ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಲ್ಲಿ ಟ್ರಾಫಿಕ್ ನಿಯಮ ಉಲ್ಲಂಘಿಸುವಂತೆಯೇ ಇಲ್ಲ!

75 ಸಿಸಿ ಕ್ಯಾಮರಾಗಳನ್ನು ಟ್ರಾಫಿಕ್ ಸಮಸ್ಯೆ ಅತಿಯಾಗಿರುವ 45 ಸ್ಥಳಗಳಲ್ಲಿ ಸ್ಥಾಪಿಸಿದ್ದಾರೆ. ಇವು ಹೈ-ರೆಸೊಲ್ಯೂಶನ್ ಕ್ಯಾಮರಾಗಳಾಗಿದ್ದು ವಾಹನಗಳ ನಂಬರ್ ಪ್ಲೇಟ್ ಹಾಗೂ ಬಣ್ಣಗಳನ್ನೂ ಗುರುತಿಸಬಲ್ಲಷ್ಟು ಸಶಕ್ತವಾಗಿವೆ.

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಏಪ್ರಿಲ್ 24: ಮಂಗಳೂರು ನಗರದ ರಸ್ತೆಗಳಲ್ಲಿ ಸಾರಿಗೆ ನಿಯಮ ಉಲ್ಲಂಘನೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಜತೆಗೆ ಆಯುಕ್ತರ ಫೋನ್-ಇನ್ ಕಾರ್ಯಕ್ರಮದಲ್ಲಿ ಸಾರಿಗೆಗೆ ಸಂಬಂಧಿಸಿದ ದೂರುಗಳ ಮಹಾಪೂರವೇ ಹರಿದು ಬಂದಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಟ್ರಾಫಿಕ್ ಪೊಲೀಸರು 'ಎಂ-ಟ್ರಾಫಿಕ್ ನಿರ್ವಹಣಾ ವ್ಯವಸ್ಥೆ'ಯನ್ನು ಇನ್ನೂ ಉತ್ತಮಗೊಳಿಸುವ ಸರ್ವ ಪ್ರಯತ್ನದಲ್ಲಿದ್ದಾರೆ.

ಈಗಾಗಲೇ 75 ಸಿಸಿ ಕ್ಯಾಮರಾಗಳನ್ನು ಟ್ರಾಫಿಕ್ ಸಮಸ್ಯೆ ಅತಿಯಾಗಿರುವ ಹಾಗೂ ಉಲ್ಲಂಘನೆಗಳು ಹೆಚ್ಚಾಗಿ ನಡೆಯುವ 45 ಸ್ಥಳಗಳಲ್ಲಿ ಸ್ಥಾಪಿಸಿದ್ದಾರೆ. ಇವು ಹೈ-ರೆಸೊಲ್ಯೂಶನ್ ಕ್ಯಾಮರಾಗಳಾಗಿದ್ದು ವಾಹನಗಳ ನಂಬರ್ ಪ್ಲೇಟ್ ಹಾಗೂ ಬಣ್ಣಗಳನ್ನೂ ಗುರುತಿಸಬಲ್ಲಷ್ಟು ಸಶಕ್ತವಾಗಿವೆ.[ಜನೋಪಯೋಗಿ ಪ್ರಾಡೆಕ್ಟ್ , ಎಸ್ಡಿಎಂ ವಿದ್ಯಾರ್ಥಿಗಳ ಸಾಧನೆ]

75 high definition cameras installed in Mangaluru to control traffic violations

"ಇದರಿಂದ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡುವ ವಾಹನಗಳನ್ನು ಕಂಡು ಹಿಡಿದು ಸೂಕ್ತ ಕ್ರಮ ಕೈಗೊಳ್ಳಲು ಅತ್ಯಂತ ಸಹಕಾರಿಯಾಗಲಿವೆ," ಎಂದು ಎಸಿಪಿ (ಟ್ರಾಫಿಕ್) ತಿಲಕ್ ಚಂದ್ರ ಹೇಳಿದ್ದಾರೆ.

ಇಂದಿನಿಂದ ಈ ಕ್ಯಾಮರಾಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಲಿವೆ. ಆರಂಭದ ಸಿಗ್ನಲ್ ಸಮೀಪದ ಝೀಬ್ರಾ ಕ್ರಾಸಿಂಗ್ ