ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಆಳ್ವಾಸ್ ಗೆ ಸಮಗ್ರ ಪ್ರಶಸ್ತಿ
ಮಂಗಳೂರು, ಅಕ್ಟೋಬರ್ 23: : ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ಕರ್ನಾಟಕ ರಾಜ್ಯ ಮಟ್ಟದ 17 ವಯೋಮಿತಿ ವಿಭಾಗದ ಪ್ರೌಢ ಶಾಲಾ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ದಕ್ಷಿಣ ಕನ್ನಡವನ್ನು ಪ್ರತಿನಿಧಿಸಿದ ಆಳ್ವಾಸ್ ಪ್ರೌಢಶಾಲೆಯ ವಿದ್ಯಾರ್ಥಿಗಳು ದಾಖಲೆ ನಿರ್ಮಿಸಿದ್ದಾರೆ.
ಒಟ್ಟು 17 ಚಿನ್ನ, 04 ಬೆಳ್ಳಿ ಹಾಗೂ 08 ಕಂಚಿನ ಪದಕಗಳನ್ನು ಪಡೆದು ಒಟ್ಟು 29 ಪದಕಗಳನ್ನು ಗೆದ್ದು 4 ನೂತನ ಕೂಟ ದಾಖಲೆಗಳನ್ನು ನಿರ್ಮಿಸಿ ಸಾಧನೆ ಮೆರೆದಿದ್ದಾರೆ.

17 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ನಾಗೇಂದ್ರ ಅಣ್ಣಪ್ಪ ನಾಯಕ್- ಚಕ್ರ ಎಸೆತ, ರಿನ್ಸ್ ಜೋಸೆಫ್ - 400ಮೀ, ಗೋಪಾಲಕೃಷ್ಣ- ಪೋಲ್‍ವಾಲ್ಟ್, ಅಜಿತ್ ಎ.- ಎತ್ತರ ಜಿಗಿತದಲ್ಲಿ ನೂತನ ಕೂಟ ದಾಖಲೆ ನಿರ್ಮಿಸಿದರು.
ಈ ಕ್ರೀಡಾಕೂಟದ ಅತ್ಯುತ್ತಮ ಕ್ರೀಡಾಪಟು ಪ್ರಶಸ್ತಿಯನ್ನು 17 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ನಾಗೇಂದ್ರ ಅಣ್ಣಪ್ಪ ನಾಯಕ್ ಪಡೆದುಕೊಂಡರು.
ಆಳ್ವಾಸ್ ಪ್ರೌಢಶಾಲೆಯಿಂದ 16 ಜನ ಕ್ರೀಡಾಪಟುಗಳು ಮುಂದಿನ ನವೆಂಬರ್ ನಲ್ಲಿ ಭೋಪಾಲ್ ನಲ್ಲಿ ನಡೆಯುವ ರಾಷ್ಟ್ರ ಮಟ್ಟದ ಸ್ಕೂಲ್ ಗೇಮ್ಸ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಲಿದ್ದಾರೆ.












Click it and Unblock the Notifications