ಪೆಲಕ್ಕಾಯಿ ಗಟ್ಟಿ ಸವಿದ ಶಿಲ್ಪಾ ಶೆಟ್ಟಿ, ವಿಡಿಯೋ ವೈರಲ್!
ಮಂಗಳೂರು, ಅ. 19 : ಕೆಲವು ದಿನಗಳ ಹಿಂದೆ ಮಂಗಳೂರಿನ ಬೆಡಗಿ, ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಒಂದನ್ನು ಹಾಕಿದ್ದರು. ಸದ್ಯ, ಇದು ವೈರಲ್ ಆಗಿದ್ದು ಸಾವಿರಾರು ಜನರು ಇದನ್ನು ವೀಕ್ಷಿಸಿದ್ದಾರೆ. ವಿಡಿಯೋ ತುಳುನಾಡಿನ ಖಾದ್ಯಕ್ಕೆ ಸಂಬಂಧಿಸಿದ್ದು.
ಹೌದು, ಶಿಲ್ಪಾ ಶೆಟ್ಟಿ ಹಾಕಿದ ವಿಡಿಯೋ ತುಳುನಾಡಿನ ಖಾದ್ಯವಾದ ಪೆಲಕ್ಕಾಯಿ ಗಟ್ಟಿ ಬಗ್ಗೆ. ತುಳುನಾಡಿನ ವಿಶಿಷ್ಟ ಖಾದ್ಯವಾದ ಪೆಲಕ್ಕಾಯಿ ಗಟ್ಟಿ (ಹಲಸಿನ ತಿಂಡಿ) ಸವಿದಿದ್ದ ಶಿಲ್ಪಾ ಅದರ ವಿಡಿಯೋ ಹಾಕಿ ಸುದ್ದಿಯನ್ನು ಮಾಡಿದ್ದಾರೆ.
ಮಳೆಗಾಲ ಪ್ರಾರಂಭವಾದ ಸಮಯದಲ್ಲಿ ಹಲವು ಹಣ್ಣುಗಳ ವಿಶಿಷ್ಟ ಖಾದ್ಯಗಳನ್ನು ತುಳುನಾಡಲ್ಲಿ ತಯಾರಿಸುತ್ತಾರೆ. ಇದರಲ್ಲಿ ವಿಶಿಷ್ಟವಾದುದ್ದು ಪೆಲಕ್ಕಾಯಿ ಗಟ್ಟಿ. ಹಲಸಿನ ಹಣ್ಣು, ಅಕ್ಕಿ, ಬೆಲ್ಲ, ಜೀರಿಗೆ ಸೇರಿಸಿ ನಂತರ ಬಾಳೆಎಲೆಯಲ್ಲಿ ಸುತ್ತಿ ಬೇಯಿಸಿ ತಯಾರಿಸುವ ರುಚಿಕರವಾದ ತಿಂಡಿ ಇದು. ಇದನ್ನು ಸವಿದವರಿಗೇ ಗೊತ್ತು ಅದರ ರುಚಿ.
ಶಿಲ್ಪಾ ಶೆಟ್ಟಿ ಆಗಸ್ಟ್ 15ರಂದು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ವಿಡಿಯೋ ಸದ್ಯ ವೈರಲ್ ಆಗಿದ್ದು, ಆರು ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಜೊತೆಗೆ ಸಾವಿರಕ್ಕಿಂತಲೂ ಹೆಚ್ಚು ಜನ ಶೇರ್ ಮಾಡಿದ್ದಾರೆ. ಈ ಮೂಲಕ ಕೇವಲ ತುಳುನಾಡಿನಲ್ಲಿ ಮಾತ್ರ ಪ್ರಸಿದ್ದಿಯಾಗಿದ್ದ ಈ ತಿಂಡಿ ದೇಶ ವಿದೇಶಗಳಲ್ಲಿ ಪ್ರಸಿದ್ಧಿಯಾಗಿದೆ...

