ಮಂಗಳೂರು ಏರ್‌ಪೋರ್ಟ್‌ಗೆ ಬಾಂಬ್ ಇಟ್ಟಿದ್ದ ಆದಿತ್ಯರಾವ್​ಗೆ 25 ವರ್ಷ ಜೈಲು ಶಿಕ್ಷೆ

ಮಂಗಳೂರು, ಮಾರ್ಚ್ 16: ಮಂಗಳೂರು ಏರ್‌ಪೋರ್ಟ್‌ನಲ್ಲಿ ಬಾಂಬ್ ಇಟ್ಟ ಪ್ರಕರಣ ಕುರಿತಾಗಿ ಎರಡು ವರ್ಷಗಳ ವಿಚಾರಣೆ ಬಳಿಕ ಮಂಗಳೂರು ಕೋರ್ಟ್ ಇದೀಗ ಶಿಕ್ಷೆ ಪ್ರಕಟ ಮಾಡಿದೆ. ಮಂಗಳೂರಿನ ನಾಲ್ಕನೇ ಜಿಲ್ಲಾ ನ್ಯಾಯಾಲಯದಿಂದ ತೀರ್ಪು ಪ್ರಕಟವಾಗಿದ್ದು, ಪ್ರಕರಣದಲ್ಲಿ ಪ್ರತ್ಯೇಕ ಎರಡು ಶಿಕ್ಷೆ ಪ್ರಮಾಣವನ್ನು ಕೋರ್ಟ್ ತನ್ನ ಅಂತಿಮ ತೀರ್ಪಿನಲ್ಲಿ ನೀಡಿದೆ.

ಬಾಂಬರ್ ಆದಿತ್ಯರಾವ್‌ಗೆ ಒಂದು ಸೆಕ್ಷನ್‌ನಡಿ 20 ವರ್ಷ ಜೈಲು ಮತ್ತು 10 ಸಾವಿರ ರೂ. ದಂಡ ವಿಧಿಸಿದರೆ ಮತ್ತೊಂದು ಸೆಕ್ಷನ್‌ನಡಿ 5 ವರ್ಷ ಜೈಲು ಹಾಗೂ 10 ಸಾವಿರ ರೂ. ದಂಡ ವಿಧಿಸಿ ಆದೇಶ ಮಾಡಿದೆ. 2020ರ ಜನವರಿ 20ರಂದು ಮಂಗಳೂರು ಏರ್‌ಪೋರ್ಟ್‌ಗೆ ಬಾಂಬ್ ಇಟ್ಟಿದ್ದ ಆದಿತ್ಯರಾವ್, ಆ ಬಳಿಕ ಜನವರಿ 22ರಂದು ಬೆಂಗಳೂರಿನಲ್ಲಿ ಪೊಲೀಸ್ ಠಾಣೆಯೊಂದರಲ್ಲಿ ಶರಣಾಗಿದ್ದ.

ಉಡುಪಿ‌ ಜಿಲ್ಲೆಯ ಮಣಿಪಾಲ ಮೂಲದ ಆದಿತ್ಯರಾವ್ ಮೆಕ್ಯಾನಿಕಲ್ ಎಂಜಿನಿಯರ್ ಪದವೀಧರನಾಗಿದ್ದು, 2018ರಲ್ಲಿ ಬೆಂಗಳೂರು ಏರ್‌ಪೋರ್ಟ್ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದ. ಆದರೆ ಸೂಕ್ತ ದಾಖಲೆಗಳು ಇಲ್ಲದ ಕಾರಣ ಅರ್ಜಿ ತಿರಸ್ಕೃತಗೊಂಡಿತ್ತು. ತನ್ನ ಅರ್ಜಿ ತಿರಸ್ಕೃತವಾಗಿದ್ದಕ್ಕೆ ಆದಿತ್ಯರಾವ್​ಗೆ ಆಕ್ರೋಶವಿತ್ತು. ಹೀಗಾಗಿ ಅನೇಕ ಬಾರಿ ಏರ್‌ಪೋರ್ಟ್‌ಗೆ ಹುಸಿ ಬಾಂಬ್ ಕರೆ ಮಾಡಿದ್ದ.

