• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು ಬ್ಲಾಸ್ಟ್‌: ಶಂಕಿತ ಉಗ್ರ ಶಾರಿಕ್ ಮೇಲೆ ಝಾಕಿರ್ ನಾಯ್ಕ್‌ ಭಾಷಣ ಪ್ರಭಾವ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ನವೆಂಬರ್ 25: ಮಂಗಳೂರು ಸ್ಪೋಟದ ರೂವಾರಿ ಶಂಕಿತ ಉಗ್ರ ಶಾರಿಕ್‌ನ ನಂಟು ಬಗೆದಷ್ಟು ಹೊರಬರುತ್ತಿದೆ. ಆತನ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರೂ ಸ್ಪೋಟಕ ಮಾಹಿತಿಗಳನ್ನು ಅಧಿಕಾರಿಗಳು ಹೊರ ಹಾಕುತ್ತಿದ್ದಾರೆ. ಎಫ್‌ಐಆರ್ ದಾಖಲಿಸಿಕೊಂಡ ಎನ್‌ಐಎ ಅಧಿಕಾರಿಗಳಿಗೆ ಆತನ ಮೊಬೈಲ್‌ನಲ್ಲಿ‌ ಸಿಕ್ಕ 50 ಕ್ಕೂ ಹೆಚ್ಚು ವಿಡಿಯೋಗಳು ಆತಂಕ ಸೃಷ್ಟಿಸಿದೆ. ಹಿಂದೂ ದೇವಾಲಯಗಳು ಮಾತ್ರವಲ್ಲದೆ ಪೊಲೀಸರೂ ಟಾರ್ಗೆಟ್ ಅನ್ನೋ‌ ಆಘಾತಕಾರಿ ಮಾಹಿತಿಯೂ ಹೊರಬಿದ್ದಿದೆ.

ಉಗ್ರ ಶಾರಿಕ್ ಗಂಭೀರ ಸ್ಥಿತಿಯಲ್ಲಿ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆತನ ಹೇಳಿಕೆಯನ್ನು ದಾಖಲಿಸಿಕೊಳ್ಳಲು ಇನ್ನೂ ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ. ಆದರೆ ಎಫ್‌ಐಆರ್ ದಾಖಲಿಸಿಕೊಂಡ ಎನ್‌ಐಎ ಅಧಿಕಾರಿಗಳು ಶುಕ್ರವಾರ ಶಾರಿಕ್‌ನ ಬಂಧನ‌ ಪ್ರಕ್ರಿಯೆ ನಡೆಸಿದ್ದಾರೆ.

ಉಗ್ರ ಶಾರೀಕ್‌ನ ಟಾರ್ಗೆಟ್‌ನಲ್ಲಿತ್ತು ಮಂಗಳೂರಿನ ಪ್ರಸಿದ್ಧ ದೇವಾಲಯಗಳು; ಸ್ಫೋಟಕ ಮಾಹಿತಿ ಇಲ್ಲಿದೆಉಗ್ರ ಶಾರೀಕ್‌ನ ಟಾರ್ಗೆಟ್‌ನಲ್ಲಿತ್ತು ಮಂಗಳೂರಿನ ಪ್ರಸಿದ್ಧ ದೇವಾಲಯಗಳು; ಸ್ಫೋಟಕ ಮಾಹಿತಿ ಇಲ್ಲಿದೆ

ಇನ್ನು ಅಧಿಕಾರಿಗಳು ವಶಪಡಿಸಿಕೊಂಡಿರುವ ಶಾರಿಕ್‌ನ ಮೊಬೈಲ್‌ ಪರಿಶೀಲನೆ ನಡೆಸಿದಾಗ ಹಲವು ಸ್ಪೋಟಕ‌ ಮಾಹಿತಿಗಳು ಹೊರ ಬಿದ್ದಿದೆ. ಈತನಿಗೆ ಭಾರತದಿಂದ ನಿಷೇಧಕ್ಕೆ ಒಳಗಾಗಿರುವ ಇಸ್ಲಾಂ ಮೂಲಭೂತವಾದಿ ಝಾಕೀರ್ ನಾಯ್ಕ್‌ನ ಸಾಕಷ್ಟು ಭಾಷಣಗಳನ್ನು ಡೌನ್ ಲೋಡ್ ಮಾಡಿಟ್ಟು ನೋಡುತ್ತಿದ್ದ ಎನ್ನುವ ಮಾಹಿತಿ‌ ಲಭ್ಯವಾಗಿದೆ.

