ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇದು ಸುಳ್ಳು ಸುದ್ದಿಯಲ್ಲ; ಶುಕ್ರವಾರ ಪಂಪ್‌ವೆಲ್ ಫ್ಲೈ ಓವರ್ ಉದ್ಘಾಟನೆ

|
Google Oneindia Kannada News

ಮಂಗಳೂರು, ಜನವರಿ 30 : ಹಲವಾರು ಬಾರಿ ಗಡುವು ಮೀರಿದ್ದ, ಸಾಮಾಜಿಕ ಜಾಲತಾಣದಲ್ಲಿ ಕಟು ಟೀಕೆಗೆ ಒಳಗಾಗಿದ್ದ. ಹಲವು ನಾಯಕರ ಪ್ರತಿಷ್ಠೆಯ ಪ್ರಶ್ನೆಯಾಗಿದ್ದ ದಕ್ಷಿಣ ಕನ್ನಡದ ಪಂಪ್ ವೆಲ್ ಫ್ಲೈ ಓವರ್ ಶುಕ್ರವಾರ ಉದ್ಘಾಟನೆಯಾಗಲಿದೆ.

ಇದು ಸುಳ್ಳು ಸುದ್ದಿ ಎಂದು ನೀವು ಮೂಗು ಮುರಿಯುವುದು ಬೇಡ. ನಿಜವಾಗಿಯೂ ಪಂಪ್ ವೆಲ್ ಫ್ಲೈ ಓವರ್ ಕಾಮಗಾರಿ ದಶಕಗಳ ಬಳಿಕ ಮುಕ್ತಾಯಗೊಂಡಿದ್ದು, ಶುಕ್ರವಾರ ವಾಹನ ಸಂಚಾರಕ್ಕೆ ಮುಕ್ತವಾಗಲಿದೆ.

ಮಂಗಳೂರಿನ ಪಂಪ್ ವೆಲ್ ಫ್ಲೈ ಓವರ್ ಉದ್ಘಾಟನೆಗೆ ದಿನಾಂಕ ನಿಗದಿಮಂಗಳೂರಿನ ಪಂಪ್ ವೆಲ್ ಫ್ಲೈ ಓವರ್ ಉದ್ಘಾಟನೆಗೆ ದಿನಾಂಕ ನಿಗದಿ

ರಾಷ್ಟ್ರೀಯ ಹೆದ್ದಾರಿ 66ರಲ್ಲಿರುವ ಪಂಪ್ ವೆಲ್ ಫ್ಲೈ ಓವರ್ ಕಾಮಗಾರಿ 2010ರಲ್ಲಿ ಆರಂಭವಾಗಿತ್ತು. ಹಲವು ಗಡುವುಗಳನ್ನು ಮೀರಿ, ಈಗ ಕಾಮಗಾರಿ ಪೂರ್ಣಗೊಂಡಿದೆ. ಜನವರಿ 31, 2020ರಂದು ಲೋಕಾರ್ಪಣೆಯಾಗುತ್ತಿದೆ.

'ಪಂಪ್ ವೆಲ್ ಫ್ಲೈ ಓವರ್ ಕಾಮಗಾರಿ ವಿಳಂಭಕ್ಕೆ ರಾಜ್ಯ ಸರಕಾರ ಹೊಣೆ''ಪಂಪ್ ವೆಲ್ ಫ್ಲೈ ಓವರ್ ಕಾಮಗಾರಿ ವಿಳಂಭಕ್ಕೆ ರಾಜ್ಯ ಸರಕಾರ ಹೊಣೆ'

ಪಂಪ್ ವೆಲ್ ಫ್ಲೈ ಓವರ್ ಕಾಮಗಾರಿ ಬಗ್ಗೆ ಕೇಳಿ ಬಂದಷ್ಟು ಟೀಕೆಗಳು ಕರ್ನಾಟಕದ ಯಾವುದೇ ರಸ್ತೆ ಯೋಜನೆ ಬಗ್ಗೆ ಆದಂತಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಹಲವಾರು ಟ್ರಾಲ್‌ಗಳಿವೆ. ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಕೊಟ್ಟ ಮಾತು ಉಳಿಸಿಕೊಂಡಿದ್ದು, ಜನವರಿ 31ಕ್ಕೆ ಕಾಮಗಾರಿ ಮುಗಿದಿದೆ.

