• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶಾಂತಿವನದಿಂದ ಹೊಸ ಉತ್ಸಾಹದಲ್ಲಿ ರಾಜಕೀಯ ಅಖಾಡಕ್ಕಿಳಿದ ಸಿದ್ದರಾಮಯ್ಯ

|

ಮಂಗಳೂರು, ಜೂನ್ 28: 12 ದಿನಗಳ ಪ್ರಕೃತಿ ಚಿಕಿತ್ಸೆ ಪಡೆದ ಬಳಿಕ ಮಾಜಿ ಸಿಎಂ ಸಿದ್ದರಾಮಯ್ಯ ಧರ್ಮಸ್ಥಳದ ಶಾಂತಿವನ ಪ್ರಕೃತಿ ಚಿಕಿತ್ಸಾಲಯದಿಂದ ಇಂದು ಬಿಡುಗಡೆಗೊಂಡಿದ್ದಾರೆ. ಕಳೆದ 12 ದಿನಗಳಿಂದ ಧರ್ಮಸ್ಥಳ ಸಮೀಪದ ಶಾಂತಿವನದಲ್ಲಿ ಪ್ರಕೃತಿ ಚಿಕಿತ್ಸೆಗೆ ಒಳಗಾಗಿದ್ದ ಸಿದ್ದರಾಮಯ್ಯ ಹೊಸ ಉತ್ಸಾಹದೊಂದಿಗೆ ರಾಜಕಾರಣಕ್ಕೆ ಮರು ಪ್ರವೇಶ ಪಡೆದಿದ್ದಾರೆ.

ಬೆಂಗಳೂರಿಗೆ ತೆರಳುವ ಮೊದಲು ಸಿದ್ದರಾಮಯ್ಯ ಧರ್ಮಸ್ಥಳ ಕ್ಷೇತ್ರದ ಮಂಜುನಾಥನ ದರ್ಶನ ಪದಿಡೆದ್ದಾರೆ. ಈ ನಡುವೆ ಮಂಗಳೂರಿನಲ್ಲಿ ಕಾಂಗ್ರೆಸ್ ಮುಖಂಡರೊಂದಿಗೆ ರಹಸ್ಯ ಸಭೆಯನ್ನೂ ನಡೆಸಿದ್ದಾರೆ.

ಮಂಜುನಾಥನ ಸನ್ನಿಧಿಗೆ ಸಿದ್ದು, ಮೈತ್ರಿ ಸರಕಾರದ ಮುಂದಿನ ದೃಶ್ಯ ಏನು?

ಶ್ರಿ ಕ್ಷೇತ್ರ ಧರ್ಮಸ್ಥಳದ ಶಾಂತಿವನದಲ್ಲಿ ಚಿಕಿತ್ಸೆ ಪಡೆಯುತ್ತಲೇ ಶಾಂತವಾಗಿ ಒಂದೊಂದೇ ದಾಳವನ್ನು ಉರುಳಿಸಿದ ಸಿದ್ದರಾಮಯ್ಯ ರಾಜ್ಯ ರಾಜಕೀಯದಲ್ಲಿ ಅದರಲ್ಲೂ ಕಾಂಗ್ರೆಸ್ ನಲ್ಲಿ ತನ್ನ ಶಕ್ತಿ ಪ್ರದರ್ಶನ ಮಾಡಿದ್ದಾರೆ.

ತಮ್ಮ ವಿರುದ್ಧ ಕತ್ತಿಮಸೆಯುತ್ತಿರುವ ರಾಜ್ಯ ಕಾಂಗ್ರೆಸ್ ನ ಕೆಲ ನಾಯಕರಿಗೆ ಹಾಗೂ ಹೈಕಮಾಂಡ್ ಗೆ ಸ್ಪಷ್ಟ ಸಂದೇಶ ರವಾನಿಸಿರುವ ಸಿದ್ದರಾಮಯ್ಯ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಇತಿಮಿತಿಗಳ ಬಗ್ಗೆಯೂ ಪಾಠ ಮಾಡಿದ್ದಾರೆ. ಮಾಜಿ ಆಗಿದ್ದರು ಇಂದಿಗೂ ನಾನು ಪವರ್ ಫುಲ್ ಎಂದು ಸ್ಪಷ್ಟವಾಗಿಯೇ ಹೇಳಿದ್ದಾರೆ.

