ತುಳು ಸಾಹಿತ್ಯಕ್ಕೆ ಹೊಸ ಮೈಲಿಗಲ್ಲು: ತುಳು ಲಿಪಿಯಲ್ಲಿ ಭಗವದ್ಗೀತೆ ರಚಿಸಿದ ಪುತ್ತೂರಿನ ಯುವತಿ

ಮಂಗಳೂರು, ಆಗಸ್ಟ್‌ 04: ತುಳು ಭಾಷೆಗೆ ಲಿಪಿ ಇದೆ ಎನ್ನುವುದು ಸಾಕಷ್ಟು ಜನರಿಗೆ ಗೊತ್ತೇ ಇಲ್ಲ.ಆದರೆ ತುಳು ಭಾಷೆಗೂ ಲಿಪಿ ಇದೆ. ಅದಕ್ಕೂ ನೂರಾರು ವರ್ಷಗಳ ಇತಿಹಾಸ ವಿದೆ ಎನ್ನುವುದನ್ನು ತುಳು ಅಧ್ಯಯನಕಾರರು ಹಲವು ರೂಪದಲ್ಲಿ ರುಜುವಾತು ಪಡಿಸಿದ್ದಾರೆ. ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಯುವತಿ ತುಳು ಭಾಷೆಯಲ್ಲೇ ಭಗವದ್ಗೀತೆ ಬರೆಯುವ ಮೂಲಕ ತುಳು ಭಾಷೆಗೆ ಹೊಸ ಕೊಡುಗೆ ನೀಡಿದ್ದಾರೆ.

ಪುತ್ತೂರಿನ ನರಿಮೊಗರಿನ ಕೊಡಂಕೇರಿ ನಿವಾಸಿ ಅಪರ್ಣಾ ಈ ನೂತನ ಪ್ರಯತ್ನವನ್ನು ಮಾಡಿದ ಸಾಧಕಿ. ಭರತನಾಟ್ಯ ಕಲಾವಿದೆಯೂ ಆಗಿರುವ ಅಪರ್ಣಾ ಈಗ ಭಗವದ್ಧೀತೆಯ 18 ಅಧ್ಯಾಯದ ಶ್ಲೋಕ ಮತ್ತು ಸಾರವನ್ನು ತುಳು ಲಿಪಿಯಲ್ಲಿ ಮತ್ತು ಕನ್ನಡ ಲಿಪಿಯ ಮೂಲಕ ತುಳುವಿನಲ್ಲಿ ಬರೆದಿದ್ದು, ತುಳು ಸಾಹಿತ್ಯಕ್ಕೆ ಕೊಡುಗೆ ನೀಡಿದ್ದಾರೆ.

bharatnatyam-dancer-creat-bhagavad-gita

ಹಿಂದೂ ಧರ್ಮದ ಪರಮೋಚ್ಚ ಗ್ರಂಥವಾದ 'ಭಗವದ್ಗೀತೆ'ಯನ್ನು ತುಳು ಲಿಪಿಯನ್ನು ಬಳಸಿ ಅನುವಾದಿಸಿ ಮೊದಲ ಪ್ರಯತ್ನದಲ್ಲೇ ಅಪರ್ಣಾ ಎಲ್ಲರ‌ ಮೆಚ್ಚುಗೆ ಗಳಿಸಿದ್ದಾರೆ. ಸರಳವಲ್ಲದ ತುಳು ಭಾಷೆಯಲ್ಲಿ ಭಗವದ್ಗೀತೆ ಬರೆಯುವ ಮೂಲಕ ತುಳು ಭಾಷಾ ಅಧ್ಯಯನಕಾರರಿಗೆ ಹೊಸ ಮೇಲ್ಪಂಕ್ತಿಯನ್ನು ಅಪರ್ಣಾ ಹಾಕಿದ್ದಾರೆ.

ಅಪರ್ಣಾ ಅವರ ಈ ಪುಸ್ತಕವನ್ನು ಇತ್ತೀಚಿಗೆ ಶ್ರೀಕ್ಷೇತ್ರ ನರಸಿಂಹ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮಿಗಳು, ವಿದ್ವಾಂಸ ಲಕ್ಷ್ಮೀಶ ತೋಳ್ಪಾಡಿ ಮತ್ತು ಸುಬ್ರಹ್ಮಣ್ಯ ಮಠದ ವೇದವ್ಯಾಸ ಸಂಶೋಧನಾ ಕೇಂದ್ರದ ಆನಂದತೀರ್ಥ ಸಗ್ರಿ ಅವರ ಸಮ್ಮುಖದಲ್ಲಿ ಇತ್ತೀಚೆಗೆ ಪುಸ್ತಕ ಬಿಡುಗಡೆ ಮಾಡಲಾಗಿದೆ.

