ಅನಂತ ಚತುರ್ದಶಿ ಸಂಭ್ರಮದ ಚಿತ್ರಗಳು
ಮಂಗಳೂರು, ಸೆ.8 : ನಗರದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಾಲಯದಲ್ಲಿ ಇಂದು ಅನಂತ ಚತುರ್ದಶಿ ವೃತದ ಸಂಭ್ರಮ. ದೇವರ ವಿಗ್ರಹಕ್ಕೆ ವಿಶೇಷ ಸ್ವರ್ಣಲಂಕಾರ ಮಾಡಿ ಚತುರ್ಥಿಯನ್ನು ಆಚರಿಸಲಾಯಿತು. ಸಾವಿರಾರು ಭಕ್ತಾದಿಗಳು ದೇವಾಲಯಕ್ಕೆ ಆಗಮಿಸಿ ದೇವರ ದರ್ಶನ ಪಡೆದು ಪುನೀತರಾದರು.
ಅನಂತ ಚತುರ್ದಶಿ ದಿನದಂದು ಶ್ರೀ ವಿಷ್ಣು ಅನಂತ ಪದ್ಮನಾಭ ದೇವರಾಗಿ ಭೂಮಿಯಲ್ಲಿ ಅವತಾರ ತಾಳಿದರು ಎಂಬ ನಂಬಿಕೆಯಿದೆ. ಇಂದು ಅನಂತ ಪದ್ಮನಾಭ ದೇವರನ್ನು ಪೂಜಿಸಿದರೆ, ಭಕ್ತರ ಎಲ್ಲ ಪ್ರಾರ್ಥನೆ, ಬೇಡಿಕೆಗಳನ್ನು ಈಡೇರುತ್ತದೆ ಎಂಬ ನಂಬಿಕೆಯೂ ಇದೆ.
ಮಂಗಳೂರಿನ ರಥಬೀದಿಯಲ್ಲಿರುವ ಶ್ರೀ ಮಹಾಮಾಯ ದೇವಸ್ಥಾನ, ಆಚಾರ್ಯ ಮಠ, ವರದರಾಜ ಮಠ, ಕಾತ್ಯಾಯನಿ ಮಠ, ಕಾನ್ಕತ್ರಿ ಮಠ, ನಂದಾದೀಪ, ಜೋಡು ಮಠ, ಗೌರಿ ಮಠ, ಗೋಕರ್ಣ ಮಠ ಮುಂತಾದ ಕಡೆಯೂ ಅನಂತ ಚತುರ್ದಶಿಯನ್ನು ಆಚರಣೆ ಮಾಡಲಾಯಿತು.

ಇಂದು ಅನಂತ ಚತುರ್ದಶಿ ಆಚರಣೆ
ಮಂಗಳೂರಿನ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಾಲಯದಲ್ಲಿ ಇಂದು ಅನಂತ ಚತುರ್ದಶಿ ವೃತದ ಸಂಭ್ರಮ. ದೇವರ ವಿಗ್ರಹಕ್ಕೆ ವಿಶೇಷ ಸ್ವರ್ಣಲಂಕಾರ ಮಾಡಿ ಚತುರ್ದಶಿಯನ್ನು ಆಚರಿಸಲಾಯಿತು.

ಸಾವಿರಾರು ಭಕ್ತಾದಿಗಳ ಆಗಮನ
ಅನಂತ ಚತುರ್ದಶಿ ಹಿನ್ನಲೆಯಲ್ಲಿ ಸಾವಿರಾರು ಭಕ್ತಾದಿಗಳು ವೆಂಕಟರಮಣ ದೇವಾಲಯಕ್ಕೆ ಆಗಮಿಸಿ ದೇವರ ದರ್ಶನ ಪಡೆದು ಪುನೀತರಾದರು.

ವಿಷ್ಣು ಭೂಮಿಗೆ ಬಂದ ದಿನ
ಅನಂತ ಚತುರ್ದಶಿ ದಿನದಂದು ಶ್ರೀ ವಿಷ್ಣು ಅನಂತ ಪದ್ಮನಾಭ ದೇವರಾಗಿ ಭೂಮಿಯಲ್ಲಿ ಅವತಾರ ತಾಳಿದರು ಎಂಬ ನಂಬಿಕೆಯಿದೆ. ಇಂದು ಅನಂತ ಪದ್ಮನಾಭ ದೇವರನ್ನು ಪೂಜಿಸಿದರೆ, ಭಕ್ತರ ಎಲ್ಲ ಪ್ರಾರ್ಥನೆ, ಬೇಡಿಕೆಗಳನ್ನು ಈಡೇರುತ್ತದೆ ಎಂಬ ನಂಬಿಕೆಯೂ ಇದೆ.

ಹಣ್ಣು-ತರಕಾರಿಗಳ ಅಲಂಕಾರ
ಅನಂತ ಚತುರ್ದಶಿ ಪ್ರಯುಕ್ತ ದೇವಾಲಯದಲ್ಲಿ ಹಣ್ಣು ಮತ್ತು ತರಕಾರಿಗಳ ಅಲಂಕಾರ ಮಾಡಲಾಗಿತ್ತು.

ಗಣೇಶನ ಚತುರ್ಥಿ ಕೊನೆಯ ದಿನ
ಭಾದ್ರಪದ ಶುಕ್ಲ ಪಕ್ಷ ಚತುರ್ದಶಿಯನ್ನು 'ಅನಂತ ಚತುರ್ದಶಿ' ಎಂದು ಕರೆಯುತ್ತಾರೆ. ಈ ದಿನವು ಶ್ರೀ ಗಣೇಶ ಚತುರ್ಥಿ ಆಚರಣೆಯ ಕೊನೆಯ ದಿನವೂ ಹೌದು. ಅನೇಕರು ಇಂದು ಮನೆಯಲ್ಲಿಟ್ಟು ಪೂಜಿಸುತ್ತಿದ್ದ ಗಣೇಶನನ್ನು ವಿಸರ್ಜನೆ ಮಾಡುತ್ತಾರೆ.












Click it and Unblock the Notifications