ಒಂದೆಡೆ ಕೆಲ ಬೆಂಬೆಲಿಗ ಶಾಸಕರು ಸಿದ್ದರಾಮಯ್ಯರ ಪರ ತಮ್ಮ ಒಲವು ತೋರಿದರೆ ಇನ್ನೊಂದೆಡೆ ಕುರುಬ ಸಮಾಜ ಸಿದ್ದರಾಮಯ್ಯರಿಗೆ ಬೆಂಗಾವಲಾಗಿ ನಿಂತಿದೆ. ಇದಕ್ಕೆ ಪುಷ್ಠಿ ನೀಡುವ ಕೆಲ ಪ್ರಸಂಗಗಳು ಬೆಳಕಿಗೆ ಬರುತ್ತಿವೆ.

ಕಾಗಿನೆಲೆ ಪೀಠಾಧ್ಯಕ್ಷ ನಿರಂಜನಾನಂದ ಪುರಿ ಸ್ವಾಮಿಜಿ ನೀಡಿರುವ ಹೇಳಿಕೆ ಇದಕ್ಕೆ ಸ್ಪಷ್ಟ ಉದಾಹರಣೆ. ಸಮ್ಮಿಶ್ರ ಸರಕಾರದ ಒಂದು ಜಾತಿ, ಸಮುದಾಯದ ಅಧಿಕಾರಿಗಳ ವಿರುದ್ಧ ದ್ವೇಷ ಸಾಧಿಸುತ್ತಿದ್ದು, ಇಂತಹ ಬೆಳವಣಿಗೆಯನ್ನು ಕೂಡಲೇ ಕುಮಾರಸ್ವಾಮಿ ನಿಲ್ಲಿಸಬೇಕು. ಇಲ್ಲವೇ ಪರಿಣಾಮ ಎದುರಿಸಲು ಸಜ್ಜಾಗಬೇಕು ಎಂದು ಅವರು ಎಚ್ಚರಿಕೆ ನೀಡಿದ್ದರು.

ಇಂದು ಧರ್ಮಸ್ಥಳ ಶಾಂತಿವನದಿಂದ ಡಿಸ್ಚಾರ್ಜ್ ಆದ ಬಳಿಕ ಧರ್ಮಸ್ಥಳ ದೇವಾಲಯಕ್ಕೆ ತೆರಳಿ ದೇವರ ದರ್ಶನ ಪಡೆದ ಸಿದ್ದರಾಮಯ್ಯನವರು ನೇರವಾಗಿ ಬಂದಿದ್ದು ಕುರುಬ ಸಮಾಜದ ಕಾರ್ಯಕ್ರಮಕ್ಕೆ. ಧರ್ಮಸ್ಥಳದಿಂದ ಮಂಗಳೂರು ತಲುಪಿದ ಸಿದ್ದರಾಮಯ್ಯ ಮಂಗಳೂರು ಹೊರವಲಯದ ಕಾವೂರಿನ ಕುರುಬರ ಸಂಘದ ಕಾರ್ಯಕ್ರಮ ದಲ್ಲಿ ಭಾಗಿಯಾದರು. ಆದರೆ ಕಾರ್ಯಕ್ರಮದಲ್ಲಿ ಸಭೆಯನ್ನು ಉದ್ಧೇಶಿಸಿ ಮಾತನಾಡಲು ಸಿದ್ದರಾಮಯ್ಯ ನಿರಾಕರಿಸಿದರು.

ಈ ಸಂದರ್ಭದಲ್ಲಿ ಕುರುಬ ಸಮುದಾಯದ ಮುಖಂಡರು ಸಿದ್ದರಾಮಯ್ಯಗೆ ಧೈರ್ಯ ತುಂಬಿದ್ದಾರೆ.