ಕೋವಿಡ್ ಸಮಯದಲ್ಲಿ ಮನೆಯಲ್ಲೇ ಇದ್ದ ಸಂದರ್ಭದಲ್ಲಿ ಅಪರ್ಣಾ ಕೊಡಂಕೇರಿ ತನ್ನ ಸಹೋದರ ಮುಕುಂದ ಅವರು ಕಲಿಸಿಕೊಟ್ಟ ತುಳು‌ ಲಿಪಿಯನ್ನು ಅಭ್ಯಾಸ ಮಾಡಿ ಬರೆಯಲು ಶುರು ಮಾಡಿದ್ದರು. ಹೀಗೆ ಬರೆಯುವ ಸಮಯದಲ್ಲಿ ಮಹಾಭಾರತದಲ್ಲಿ ಶ್ರೀ ಕೃಷ್ಣ ಭೋಧಿಸಿದ ಭಗವದ್ಗೀತೆಯನ್ನು ತುಳು ಭಾಷೆ ಮತ್ತು ಲಿಪಿಯಲ್ಲಿ ಏಕೆ ಬರೆಯಬಾರದು ಎನ್ನುವ ಮನಸ್ಸಲ್ಲಿ ಮೂಡಿತ್ತು.

bharatnatyam-dancer-creat-bhagavad-gita

ತುಳು ಮಾತೃಭಾಷೆಯ ಜನಕ್ಕೆ ತುಳುವಲ್ಲಿ ಬರೆದರೆ, ಮಾತನಾಡಿದರೆ ಅದು ಹೃದಯಕ್ಕೆ ತೀರಾ ಹತ್ತಿರವಾಗಿರುತ್ತೆ ಎನ್ನುವ ಕಾರಣಕ್ಕೆ ಭಗವದ್ಗೀತೆಯ 18 ಅಧ್ಯಾಯದ ಶ್ಲೋಕದ ಸಾರ ಹಾಗು ತಾತ್ಪರ್ಯಗಳನ್ನು ತುಳು ಲಿಪಿ ಮತ್ತು ಕನ್ನಡ ಲಿಪಿಯನ್ನು ಬಳಸಿ ತುಳುವಲ್ಲಿ ಅಪರ್ಣಾ ಬರೆದಿದ್ದಾರೆ.

ಪುಸ್ತಕದ ಪ್ರತೀ ಪುಟದಲ್ಲಿ ಎಡ ಭಾಗದಲ್ಲಿ ಸಂಪೂರ್ಣ ತುಳು ಲಿಪಿಯನ್ನು ಬಳಸಿ ಶ್ಲೋಕ ಮತ್ತು ಸಾರವನ್ನು ಬರೆಯಲಾಗಿದ್ದು, ಬಲ ಭಾಗದಲ್ಲಿ ಕನ್ನಡ ಲಿಪಿ ಬಳಸಿ ತುಳುವಿನಲ್ಲಿ ಶ್ಲೋಕದ ಅರ್ಧವನ್ನು ಬರೆಯಲಾಗಿದೆ. ತುಳು ಲಿಪಿಯಲ್ಲಿ ಭಗವದ್ಗೀತೆಯನ್ನು ಬರೆದಿರುವುದು ಇದೇ ಮೊದಲಾಗಿದ್ದು, ತುಳು ಭಾಷೆಯ ಬೆಳವಣಿಗೆಗೆ ಅಪರ್ಣಾ ಕೊಡಂಕೇರಿ ತನ್ನದೇ ಆದ ಕೊಡುಗೆಯನ್ನು ಈ ಸಾಧನೆಯ ಮೂಲಕ ನೀಡಿದ್ದಾರೆ.

ತಮ್ಮ ಸಾಧನೆಯ ಬಗ್ಗೆ ಮಾತನಾಡಿರುವ ಅಪರ್ಣಾ, 'ತುಳು ಲಿಪಿ ಕಲಿಯಬೇಕೆಂಬ ಆಸೆ ಇತ್ತು. ತುಳು ಲಿಪಿಯಲ್ಲಿ ನೈಪುಣ್ಯತೆಯನ್ನು ಪಡೆದಿದ್ದ ಅಣ್ಣ, ಲಾಕ್‌ಡೌನ್‌ ವೇಳೆ ತುಳು ಲಿಪಿಯನ್ನು ಕಲಿಸಿದ್ದರು. ಮೊದಲು ಕಷ್ಟ ಅನಿಸಿದರೂ ಬಳಿಕ ತುಳು ಲಿಪಿ ಕಲಿಯೋದು, ಬರೆಯೋದು ಆಸಕ್ತಿಯ ವಿಚಾರವಾಯಿತು. ತುಳು ಲಿಪಿಯಲ್ಲಿ ಭಗವದ್ಗೀತೆ ಬರೆಯಬೇಕೆಂಬ ದೊಡ್ಡ ನಿರ್ಧಾರ ತೆಗೆದುಕೊಂಡ ಬಳಿಕ ಅದಕ್ಕಾಗಿ ಸಮಯ ಇರಿಸಿ ಇದೀಗ ಪುಸ್ತಕ ಬಿಡುಗಡೆಯಾಗಿದೆ. ಖುಷಿಯಾಗಿದೆ' ಎಂದು ಅಪರ್ಣಾ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+