್ ಕುಮಾರ್ ಅವರನ್ನು ಮನೆಯ ಸಮೀಪದಿಂದ ಸುಮಾರು 6 ಜನ ಆರೋಪಿಗಳು ಚಾಕು ತೋರಿಸಿ ಬೆದರಿಸಿ, ಬಾಯಿಗೆ ಬಟ್ಟೆ ಕಟ್ಟಿ ಇಂಡಿಕಾ ಕಾರಿನಲ್ಲಿ ಅಪಹರಿಸಿದ್ದರು. ಮಂಗಳೂರಿನಲ್ಲಿ ಸುತ್ತಾಡಿಸಿ ಮಡಿಕೇರಿ ಕಡೆಗೆ ತೆರಳಿದ್ದರು. [ಕಾಸರಗೋಡು-ಬೈಂದೂರು ನಡುವೆ ರೈಲು ಸಂಚಾರ ಭಾಗ್ಯ]

Robbery

ಮಡಿಕೇರಿಯ ಕಾಂಡನಕೊಲ್ಲಿ ಎಂಬಲ್ಲಿ ಕಾರಿನಿಂದ ಕೆಳಗೆ ದೂಡಿ ರಸ್ತೆಯಲ್ಲಿ ಕಬ್ಬಿಣದ ರಾಡಿನಿಂದ ಹೊಡೆದು ಜೇಬಿನಲ್ಲಿದ್ದ ಒಂದು ಮೊಬೈಲ್ ಹಾಗೂ 3,300 ರೂ. ನಗದು ದೋಚಿದ್ದರು. ಸಂತೋಷ್‌ ಅವರ ಶರ್ಟ್ ಹರಿದು ಕಣ್ಣಿಗೆ ಮತ್ತು ಬಾಯಿಗೆ ಕಟ್ಟಿ ಹಲ್ಲೆ ನಡೆಸಿದ್ದರು. ವಾಹನ ಬರುವ ಸದ್ದು ಕೇಳಿ ಪರಾರಿಯಾಗಿದ್ದರು. [ಮಂಗಳೂರು: ಕಾಮದ ಕಣ್ಣಿಂದ ನೋಡಿದ್ದಕ್ಕೆ ಕೊಲೆಯಾಗಿ ಹೋದ]

ಆ ರಸ್ತೆಯಲ್ಲಿ ಬಂದ ಆಟೋಚಾಲಕ ಸಂತೋಷ್‌ರನ್ನು ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿದ್ದರು.ಈ ಬಗ್ಗೆ ಸಂತೋಷ್ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಇದೀಗ ಪ್ರಕರಣದ ಹೆಚ್ಚಿನ ತನಿಖೆಗಾಗಿ ಮತ್ತು ಪ್ರಕರಣ ಮಂಗಳೂರಿನ ಕದ್ರಿ ಪೊಲೀಸ್ ಠಾಣೆಯಲ್ಲಿ ನಡೆದಿರುವುದರಿಂದ ಪ್ರಕರಣವನ್ನು ಕದ್ರಿ ಪೊಲೀಸ್ ಠಾಣೆಗೆ ಹಸ್ತಾಂತರಮಾಡಲಾಗಿದ್ದು, ತನಿಖೆ ನಡೆಯುತ್ತಿದೆ.

ಅತ್ಯಾಚಾರಕ್ಕೆ ಯತ್ನ : ಶಿರಾಡಿ ಗ್ರಾಮದ ಉದನೆ ಎಂಬಲ್ಲಿ ನಾಲ್ಕು ವರ್ಷ ಪ್ರಾಯದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ನಡೆಸಲು ಯತ್ನಿಸಿದ ಘಟನೆ ಮಂಗಳವಾರ ಸಂಜೆ ನಡೆದಿದ್ದು, ಉಪ್ಪಿನಂಗಡಿ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ವಿದ್ಯಾರ್ಥಿಯನ್ನು ಶಿರಾಡಿ ಬಾಗಿಲುಗದ್ದೆ ವೆಂಕಪ್ಪ ಗೌಡ ಎಂಬವರ ಮಗ ದ್ವಿತೀಯ ಪಿಯುಸಿ ವಿದ್ಯಾರ್ಥಿ ಪ್ರಮೋದ್ (19) ಎಂದು ಗುರುತಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+