ಝಾಕೀರ್ ನಾಯ್ಕ್ ಇಸ್ಲಾಂ ಮೂಲಭೂತವಾದದ ಬಗ್ಗೆ ಮಾಡಿದ ಭಾಷಣಗಳಿಂದ ಪ್ರಭಾವಿತನಾಗಿರುವ‌ ಶಾರಿಕ್‌‌ ಝಾಕೀರ್ ನಾಯ್ಕ್‌ನನ್ನು‌ " ದಿ‌ ರಿಯಲ್ ಇನ್ಸ್‌ಪಿರೇಷನ್ " ಎಂದು ಹೇಳಿಕೊಂಡು ಸ್ಪೆಲ್ಫಿ ವಿಡಿಯೋ‌ ಮಾಡಿದ್ದಾನೆ ಎನ್ನಲಾಗಿದೆ.

ದೇಶವನ್ನು ಮುಸ್ಲಿಂ ರಾಷ್ಟ್ರ ಮಾಡುವ ಬಗ್ಗೆ, ಹಿಂದೂಗಳನ್ನು‌ ದ್ವೇಷಿಸುವ ವಿಡಿಯೋಗಳನ್ನೇ ಪ್ರತಿದಿನ ನೋಡುತ್ತಿದ್ದ ಶಾರಿಕ್‌ಗೆ ಹಿಂದೂಗಳೇ ಟಾರ್ಗೆಟ್ ಆಗಿತ್ತಂತೆ. ಇದರ ಜೊತೆಗೆ ಪೊಲೀಸ್ ಅಧಿಕಾರಿಗಳೂ ಈತನ‌ ಹಿಟ್ ಲಿಸ್ಟ್‌ನಲ್ಲಿ ಇದ್ರೂ ಎನ್ನುವ‌ ಮಾಹಿತಿಯೂ ಹೊರ ಬಿದ್ದಿದ್ದು ಸಿಎಎ, ಎನ್ಆರ್‌ಸಿ ಹೋರಾಟದ ವೇಳೆ ಪೊಲೀಸರಿಂದ ಮುಸ್ಲಿಂಮರಿಗೆ ಸಾಕಷ್ಟು ದೌರ್ಜನ್ಯವಾಗಿದೆ. ಮಂಗಳೂರಿನಲ್ಲಿ‌ ನಡೆದ ಹೋರಾಟದಲ್ಲಿ ಪೊಲೀಸರು ಇಬ್ಬರು ಮುಸ್ಲಿಮರನ್ನು ಗೋಲಿಬಾರ್ ನಡೆಸಿ ಹತ್ಯೆ ನಡೆಸಿದ್ದಾರೆ. ಪೊಲೀಸರೂ ಹಿಂದೂಗಳೇ‌ ಆಗಿದ್ದು ಅವರಿಗೂ ಸರಿಯಾದ ಪಾಠ ಕಲಿಸಬೇಕೆಂದು ಪೊಲೀಸರನ್ನೂ ಟಾರ್ಗೆಟ್ ಮಾಡಿದ್ದ ಎನ್ನುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.

ಶಾರಿಕ್‌ನ‌ ಪ್ಲಾನ್ ದೊಡ್ಡ ಮಟ್ಟದಲ್ಲೇ ಇತ್ತು ಎನ್ನುವುದು ಇದೀಗ ಗೊತ್ತಾಗುತ್ತಿದ್ದಂತೆ ಎನ್ ಐಎ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ. ಇನ್ನೂ ಗಂಭೀರ ಸ್ಥಿತಿಯಲ್ಲೇ ಇರುವ ಶಾರಿಕ್ ಚೇತರಿಸಿಕೊಂಡರೆ ಆತನ‌ ನಿಜವಾದ ಉಗ್ರ ಕೃತ್ಯ, ಪ್ಲಾನ್, ಸಹಕರಿಸಿದವರು ಎಲ್ಲವೂ ಹೊರ ಬೀಳಲಿದೆ. ಅಲ್ಲಿಯವರೆಗೆ ಕಾಯಬೇಕಾದ ಅನಿವಾರ್ಯ ಎನ್ಐಎಗೆ ಎದುರಾಗಿದೆ.

English summary
Police have found the preacher Zakir Naik's videos in Shariq's phone, who is the Main accused of Mangaluru blast case,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X