Aditya Rao Sentenced to 25 Years in Jail for Kept Bomb at Mangalore Airport

ಇದಾದ ಬಳಿಕ 2020ರ ಜನವರಿಯಲ್ಲಿ ಹಲವು ಪ್ರಯೋಗಗಳನ್ನು ನಡೆಸಿ ಬಳಿಕ ಮಂಗಳೂರು ಏರ್‌ಪೋರ್ಟ್‌ಗೆ ಬಾಂಬ್ ಇಟ್ಟಿದ್ದ. ದೇಶಾದ್ಯಂತ ಭಾರೀ ಸುದ್ದಿಯಾಗಿದ್ದ ಮಂಗಳೂರು ಏರ್‌ಪೋರ್ಟ್ ಬಾಂಬ್ ಕೇಸ್ ಇದಾಗಿದ್ದು, ಸಜೀವ ಬಾಂಬ್ ಅನ್ನು ಬಾಂಬ್ ನಿಷ್ಕ್ರಿಯ ದಳ ಏರ್‌ಪೋರ್ಟ್‌ ಕೆಳಭಾಗದ ವಿಶಾಲವಾದ ಗದ್ದೆಯಲ್ಲಿ‌ ಬಾಂಬ್ ನಿಷ್ಕ್ರಿಯಗೊಳಿಸಿತ್ತು.

ಆದಿತ್ಯರಾವ್ ತಂದೆ ನಿವೃತ್ತ ಬ್ಯಾಂಕ್ ಉದ್ಯೋಗಿಯಾಗಿದ್ದು, ಉರ್ವದ ಚಿಲಿಂಬಿಯಲ್ಲಿರುವ ಅಪಾರ್ಟ್‌ಮೆಂರ್ಟ್‌ನಲ್ಲಿ ವಾಸವಿದ್ದರು. ಆದಿತ್ಯರಾವ್ ತಾನು ಕಲಿತ ವಿದ್ಯಾಭ್ಯಾಸಕ್ಕೆ ಸರಿಯಾಗಿ ಉದ್ಯೋಗ ಸಿಕ್ಕಿಲ್ಲ ಅಂತಾ ಹಲವು ಕೆಲಸಗಳನ್ನು ಬದಲಿಸುತ್ತಿದ್ದ.

Aditya Rao Sentenced to 25 Years in Jail for Kept Bomb at Mangalore Airport

ಬಾಂಬ್ ಇಡುವ ಮುನ್ನ ಆದಿತ್ಯರಾವ್, ಮಂಗಳೂರಿನ ಬಲ್ಮಠದಲ್ಲಿರುವ ಬಾರ್ & ರೆಸ್ಟೋರೆಂಟ್‌ನಲ್ಲಿ ಬಿಲ್ಲಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. ಬಳಿಕ ಕಾರ್ಕಳದ ಬಾರ್ & ರೆಸ್ಟೋರೆಂಟ್‌ನಲ್ಲೂ ಕೆಲಸ ಮಾಡುತ್ತಿದ್ದ. ಕೆಲಸ ಬಿಟ್ಟು ರಾತ್ರಿ ಇಂಟರ್ನೆಟ್ ಸಹಾಯದಿಂದ ಬಾಂಬ್ ತಯಾರಿಸುವುದು ಹೇಗೆ ಅಂತಾ ಪೂರ್ವತಯಾರಿ ಮಾಡುತ್ತಿದ್ದ.

ಹೀಗೆ ಅಂತರ್ಜಾಲದ ಮೂಲಕ ಬಾಂಬ್ ತಯಾರಿಸಿದ ಆದಿತ್ಯರಾವ್, 2020ರ ಜನವರಿ 19 ರಂದು ಮಂಗಳೂರು ಏರ್‌ಪೋರ್ಟ್‌ನ ಪ್ರವೇಶ ದ್ವಾರದ ಬಳಿ ಬಾಂಬ್ ಇದ್ದ ಬ್ಯಾಗನ್ನಿರಿಸಿ ಪರಾರಿಯಾಗಿದ್ದ. ವಿಮಾನ ನಿಲ್ದಾಣದಲ್ಲಿ ಶ್ವಾನ ತಪಾಸಣೆ ವೇಳೆ ಬಾಂಬ್ ಇದ್ದ ಬ್ಯಾಗ್ ಪತ್ತೆಯಾಗಿದ್ದು, ಬಳಿಕ ಬಾಂಬ್ ನಿಷ್ಕ್ರಿಯ ವಾಹನದ ಮೂಲಕ ಕೆಂಜಾರಿನ ವಿಶಾಲವಾದ ಗದ್ದೆಯಲ್ಲಿ ಬಾಂಬ್ ನಿಷ್ಕ್ರಿಯಗೊಳಿಸಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+