Monsoon Trip: ಧಾರಾಕಾರ ಮಳೆ: ಉಡುಪಿ..ಆಗುಂಬೆ ಪ್ರವಾಸಿ ತಾಣಗಳಿಗೆ ಜೀವ ಕಳೆ
ಉಡುಪಿ, ಜುಲೈ 08: ಜಿಲ್ಲೆಯಲ್ಲಿ ಧಾರಾಕಾರ ಮಳೆಯಿಂದಾಗಿ ಪ್ರವಾಸಿ ತಾಣಗಳಿಗೆ ಪ್ರವಾಸಿಗರಿಗೆ ಬ್ರೇಕ್ ಹಾಕಲಾಗಿದೆ. ಜಿಲ್ಲೆಯಲ್ಲಿ ಆಗುತ್ತಿರುವ ಮಳೆಯ ಅವಾಂತರಗಳ ಭಯಕ್ಕೆ ಡೇಂಜರ್ ಫಾಲ್ಸ್ ಗಳಿಗೆ ಭೇಟಿ ಕೊಡದೆ ಜನರು ಕೂಡ ಸುಮ್ಮನಾಗಿದ್ದಾರೆ. ಆದರೆ ಜಿಟಿ ಜಿಟಿ ಮಳೆಯಿಂದಾಗಿ ಉಡುಪಿ ಜಿಲ್ಲೆಯ ಕೆಲವೊಂದು ಪ್ರವಾಸಿ ತಾಣಗಳಿಗೆ ಜೀವ ಕಳೆ ಬಂದಿದ್ದು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.
ದಟ್ಟ ಕಾನನದ ಮಧ್ಯೆ ಅಲ್ಲಲ್ಲಿ ಸೃಷ್ಟಿಯಾಗಿರುವ ಕೃತಕ ಜಲಪಾತಗಳು, ಬೆಟ್ಟಗಳಿಗೆ ಮುತ್ತಿಕ್ಕಿ ಮರೆಯಾಗುತ್ತಿರು ಮಂಜಿನ ಮೋಡಗಳು ಮಳೆಯ ಸಿಂಚನ ಸ್ವರ್ಗವೇ ಧರೆಗುಳಿದಂತೆ ಭಾಸವಾಗುವ ವಾತಾವರಣ. ಒಂದೊಂದು ದೃಶ್ಯವನ್ನು ನೋಡುತ್ತದ್ದರೆ ಎಂತವರನ್ನೂ ಒಂದು ಕ್ಷಣ ತಮ್ಮನ್ನು ತಾವು ಮರೆತು ಬಿಡುವುರಲ್ಲಿ ಸಂಶಯವೇ ಇಲ್ಲ.

ಮಳೆಯ ಎಫೆಕ್ಟ್ ನಿಂದಾಗಿ ಜಲಪಾತಗಳು ಭೋರ್ಗರೆಯುತ್ತಿವೆ, ಹೀಗಾಗಿ ಜಲಪಾತಗಳ ಬಳಿ ಪ್ರವಾಸಿಗರನ್ನು ಬ್ರೇಕ್ ಹಾಕಿ ನೋ ಎಂಟ್ರಿ ಬೋರ್ಡ್ ಹಾಕಲಾಗಿದೆ. ಹೀಗಾಗಿ ಪ್ರವಾಸಿಗರು ಫಾಲ್ಸ್ ಗಳನ್ನು ಬಿಟ್ಟು ಪ್ರಯಾಣದ ನಡುವೆ ಕಂಡು ಬರುವ ಒಂದಿಷ್ಟು ನೇಚರ್ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಕಣ್ತುಂಬಿಕೊಂಡು ಎಂಜಾಯ್ ಮಾಡುತ್ತಿದ್ದಾರೆ.
ಆಗುಂಬೆ ವೀವ್ಯೂ ಪಾಯಿಂಟ್‌ಗೆ ಬರುತ್ತಿರುವ ಪ್ರವಾಸಿಗರ ದಂಡು ಮಂಜಿನ ಮೋಡದ ನಡುವೆ ನಿಸರ್ಗವನ್ನು ಕಣ್ತುಂಬಿಕೊಂಡು, ಭರ್ಜರಿಯಾಗಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ವೀಕೆಂಡ್ ಆಗಿದ್ದರಿಂದ ಬೈಕ್ ರೈಡರ್ಸ್, ಫ್ಯಾಮಿಲಿ ಜೊತೆ ಪ್ರವಾಸಿಗರ ತಾಣಗಳಿಗೆ ಭೇಟಿ ಕೊಡುವವರು ಸಂಖ್ಯೆ ಆಗುಂಬೆಯ ವೀವ್ಯೂ ಪಾಯಿಂಟ್ ನಲ್ಲಿ ಜಾಸ್ತಿಯಾಗಿತ್ತು.

ಇನ್ನು ಇದರ ನಡು ಶಿವಮೊಗ್ಗ ಮತ್ತು ಉಡುಪಿ ಜಿಲ್ಲಾಡಳಿತ ಮಳೆ ಹಿನ್ನಲೆ ಆಗುಂಬೆ ಘಾಟಿನಲ್ಲಿ ಘನ ವಾಹನಗಳಿಗೆ ಸಂಚಾರ ನಿಷೇಧ ಮಾಡಿರವುದರಿಂದ ಆಗುಂಬೆಯ ತಿರುವುನಿಲ್ಲಿ ಘನ ವಾಹನದ ಭಯವಿಲ್ಲದೇ ಪ್ರವಾಸಿಗರ ದಂಡು ಆಗುಂಬೆ ವೀವ್ಯೂ ಪಾಯಿಂಟ್‌ಗೆ ಭೇಟಿ ನೀಡಿ ವಿಕೇಂಡ್ ಎಂಜಾಯ್ ಮಾಡುತ್ತಿದ್ದಾರೆ. ಏನೇಯಾಗಲಿ ಮಳೆಗಾಲದಲ್ಲಿ ಕೆಲವೊಂದು ಪ್ರವಾಸಿ ತಾಣಗಳು ಹಚ್ಚ ಹಸಿರಿನಿಂದ ಜೀವ ಕಳೆ ಪಡೆದುಕೊಂಡು ಪ್ರವಾಸ ಕೈಬೀಸಿ ಕರೆಯುತ್ತದೆ. ಆದರೆ ಮಳೆಗಾಲದಲ್ಲಿ ಪ್ರವಾಸಿ ತಾಣಗಳಿಗೆ ಭೇಟಿ ಕೊಡುವ ಸಮಯದಲ್ಲಿ ನಿಮ್ಮ ಜಾಗರೂಕತೆಯಲ್ಲಿ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ.












Click it and Unblock the Notifications