ಗಾಂಧೀಜಿ,ಮೋದಿ: ಮಂಗಳೂರಿನಲ್ಲಿ ಜಾಹೀರಾತು ಸಮರ

ಮಂಗಳೂರು, ನ 13: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯನ್ನು ಕೊಂದವರು ಯಾರು? ರಾಷ್ಟ್ರಪಿತನ ತತ್ವಾದರ್ಶವನ್ನು ಮಣ್ಣುಪಾಲು ಮಾಡಿದವರು ಯಾರು?

ಹೀಗೆ ಬಂದರು ನಗರಿ ಮಂಗಳೂರಿನಲ್ಲಿ ಕಾಂಗ್ರೆಸ್ ಮತ್ತು ಸಿಟಿಜನ್ ಕೌನ್ಸಿಲ್ ನಡುವೆ ಜಾಹೀರಾತು ಸಮರ ಏರ್ಪಟ್ಟಿದೆ. ಎಐಸಿಸಿ ಸದಸ್ಯ ಪಿ ವಿ ಮೋಹನ್ ನ 11ರಂದು 'ಗಾಂಧೀಜಿಯವರನ್ನು ಕೊಂದವರು ಯಾರೆಂದು ತಿಳಿದಿದೆಯೇ' ಎನ್ನುವ ಮುಖಬರಹವಿರುವ ಜಾಹೀರಾತನ್ನು ಪ್ರಕಟಿಸಿದ್ದರು.

ಕಾಂಗ್ರೆಸ್ಸಿನ ಈ ಜಾಹೀರಾತಿಗೆ ಉತ್ತರ ನೀಡುವ ನೀಡುವ ಇನ್ನೊಂದು ಜಾಹೀರಾತನ್ನು ಸಿಟಿಜನ್ ಕೌನ್ಸಿಲಿನ ಸಂಚಾಲಕ ಮತ್ತು ನಮೋ ಬ್ರಿಗೇಡ್ ಸಂಚಾಲಕರೂ ಆಗಿರುವ ನರೇಶ್ ಶೆಣೈ ನ 12ರಂದು ಪ್ರಕಟಿಸಿದ್ದಾರೆ.

ಕಾಂಗ್ರೆಸ್ಸಿನ ಜಾಹೀರಾತು ಇಂಗ್ಲಿಷ್ ನಲ್ಲಿದ್ದರೆ, ಸಿಟಿಜನ್ ಕೌನ್ಸಿಲಿನ ಜಾಹೀರಾತು ಕನ್ನಡದಲ್ಲಿ ಪ್ರಕಟವಾಗಿದೆ. ಈ ಎರಡೂ ಜಾಹೀರಾತುಗಳು ನಗರದ ಹೃದಯ ಭಾಗದಲ್ಲಿರುವ ಬಲ್ಮಠ ಪ್ರದೇಶದಲ್ಲಿ ಒಂದಕ್ಕೊಂದು ಹೊಂದಿಕೊಂಡತೆ ಇದ್ದು, ಸಾರ್ವಜನಿಕರ ಗಮನ ಸೆಳೆಯುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯನ್ನು ಟಾರ್ಗೆಟ್ ಮಾಡಲೆಂದೇ ಹಾಕಲಾಗಿರುವ ಕಾಂಗ್ರೆಸ್ ಜಾಹೀರಾತಿನ ಪ್ರಮುಖ ಅಂಶಗಳು ಏನಂದರೆ?
> ಗಾಂಧೀಜಿಯವರನ್ನು ಕೊಂದ ನಂತರ ಅವರನ್ನು ಮುಖವಾಡವಾಗಿ ಬಳಸಿಕೊಳ್ಳುತ್ತಿದ್ದಾರೆ.
> ಮಹಾತ್ಮ ಗಾಂಧಿಯವರು ನುರಿತ ರಾಜಕಾರಣಿಯಾಗಿದ್ದರು ಮತ್ತು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು.