ಮಂಗಳೂರು ತಿಂಡಿ ಅಂದ್ರೆ ತುಂಬಾ ಇಷ್ಟ
ಮೂಲತಃ ಮಂಗಳೂರು ಮೂಲದ ಶಿಲ್ಪಾ ಶೆಟ್ಟಿ ಬಾಲಿವುಡ್‍ನಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸುವ ಮೂಲಕ ಸ್ಟಾರ್ ನಟಿ ಎನಿಸಿದ್ದಾರೆ. ಸದ್ಯ, ಮುಂಬೈನಲ್ಲಿ ಪತಿ ರಾಜ್‍ಕುಂದ್ರಾ ಹಾಗೂ ಕುಟುಂಬದೊಂದಿಗೆ ವಾಸವಾಗಿದ್ದಾರೆ.

ಖಾದ್ಯಗಳನ್ನು ಸವಿಯುತ್ತಾರೆ ಶಿಲ್ಪಾ
ಶಿಲ್ಪಾ ಶೆಟ್ಟಿಗೆ ತವರಿನ ತಿಂಡಿಗಳೆಂದರೆ ಪಂಚ ಪ್ರಾಣ. ಆಗಾಗ ಮಂಗಳೂರಿಗೆ ಬಂದು ಕೆಲವು ದಿನಗಳ ಕಾಲ ಇಲ್ಲಿಯೇ ಉಳಿದು, ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ಇದೇ ವೇಳೆ ತಮಗಿಷ್ಟವಾದ ಖಾದ್ಯಗಳನ್ನು ಸವಿಯುತ್ತಾರೆ. ವೀಡಿಯೋದಲ್ಲಿಯೂ ತಾನು ಮಂಗಳೂರಿನ ಖಾದ್ಯಗಳನ್ನು ಇಷ್ಟಪಡುವುದಾಗಿಯೂ ಹೇಳಿದ್ದಾರೆ.

ಪೆಲಕ್ಕಾಯಿ ಗಟ್ಟಿಗೆ ಹಲವು ಹೆಸರು
ಪೆಲಕ್ಕಾಯಿಗೆ ಬೇರೆ-ಬೇರೆ ಹೆಸರುಗಳಿವೆ. ಬರಿಕ್ಕ ಪೆಲಕ್ಕಾಯಿ, ತುಳುವ ಪೆಲಕ್ಕಾಯಿ, ಬೊಡ್ಡ ಪೆಲಕ್ಕಾಯಿ, ಪೊಳ್ಳೆ, ಉ೦ಡೆ ಪೆಲಕ್ಕಾಯಿ ಇತ್ಯಾದಿ ಹೆಸರುಗಳಿಂದಲೂ ಪೆಲಕ್ಕಾಯಿಯನ್ನು ಕರೆಯುತ್ತಾರೆ.

6 ಸಾವಿರ ಜನರಿಂದ ವೀಕ್ಷಣೆ
ಶಿಲ್ಪಾ ಶೆಟ್ಟಿ ಈ ವಿಡಿಯೋ ಹಾಕುವ ಮೂಲಕ ಪೆಲಕ್ಕಾಯಿ ಗಟ್ಟಿ ದೇಶ-ವಿದೇಶದಲ್ಲಿ ಪ್ರಸಿದ್ಧವಾಗುವಂತೆ ಮಾಡಿದ್ದಾರೆ. ಆರು ಸಾವಿರ ಜನರು ಈ ವಿಡಿಯೋ ನೋಡಿದ್ದಾರೆ. ತುಳುನಾಡಿನಲ್ಲಿ ಮಾತ್ರ ಪ್ರಸಿದ್ದಿಯಾಗಿದ್ದ ತಿಂಡಿ ಈಗ ಎಲ್ಲರಿಗೂ ಪರಿಚಯವಾಗಿದೆ.
-
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications