ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮುಂದೆ ಡಿ.ಕೆ ಶಿವಕುಮಾರ್‌ ಹೊಗಳಿದ ಬಿಜೆಪಿ ಶಾಸಕ

ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯ ರಾಜಕೀಯದಲ್ಲಿ ಒಂದು ಪಕ್ಷದ ಮೇಲೆ ಮತ್ತೊಂದು ಪಕ್ಷ ಆರೋಪ ಮಾಡುವುದು, ಹರಿಹಾಯ್ದುವುದು ಸಾಮಾನ್ಯವಾಗಿದೆ. ಆದರೆ ಇಲ್ಲೊಬ್ಬರು ಬಿಜೆಪಿ ಶಾಸಕರು ತಮ್ಮ ಕೇಂದ್ರ ನಾಯಕರ ಮುಂದೆಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌

ಮಂಗಳೂರು, ಜನವರಿ 24: ವಿಧಾನಸಭಾ ಚುನಾವಣಾ ಹೊಸ್ತಿಲಲ್ಲೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಬಾಯಿ ತುಂಬಾ ಹೊಗಳಿದ ಬಿಜೆಪಿ ಶಾಸಕನ ಸ್ವಾಗತ ಭಾಷಣಕ್ಕೆ ಕಾರ್ಯಕರ್ತರು ಗರಂ ಆದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ.

ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ದೇವರಗದ್ದೆಯಲ್ಲಿ ನಡೆದ ಜಗದ್ಗುರು ಶ್ರೀ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಅವರ 78ನೇ ಜಯೋಂತ್ಸವದ ಸಂಭ್ರಮ ಹಾಗೂ ಡಾ.ಶ್ರೀ ನಿರ್ಮಲಾನಂದ ಸ್ವಾಮೀಜಿಯವರ ಪಟ್ಟಾಭಿಷೇಕದ ದಶಮಾನೋತ್ಸವದ ಅಂಗವಾಗಿ ಗುರುವಂದನೆ ಕಾರ್ಯಕ್ರಮದಲ್ಲಿ ಪುತ್ತೂರು ಶಾಸಕ ಸಂಜೀವ ಮಠಂದೂರು ,ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ,ಮಾಜಿ ಸಚಿವ ಡಿ.ವಿ ಸದಾನಂದ ಗೌಡರ ಸಮ್ಮುಖದಲ್ಲಿ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಕಾರ್ಯಕ್ರಮಕ್ಕೆ ಸ್ವಾಗತ ಮಾಡುವ ಭರದಲ್ಲಿ ದೊಡ್ಡ ದೊಡ್ಡ ಶಬ್ಧಗಳನ್ನು ಪ್ರಯೋಗಿಸಿ ಸ್ವಾಗತ ಮಾಡಿರೋದು ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಿಸಿದೆ.

ಕಾರ್ಯಕ್ರಮಕ್ಕೆ ಆಗಮಿಸಿದ ಡಿಕೆ ಶಿವಕುಮಾರ್‌ ಅವರನ್ನು ಸ್ವಾಗತಿಸಿದ ಪುತ್ತೂರು ಶಾಸಕ ಸಂಜೀವ ಮಠಂದೂರು "ಕರ್ನಾಟಕ ರಾಜ್ಯದ ಹೆಮ್ಮೆಯ ಸುಪುತ್ರ, ಕರ್ನಾಟಕ ಕಾಂಗ್ರೆಸ್‌ನ ಅಧ್ಯಕ್ಷರಾಗಿ, ಎಸ್.ಎಂ ಕೃಷ್ಣ ಸಚಿವ ಸಂಪುಟದಲ್ಲಿ ಇಡೀ ಕರ್ನಾಟಕದಲ್ಲಿ ಬದಲಾವಣೆ ಮಾಡಬಹುದೆಂದು ಹೇಳಿ,ನಮಗೆಲ್ಲಾ ಮಾರ್ಗದರ್ಶನ ಮಾಡುತ್ತಿರುವಂತಹ ಈ ರಾಜ್ಯದ ನಾಯಕರಾದ ಡಿ.ಕೆ ಶಿವಕುಮಾರ್‌ರವರಿಗೆ ಕಾರ್ಯಕ್ರಮಕ್ಕೆ ಸ್ವಾಗತ ಮಾಡುತ್ತೇನೆ' ಎಂದು ಸಂಜೀವ ಮಠಂದೂರು ಸ್ವಾಗತಿಸಿದ್ದಾರೆ.

BJP MLA Sanjeeva Matandoor Praises D.K Shivakumar

ಪುತ್ತೂರು ಶಾಸಕ ಸಂಜೀವ ಮಠಂದೂರು ಅವರ ಈ ಸ್ವಾಗತ ಭಾಷಣ ಬಿಜೆಪಿ ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಿಸಿದೆ. ಕಾರ್ಯಕರ್ತರ ನಡುವೆ ಒಡಕು ಮೂಡಿಸಿ, ನಾಯಕರು ಮುಕ್ತಕಂಠದಲ್ಲಿ ರಾಜಕೀಯ ವಿರೋಧಿಗಳನ್ನು ಹೊಗಳುವುದು ಕಾರ್ಯಕರ್ತರನ್ನು ಖೆಡ್ಡಾಗೆ ಬೀಳಿಸಿದಂತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರಿದ್ದಾರೆ.

ಸಂಜೀವ ಮಠಂದೂರು ಪುತ್ತೂರು ಶಾಸಕರಾದ ಬಳಿಕ ಅಭಿವೃದ್ಧಿ ಪರವಾಗಿ ಮಠಂದೂರು ಕೆಲಸ ಮಾಡಿಲ್ಲ. ಬೇರೆ ಶಾಸಕರನ್ನು ಹೋಲಿಕೆ ಮಾಡಿದಾಗ ಮಠಂದೂರು ಅವರ ಸಾಧನೆ ಕಡಿಮೆ ಇದೆ. ಹೀಗಾಗಿ ಅಭ್ಯರ್ಥಿ ಬದಲಾವಣೆ ಮಾಡಬೇಕೆಂದು ಕಾರ್ಯಕರ್ತರ ವಲಯದಲ್ಲಿ ಕೂಗು ಎದ್ದಿದ್ದವು. ಈಗ ಶಾಸಕ ಮಠಂದೂರು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರನ್ನು ಈ ರೀತಿ ಸ್ವಾಗತ ಮಾಡಿರುವುದು ಶಾಸಕ ಅಭ್ಯರ್ಥಿ ಬದಲಾವಣೆ ಕೂಗಿಗೆ ಬಲ ಬಂದಂತಾಗಿದೆ ಎನ್ನುವುದು ಸ್ಥಳೀಯ ಬಿಜೆಪಿ ಕಾರ್ಯಕರ್ತರ ಮಾತು ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+