ನೀವು ಧೈರ್ಯ ಕಳೆದುಕೊಳ್ಳಬಾರದು. ನಿಮ್ಮ ಹಿಂದೆ ಕುರುಬ ಸಮುದಾಯ ಇದೆ. ಯಾವುದೇ ಒತ್ತಡಗಳಿಗೂ ನೀವು ಧೈರ್ಯ ಕಳೆದುಕೊಳ್ಳಬಾರದು ಎಂದು ಕಿವಿ ಮಾತು ಹೇಳಿದರು.

ಈ ಬೆಳವಣಿಗೆಗಳು ರಾಜ್ಯ ರಾಜಕೀಯದಲ್ಲಿ ಹೆಚ್ಚು ಸದ್ದು ಮಾಡತೊಡಗಿದೆ. ಇನ್ನೊಂದೆಡೆ ಸಿದ್ದರಾಮಯ್ಯ ಬೆಂಗಳೂರಿಗೆ ತೆರಳುವ ಮುನ್ನ ಕಾಂಗ್ರೆಸ್ ಹಾಗು ಜೆಡಿಎಸ್ ನಾಯಕರಿಗೆ ಸ್ಪಷ್ಟ ಸಂದೇಶ ರವಾನಿಸಿಯೇ ವಿಮಾನ ಹತ್ತಿದ್ದಾರೆ.

ಕದ್ರಿಯ ಸರ್ಕಿಟ್ ಹೌಸ್ ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಮುಖಂಡರೊಂದಿಗೆ ಗುಪ್ತ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಸಿದ್ದರಾಮಯ್ಯ ಆಪ್ತ ಐವನ್ ಡಿಸೋಜ, ಮಾಜಿ ಶಾಸಕ ಮೊಯ್ದೀನ್ ಬಾವ, ಮಾಜಿ ಸಚಿವ ಅಭಯಚಂದ್ರ ಜೈನ್, ಮಂಗಳೂರು ಮೇಯರ್ ಭಾಸ್ಕರ ಮೊಯ್ಲಿ , ಮಾಜಿ ಮೇಯರ್ ಕವಿತಾ ಸನಿಲ್ ಮತ್ತಿತರರು ಭಾಗಿಯಾಗಿದ್ದರು.

ಸಭೆಯಲ್ಲಿ ಚುನಾವಣೆ ಸೋಲಿನ ಬಗ್ಗೆ ಮಾಹಿತಿ ಪಡೆದ ಸಿದ್ದರಾಮಯ್ಯ ಮೈತ್ರಿ ಸರಕಾರದ ಬಗ್ಗೆ ಮಾಜಿ ಶಾಸಕರಿಂದ ಅಭಿಪ್ರಾಯ ಪಡೆದಿದ್ದಾರೆ. ಈ ಮಧ್ಯೆ ಇವಿಎಂ ಮೆಷಿನ್ ಗಳ ಬಗ್ಗೆ ಮಾಜಿ ಶಾಸಕರು ಸಿದ್ದರಾಮಯ್ಯನವರಿಗೆ ದೂರು ನೀಡಿದ್ದಾರೆ ಎಂದು ಹೇಳಲಾಗಿದೆ. ಈ ಸಂದರ್ಭ ಕೈ ಮುಖಂಡರಿಗೆ ನಾನು ನಿಮ್ಮ ಜೊತೆ ಇರುವುದಾಗಿ ಭರವಸೆ ನೀಡಿದ್ದಾರೆ.

ಕಳೆದ ಒಂದು ವಾರದಿಂದ ನಡೆಯುತ್ತಿರುವ ಈ ಬೆಳವಣಿಗೆಗಳೆಲ್ಲಾ ನಾಳೆಯಿಂದ ಯಾವೆಲ್ಲಾ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾಲವೇ ಉತ್ತರಿಸಲಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Former chief minister Siddaramaiah discharged from Shanthivana hospital near Dharmastala on Thursday June 28, after his 12 days treatment. Siddaramaiah visited Mangaluru were he met Kuruba community leaders and Dakshina Kannada district former MLA's and congress leaders.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more