ಮಂಗಳೂರಿನ ವೃದ್ಧನ ಕಾಮ ಪುರಾಣಕ್ಕೆ ಹೊಸ ಟ್ವಿಸ್ಟ್: ಕರವೇ ಮುಖಂಡೆ ಅರೆಸ್ಟ್
ಮಂಗಳೂರು, ಸೆಪ್ಟೆಂಬರ್ 26: ಮಂಗಳೂರಿನಲ್ಲಿ ಬೆಳಕಿಗೆ ಬಂದಿದ್ದ ಮುದುಕನ ಕಾಮ ಪುರಾಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ವೃದ್ಧನಿಂದ ಯುವತಿಯರಿಗೆ ಅನ್ಯಾಯವಾಗುತ್ತಿದೆ ಎಂದು ಹೇಳಿದ ಕರ್ನಾಟಕ ರಕ್ಷಣಾ ವೇದಿಕೆಯ ಮುಖಂಡೆ ಹನಿಟ್ರಾಪ್ ಮಾಡಿಸಿರುವುದು ಈಗ ಬಯಲಾಗಿದೆ.
ಮಂಗಳೂರಿನ ಯೆಯ್ಯಾಡಿ ದತ್ತ ನಗರ ನಿವಾಸಿ, ಕೇರಳ ಮೂಲದ ಉದ್ಯಮಿ ಶಶಿ (65) ತನ್ನ ಕಾಮದಾಟವನ್ನು ವಿಡಿಯೋ ಮಾಡುವ ಚಟ ಹೊಂದಿದ್ದ. ಈ ದೌರ್ಬಲ್ಯ ಅರಿತಿದ್ದ ಕರವೇ ಮುಖಂಡೆ ಶ್ರೀಲತಾ ಖೆಡ್ಡಾ ತೋಡಿದಳು.ಆದರೆ ತಾನೇ ಆ ಖೆಡ್ಡಾಕ್ಕೆ ಬೀಳುತ್ತೇನೆ ಎಂದು ಆಕೆ ಊಹಿಸಿರಲಿಲ್ಲ. ಇದೀಗ ಶಶಿ ಅವರಿಂದ ಹಣ ಸುಲಿಗೆ ಮಾಡಲು ಕರವೇ ಮುಖಂಡೆ ಹನಿಟ್ರಾಪ್ ಮಾಡಿಸಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಶ್ರೀಲತಾ ಕಳೆದ ಭಾನುವಾರ ಸೆಪ್ಟೆಂಬರ್.23ರ ಸಂಜೆ ಲೈಂಗಿಕ ಕ್ರಿಯೆಗೆ ಬಳಕೆ ಆರೋಪದ ಮೇಲೆ 65 ವರ್ಷ ಪ್ರಾಯದ ಶಶಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದಳು.

ಈ ವೇಳೆ ಯುವತಿಯರ ದೂರಿನ ಆಧಾರದ ಮೇಲೆ ಕಾರ್ಯಾಚರಣೆ ಮಾಡಿ ಆರೋಪಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಕೊಟ್ಟಿರೋದಾಗಿ ಮಾಧ್ಯಮಗಳ ಮುಂದೆ ಹೇಳಿಕೆಯನ್ನೂ ಶ್ರೀಲತಾ ನೀಡಿದ್ದಳು. ಆದರೆ ಈ ನಡುವೆ ಆರೋಪಿ ಶಶಿ ಕೂಡ ಮುಂಗಳೂರಿನ ಬರ್ಕೆ ಠಾಣೆಯಲ್ಲಿ ಶ್ರೀಲತಾ ಅವರ ಮೇಲೆ ಹಣ ಸುಲಿಗೆ ದೂರು ನೀಡಿದ್ದ.
ಪ್ರಕರಣ ತನಿಖೆ ನಡೆಸಿದ ಬರ್ಕೆ ಠಾಣಾ ಪೊಲೀಸರು ಪ್ರಕರಣದ ಸತ್ಯಾಂಶ ಬಯಲಿಗೆಳೆದಿದ್ದಾರೆ. ಉದ್ಯಮಿ ಚಟವನ್ನು ಅರಿತ ಶ್ರೀಲತಾ ಅವನ ಜೊತೆ ನಯವಾಗಿ ಮಾತನಾಡಿ ಮಂಗಳೂರಿನ ಸ್ಥಳವೊಂದಕ್ಕೆ ಬರಲು ತಿಳಿಸಿದ್ದಳು.
ಈ ವೇಳೆ ಆಕೆಯ ಸ್ನೇಹಿತೆಗೆ ಕರೆ ಮಾಡಿ ಬೇರೊಂದು ಕಾರ್ ನಲ್ಲಿ ಉದ್ಯಮಿ ಯನ್ನು ಅಪಹರಿಸಿದ್ದಾರೆ. 5 ಲಕ್ಷ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾಳೆ . ಆದರೆ ಉದ್ಯಮಿ ಶಶಿ ಒಪ್ಪದಿದ್ದಾಗ ತನ್ನಲ್ಲಿರುವ ಸೆಕ್ಸ್ ವಿಡಿಯೋ ಗಳನ್ನು ಬಯಲು ಮಾಡುವುದಾಗಿ ಬೆದರಿಸಿದ್ದಾಳೆ ಎಂದು ಹೇಳಲಾಗಿದೆ.

ಈ ವೇಳೆ ಉದ್ಯಮಿ ಯ ಚೈನ್, ಉಂಗುರ, ವಾಚ್, ಪರ್ಸ್ ನಲ್ಲಿದ್ದ 18ಸಾವಿರ ರೂಪಾಯಿ ವಸೂಲಿ ಮಾಡಿದ್ದಾಳೆ. ಪ್ರಕರಣವನ್ನು ಬೇಧಿಸಿದ ಪೊಲೀಸರು ಕರವೇ ಮುಖಂಡೆ ಶ್ರೀಲತಾ, ಆಕೆಯ ಸ್ನೇಹಿತರಾದ ಸುಜಿತ್, ಅಭಿಜಿತ್, ರಾಕೇಶ್ ಎಂಬವರನ್ನು ಈಗ ಬಂಧಿಸಿದ್ದಾರೆ.












Click it and Unblock the Notifications