ದಕ್ಷಿಣ ಭಾರತದಲ್ಲಿಯೇ ಕರ್ನಾಟಕದ ರಸ್ತೆ ಅಪಾಯಕಾರಿ! ದಕ್ಷಿಣ ಭಾರತದಲ್ಲಿಯೇ ಕರ್ನಾಟಕದ ರಸ್ತೆ ಅಪಾಯಕಾರಿ!

ಹಲವು ಗಡುವುಗಳನ್ನು ಮೀರಿದೆ

ಹಲವು ಗಡುವುಗಳನ್ನು ಮೀರಿದೆ

2010ರಲ್ಲಿ ನವಯುಗ ಕಂಪನಿ ಗುತ್ತಿಗೆಯನ್ನು ಪಡೆದುಕೊಂಡು ಮಂಗಳೂರಿನಲ್ಲಿ ಪಂಪ್ ವೆಲ್ ಫ್ಲೈ ಓವರ್ ಕಾಮಗಾರಿಯನ್ನು ಆರಂಭಿಸಿತ್ತು. ಟೆಂಡರ್‌ನಲ್ಲಿ ಸೂಚನೆ ನೀಡಿದಂತೆ 2013ರಲ್ಲಿ ಕಾಮಗಾರಿ ಮುಕ್ತಾಯಗೊಂಡು ವಾಹನ ಸಂಚಾರ ಆರಂಭವಾಗಬೇಕಿತ್ತು. ಆದರೆ, 2020ರ ಜನವರಿ 31ಕ್ಕೆ ಫ್ಲೈ ಓವರ್ ಲೋಕಾರ್ಪಣೆಗೊಳ್ಳುತ್ತಿದೆ.

ಸಂಸದರಿಂದ ಪರಿಶೀಲನೆ

ಸಂಸದರಿಂದ ಪರಿಶೀಲನೆ

ಬುಧವಾರ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಪಂಪ್ ವೆಲ್ ಫ್ಲೈ ಓವರ್ ಅಂತಿಮ ಹಂತದ ಕಾಮಗಾರಿಯನ್ನು ವೀಕ್ಷಣೆ ಮಾಡಿದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು. ಮೊದಲೇ ನೀಡಿದ ಭರವಸೆಯಂತೆ ಜನವರಿ 31ರಂದು ಫ್ಲೈ ಓವರ್ ಉದ್ಘಾಟನೆಯಾಗಲಿದೆ.

ಜನವರಿ 1ರ ಗಡುವು

ಜನವರಿ 1ರ ಗಡುವು

ಜನವರಿ 1ರಂದು ಪಂಪ್ ವೆಲ್ ಫ್ಲೈ ಓವರ್ ಉದ್ಘಾಟನೆಯಾಗಲಿದೆ ಎಂದು ಮೊದಲು ಗಡುವು ನೀಡಲಾಗಿತ್ತು. ಆದರೆ, ಕಾಮಗಾರಿ ಪೂರ್ಣಗೊಳ್ಳದ ಕಾರಣ ಜನವರಿ 31ರಂದು ಲೋಕಾರ್ಪಣೆಯಾಗುತ್ತಿದೆ. ಜನವರಿ 1ರಂದು ಕಾಂಗ್ರೆಸ್ ಫ್ಲೈ ಓವರ್ ಉದ್ಘಾಟನೆ ಅಣಕು ಪ್ರದರ್ಶನ ಮಾಡಿ ಪ್ರತಿಭಟನೆ ಮಾಡಿತ್ತು. ಸಂಸದರ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು.

ಸಾಮಾಜಿಕ ಜಾಲತಾಣದಲ್ಲಿ ಟ್ರಾಲ್

ಸಾಮಾಜಿಕ ಜಾಲತಾಣದಲ್ಲಿ ಟ್ರಾಲ್

ಪಂಪ್ ವೆಲ್ ಫ್ಲೈ ಓವರ್ ಕಾಮಗಾರಿ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಟ್ರಾಲ್‌ಗಳಿವೆ. ಯೋಜನೆ ವಿಳಂಬವಾಗುತ್ತಿರುವುದಕ್ಕೆ ಭಾರಿ ಆಕ್ರೋಶ ವ್ಯಕ್ತಪಡಿಸಲಾಗಿತ್ತು.

English summary
The Pumpwell flyover in Mangaluru city all set for inauguration. On January 31, 2020 Pumpwell flyover open for vehicles.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X