'ಮಂಗಳೂರು ಚಲೋ' ನಡೆಸುವ ನೈತಿಕತೆ ಬಿಜೆಪಿಗಿಲ್ಲ - ಮಿಥುನ್ ರೈ

ಮಂಗಳೂರು, ಸೆಪ್ಟೆಂಬರ್ 4: 'ಮಂಗಳೂರು ಚಲೋ' ಪ್ರತಿಭಟನಾ ಬೈಕ್ ಜಾಥಾ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಗಲಭೆ ಸೃಷ್ಠಿಸುವ ಅಜೆಂಡಾವನ್ನು ಬಿಜೆಪಿ ಹೊಂದಿದೆ ಎಂದು ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ ಆರೋಪಿಸಿದ್ದಾರೆ.

ಮಂಗಳೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು ಪಿ.ಎಫ್‌.ಐ ಮತ್ತು ಸಂಘ ಪರಿವಾರದ ಸಂಘಟನೆಗಳು ಮತೀಯ ಸಂಘಟನೆಗಳಾಗಿದ್ದು ಅವುಗಳನ್ನು ಈ ಕೂಡಲೇ ನಿಷೇಧಿಸಬೇಕೆಂದು ಒತ್ತಾಯಿಸಿದರು.

BJP has no right to Hold 'Mangaluru Chalo' – Mithun Rai

"ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿರುವ ಹಲವಾರು ಹತ್ಯೆ ಪ್ರಕರಣ ದಲ್ಲಿ ಸಂಘ ಪರಿವಾರದ ಸಂಘಟನೆಗಳ ಕಾರ್ಯಕರ್ತರು ಭಾಗಿಯಾಗಿರುವುದು ಈಗಾಗಲೇ ತಿಳಿದು ಬಂದಿದೆ. ಹೀಗಿರುವಾಗ ಶರತ್ ಮಡಿವಾಳ ಹತ್ಯೆ ಪ್ರಕರಣ ಮುಂದಿಟ್ಟು ಪ್ರತಿಭಟನಾ ಜಾಥಾ ನಡೆಸುವ ನೈತಿಕತೆ ಬಿಜೆಪಿಗೆ ಇಲ್ಲ," ಎಂದು ಅವರು ಕಿಡಿಕಾರಿದರು.

ಜಿಲ್ಲೆಯ ಸೌಹಾರ್ದತೆಗೆ ಧಕ್ಕೆ ತಂದು ಚುನಾವಣೆಗೂ ಮೊದಲು ಜಿಲ್ಲೆಯಲ್ಲಿ ಕೋಮು ಗಲಭೆ ಸೃಷ್ಠಿಸುವ ಹುನ್ನಾರವನ್ನು ಬಿಜೆಪಿ ನಡೆಸಿದೆ ಎಂದು ಅವರು ದೂರಿದರು.

"ದಕ್ಷಿಣ ಕನ್ನಡ ಜಿಲ್ಲೆ ಈ ಹಿಂದೆ ನಡೆದಿರುವ ಕೋಮು ಗಲಭೆಗಳಿಂದ ದೇಶದಲ್ಲೆ ಅಪಖ್ಯಾತಿಗೆ ಗುರಿಯಾಗಿದೆ. ಈ ಪರಿಣಾಮ ಜಿಲ್ಲೆಯ ಅಭಿವೃದ್ದಿ ಕುಂಟಿತಗೊಂಡಿದೆ. ಬಹುರಾಷ್ಟೀಯ ಕಂಪನಿಗಳು ಜಿಲ್ಲೆಗೆ ಬರಲು ಹಿಂದೇಟು ಹಾಕುತ್ತಿವೆ. ಇದರ ನಡುವೆ ಜಿಲ್ಲೆಯಲ್ಲಿ ಮತ್ತೆ ಕೋಮು ಗಲಭೆ ನಡೆದರೆ ಜಿಲ್ಲೆಯ ಆರ್ಥಕತೆಗೆ ಭಾರಿ ಧಕ್ಕೆಯಾಗಲಿದೆ," ಎಂದು ಅವರು ಅಭಿಪ್ರಾಯ ಪಟ್ಟರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+