ಅಲ್ಪಸಂಖ್ಯಾತರ ಪಾಲಿಗೆ ಸ್ನೇಹಿತ

ಅಲ್ಪಸಂಖ್ಯಾತರ ಪಾಲಿಗೆ ಸ್ನೇಹಿತ

> ಗಾಂಧೀಜಿ ಅಲ್ಪಸಂಖ್ಯಾತರ ಪಾಲಿಗೆ ಸ್ನೇಹಿತರಂತೆ ಮತ್ತು ದಲಿತರ ಪಾಲಿಗೆ ಹಿತರಕ್ಷಕರಾಗಿದ್ದರು.
> ಶಾಂತಿಯ ದೂತರಾಗಿದ್ದ ಗಾಂಧೀಜಿ, ಮಹಿಳೆಯರ ಪಾಲಿಗೆ ಆಶಾಕಿರಣರಾಗಿದ್ದರು.

ಸ್ವಚ್ಚತಾ ಅಭಿಯಾನಕ್ಕೆ ಗಾಂಧೀಜಿ ಪ್ರಚಾರದ ವಸ್ತುವಲ್ಲ

ಸ್ವಚ್ಚತಾ ಅಭಿಯಾನಕ್ಕೆ ಗಾಂಧೀಜಿ ಪ್ರಚಾರದ ವಸ್ತುವಲ್ಲ

> ಸ್ವಚ್ಚತಾ ಅಭಿಯಾನಕ್ಕೆ ಗಾಂಧೀಜಿ ಪ್ರಚಾರದ ವಸ್ತುವಲ್ಲ
> ಗಾಂಧೀಜಿ ಹೆಸರನ್ನು ಪ್ರಚಾರಕ್ಕೆ ಬಳಸಿ ಅವರ ಹೆಸರಿಗೆ ಬಿಜೆಪಿ ಮಸಿ ಬಳೆಯುತ್ತಿದೆ.

ಸಿಟಿಜನ್ ಕೌನ್ಸಿಲ್ ಜಾಹೀರಾತಿನ ಹೈಲೈಟ್ಸ್

ಸಿಟಿಜನ್ ಕೌನ್ಸಿಲ್ ಜಾಹೀರಾತಿನ ಹೈಲೈಟ್ಸ್

ಕಾಂಗ್ರೆಸ್ಸಿನ ಈ ಜಾಹೀರಾತಿಗೆ, ಸಿಟಿಜನ್ ಕೌನ್ಸಿಲ್ ಮೋದಿ ಬೆಂಬಲಿಸುವ ತಿರುಗೇಟಿನ ಜಾಹೀರಾತಿನ ಕೆಲವು ಪ್ರಮುಖ ಹೈಲೈಟ್ಸ್
> ಗಾಂಧೀಜಿ ಎಂದರೆ ಭಾರತೀಯರ ಪ್ರತಿಪಾದಕ ಮತ್ತು ನೈಜ ಜಾತ್ಯಾತೀತ
> ಗಾಂಧೀಜಿ ಸ್ವಚ್ಚ ಮತ್ತು ಸರಳ ಭಾರತದ ಚಿಂತಕ

ಗ್ರಾಮ ಸ್ವರಾಜ್ಯದ ಪ್ರತಿಪಾದಕ

ಗ್ರಾಮ ಸ್ವರಾಜ್ಯದ ಪ್ರತಿಪಾದಕ

> ನೈಜ ಜಾತ್ಯಾತೀತವಾದಿಯಾಗಿದ್ದ ಗಾಂಧೀಜಿ, ಸಮಾನತೆಯ ಹರಿಕಾರ
> ಗ್ರಾಮ ಸ್ವರಾಜ್ಯದ ಪ್ರತಿಪಾದಕರಾಗಿದ್ದ ಗಾಂಧೀಜಿ ರಾಮರಾಜ್ಯದ ಕನಸುಗಾರ
> ಕಾಂಗ್ರೆಸ್ ವಿಸರ್ಜನೆ ಮೋದಿಯ ಕನಸು, ಕಾಂಗ್ರೆಸ್ ಮುಕ್ತ ಭಾರತ ಮೋದಿಯ ಕನಸು

ಗಾಂಧಿ ಕನಸು, ಮೋದಿ ನನಸು

ಗಾಂಧಿ ಕನಸು, ಮೋದಿ ನನಸು

> ಗಾಂಧೀ ಕನಸು ಕಂಡರು, ಮೋದಿ ನನಸು ಮಾಡುವರು
> ನೀವು ಗಾಂಧಿವಾದಿಯೇ ಹಾಗಿದ್ದರೆ ಮೋದಿಯೊಬ್ಬರೇ ದಾರಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+