ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು ವಿಮಾನ ನಿಲ್ದಾಣ ಹಸ್ತಾಂತರ; ಕೇಂದ್ರಕ್ಕೆ ನೋಟಿಸ್

|
Google Oneindia Kannada News

ಮಂಗಳೂರು, ಫೆಬ್ರವರಿ 5; ಕೇಂದ್ರ ಸರ್ಕಾರದ ವಿಮಾನ ನಿಲ್ದಾಣ ಖಾಸಗೀಕರಣ ಮಾಡತ್ತಿದೆ. ಕರ್ನಾಟಕದಲ್ಲಿನ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಅದಾನಿ ಸಮೂಹ ಸಂಸ್ಥೆಗೆ 2020ರ ನೆವೆಂಬರ್‌ನಲ್ಲಿ ಹಸ್ತಾಂತರ ಮಾಡಲಾಗಿದೆ.

2019ರ ಸಚಿವ ಸಂಪುಟ ಸಭೆಯಲ್ಲಿ ಕೇಂದ್ರ ಸರ್ಕಾರ ಕೈಗೊಂಡ ನಿರ್ಣಯದಂತೆ ಹಸ್ತಾಂತರ ಮಾಡಲಾಗಿದೆ. 50 ವರ್ಷಗಳ ಕಾಲ ವಿಮಾನ ನಿಲ್ದಾಣದ ನಿರ್ವಹಣೆಯನ್ನು ಅದಾನಿ ಸಮೂಹ ಸಂಸ್ಥೆ ನೋಡಿಕೊಳ್ಳಲಿದೆ.

ಕರ್ನಾಟಕಕ್ಕೆ ಮತ್ತೊಂದು ಏರ್ ಪೋರ್ಟ್; ಶೀಘ್ರದಲ್ಲೇ ಸ್ಥಳ ಅಂತಿಮಕರ್ನಾಟಕಕ್ಕೆ ಮತ್ತೊಂದು ಏರ್ ಪೋರ್ಟ್; ಶೀಘ್ರದಲ್ಲೇ ಸ್ಥಳ ಅಂತಿಮ

ಹಸ್ತಾಂತರಗೊಂಡ ಬಳಿಕ ಮಂಗಳೂರು ವಿಮಾನ ನಿಲ್ದಾಣದ ಹೆಸರನ್ನು 'ಅದಾನಿ ಮಂಗಳೂರು ಇಂಟರ್ ನ್ಯಾಷನಲ್ ಏರ್ ಪೋರ್ಟ್' ಎಂದು ಬದಲಾವಣೆ ಮಾಡಲಾಗಿದೆ. ಈ ಹಸ್ತಾಂತರವನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಕೆ ಮಾಡಲಾಗಿದೆ.

ಶಿವಮೊಗ್ಗ ವಿಮಾನ ನಿಲ್ದಾಣ; 164 ಕೋಟಿ ಹೆಚ್ಚುವರಿ ಅನುದಾನಶಿವಮೊಗ್ಗ ವಿಮಾನ ನಿಲ್ದಾಣ; 164 ಕೋಟಿ ಹೆಚ್ಚುವರಿ ಅನುದಾನ

Mangaluru Airport To Adani Group Karnataka HC Notice To Govt

ವಿಮಾನ ನಿಲ್ದಾಣದ ಪ್ರಾಧಿಕಾರದ ಸಿಬ್ಬಂದಿ ಒಕ್ಕೂಟ ಸಲ್ಲಿಸಿರುವ ಪಿಐಎಲ್‌ ಅನ್ನು ಮುಖ್ಯ ನ್ಯಾಯಮೂರ್ತಿ ಎ. ಎಸ್. ಓಕಾ ಮತ್ತು ನ್ಯಾಯಮೂರ್ತಿ ಎಸ್. ಎಸ್. ಮಗದುಮ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಮಂಗಳೂರು ವಿಮಾನ ನಿಲ್ದಾಣ ಅದಾನಿ ಗ್ರೂಪ್‌ಗೆ ಹಸ್ತಾಂತರಮಂಗಳೂರು ವಿಮಾನ ನಿಲ್ದಾಣ ಅದಾನಿ ಗ್ರೂಪ್‌ಗೆ ಹಸ್ತಾಂತರ

ಕೇಂದ್ರ ಸರ್ಕಾರ, ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ, ಅದಾನಿ ಸಮೂಹ ಸಂಸ್ಥೆಗಳಿಗೆ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ. ಪಿಐಎಲ್‌ನಲ್ಲಿ ಕೇಂದ್ರ ಸಚಿವ ಸಂಪುಟ ಸಭೆಯ ನಿರ್ಣಯವನ್ನು ರದ್ದುಗೊಳಿಸಬೇಕು ಎಂದು ಮನವಿ ಮಾಡಲಾಗಿದೆ.

ವಿಮಾನ ನಿಲ್ದಾಣದ ಖಾಸಗೀಕರಣದ ಮೊದಲ ಹಂತದಲ್ಲಿ ಕೇಂದ್ರ ಸರ್ಕಾರ ಅಹಮದಾಬಾದ್, ಜೈಪುರ, ಲಕ್ನೋ, ಗೌಹಾತಿ, ತಿರುವನಂತಪುರಂ ಮತ್ತು ಮಂಗಳೂರು ವಿಮಾನ ನಿಲ್ದಾಣವನ್ನು ಖಾಸಗಿ ಅವರಿಗೆ ಹಸ್ತಾಂತರ ಮಾಡಿದೆ. ಕೇರಳ ಸರ್ಕಾರ ಸಹ ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಿದೆ.

ಖಾಸಗೀಕರಣದ ಒಪ್ಪಂದದ ಅನ್ವಯ ಅದಾನಿ ಸಂಸ್ಥೆ 50 ವರ್ಷಗಳ ಕಾಲ ವಿಮಾನ ನಿಲ್ದಾಣ ನಿರ್ವಹಣೆ ಮಾಡಲಿದೆ. ಮೊದಲ ಒಂದು ವರ್ಷದ ಅವಧಿಗೆ ವಿಮಾನ ನಿಲ್ದಾಣ ಪ್ರಾಧಿಕಾರ ಮತ್ತು ಅದಾನಿ ಸಂಸ್ಥೆಗಳು ಸಮಾನಾಂತರವಾಗಿ ಕಾರ್ಯ ನಿರ್ವಹಣೆ ಮಾಡಲಿವೆ. ಬಳಿಕ ಸಂಪೂರ್ಣ ನಿರ್ವಹಣೆ ಅದಾನಿ ಸಂಸ್ಥೆಯದ್ದು.

English summary
Karnataka high court issued notice to union govt, AAI and Adani group. PIL field in court against union government move of handover Mangaluru International Airport to Adani Group to manage and develop for 50 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X