ದಕ್ಷಿಣ ಕನ್ನಡ ಎಸ್ಪಿ ಬೋರಸೆ ಔಟ್, ಸುಧೀರ್ ಕುಮಾರ್ ರೆಡ್ಡಿ ಇನ್
ಮಂಗಳೂರು, ಜೂನ್ 21 : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಭೂಷಣರಾವ್ ಬೋರಸೆ ಅವರನ್ನು ವರ್ಗಾವಣೆ ಬುಧವಾರ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ.
ಅವರ ಜಾಗಕ್ಕೆ ದಕ್ಷಿಣ ಕನ್ನಡ ಜಿಲ್ಲೆ ವರಿಷ್ಠಾಧಿಕಾರಿಯಾಗಿ ಮಂಡ್ಯ ಎಸ್ಪಿಯಾಗಿದ್ದ ಸುಧೀರ್ ಕುಮಾರ್ ರೆಡ್ಡಿ ಅವರನ್ನು ನೇಮಕಗೊಳಿಸಿ, ಭೂಷಣರಾವ್ ಬೋರಸೆ ಅವರನ್ನು ಬೆಂಗಳೂರು ಡಿಸಿಪಿ ಆಗಿ ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ.

ದಕ್ಷಿಣ ಕನ್ನಡ ಜಿಲ್ಲೆ ಎಸ್ಪಿ ಆಗಿ ಖಡಕ್ ಐಪಿಎಸ್ ಅಧಿಕಾರಿ ಎಂದೇ ಕರೆಸಿಕೊಂಡಿರುವ ಚಿಕ್ಕಮಗಳೂರು ಜಿಲ್ಲಾ ಎಸ್‌ಪಿ ಅಣ್ಣಾಮಲೈ ಅವರು ಬರಲಿದ್ದಾರೆ ಎಂದು ಎನ್ನುವ ಸುದ್ದಿ ಕಳೆದ ಕೆಲವು ದಿನಗಳಿಂದ ಜಿಲ್ಲೆಯಾದ್ಯಂತ ಹರಿದಾಡುತ್ತಿದ್ದವು.
ಆದರೆ, ಇದೀಗ ಸರ್ಕಾರ ಸುಧೀರ್ ಕುಮಾರ್ ರೆಡ್ಡಿ ಅವರನ್ನು ಎಸ್ಪಿ ಆಗಿ ವರ್ಗಾವಣೆ ಮಾಡಿದೆ.












Click it and Unblock the Notifications