ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಜ.21ರಿಂದ ಆಯುಷ್ ಎಕ್ಸ್ ಪೋ

|
Google Oneindia Kannada News

ಮಂಗಳೂರು, ಜ. 5 : ಆಯುಷ್‌ ವೈದ್ಯಪದ್ಧತಿಯ ಮಹತ್ವದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಬೆಂಗಳೂರಿನಲ್ಲಿ ರಾಷ್ಟ್ರೀಯ ಮಟ್ಟದ ಆಯುಷ್‌ ಎಕ್ಸ್‌ ಪೋ ವನ್ನು ಜ. 21ರಿಂದ 25ರ ವರೆಗೆ ಆಯೋಜಿಸಲಾಗಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

ಮಂಗಳೂರಿನ ಸರ್ಕಿಟ್‌ ಹೌಸ್‌ನಲ್ಲಿ ಭಾನುವಾರ ಮಾತನಾಡಿದ ಸಚಿವ ಯು.ಟಿ.ಖಾದರ್, ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಭಾರತೀಯ ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆಗಳ ಒಕ್ಕೂಟದ ಸಹಯೋಗದಲ್ಲಿ ಐದು ದಿನಗಳ ಎಕ್ಸ್ ಪೋ ಹಮ್ಮಿಕೊಳ್ಳಲಾಗಿದೆ ಎಂದರು. [ಆಯುಷ್ ಇಲಾಖೆ ವೆಬ್ ಸೈಟ್]

ut khader

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಕ್ಸ್‌ ಪೋ ಉದ್ಘಾಟಿಸಲಿದ್ದು, ಸುಮಾರು 5,000 ಪ್ರತಿನಿಧಿಗಳು ಹಾಗೂ 200ಕ್ಕೂ ಅಧಿಕ ಆಯುಷ್‌ ಔಷಧ ತಯಾರಿಕಾ ಉದ್ದಿಮೆಗಳು ಇದರಲ್ಲಿ ಭಾಗವಹಿಸಲಿವೆ ಎಂದರು. ಆಯುಷ್‌ಗೆ ಸಂಬಂಧಪಟ್ಟಂತೆ ಔಷಧಗಳು, ಅವಿಷ್ಕಾರಗಳು, ವಿಚಾರ ಸಂಕಿರಣಗಳನ್ನು ಎಕ್ಸ್‌ ಪೋ ಒಳಗೊಂಡಿರುತ್ತದೆ ಎಂದು ಮಾಹಿತಿ ನೀಡಿದರು.[ಯು.ಟಿ.ಖಾದರ್ ಮಾನವೀಯತೆಗೆ ಸಲಾಂ]

ಆಯುಷ್‌ ವೈದ್ಯಪದ್ಧತಿಯ ಮಹತ್ವದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಆರೋಗ್ಯ ಇಲಾಖೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಹೇಳಿದ ಸಚಿವರು, ವಿದೇಶಗಳಲ್ಲೂ ಆಯುಷ್‌ ಪದ್ಧತಿಗೆ ಬೇಡಿಕೆ ಇದೆ. ಇತ್ತೀಚೆಗೆ ಜರ್ಮನಿಯಿಂದ ತಂಡವೊಂದು ಕರ್ನಾಟಕಕ್ಕೆ ಭೇಟಿ ನೀಡಿ ಆಯುಷ್‌ ವೈದ್ಯರಿಗಾಗಿ ಬೇಡಿಕೆ ಸಲ್ಲಿಸಿದೆ ಎಂದರು.

ರಾಜ್ಯದಲ್ಲಿ ಆಯುಷ್‌ ವಿವಿ : ಕರ್ನಾಟಕದಲ್ಲಿ ಆಯುಷ್‌ಗೆ ಸಂಬಂಧಪಟ್ಟಂತೆ 70ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳಿವೆ. ಆದ್ದರಿಂದ ಪ್ರತ್ಯೇಕ ಆಯುಷ್‌ ವಿವಿ ಸ್ಥಾಪಿಸುವಂತೆ ಬೇಡಿಕೆ ಇದೆ. ಶಿವಮೊಗ್ಗದಲ್ಲಿ ವಿವಿ ಸ್ಥಾಪನೆಗೆ ಅಗತ್ಯವಾದ ಭೂಮಿ ಇದೆ. ಇಲ್ಲಿ ಮೊದಲು ಕಾಲೇಜು ನಿರ್ಮಿಸಿ ನಂತರ ವಿವಿ ಸ್ಥಾಪನೆ ಬಗ್ಗೆ ಚಿಂತಿಸಲಾಗುವುದು ಎಂದರು.

English summary
Karnataka Health Minister U.T.Khader said, The Department of Health and Federation of Indian Chambers of Commerce and Industry (FICCI) will jointly organize a five-day national-level AYUSH exposition in Bengaluru from January 21.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X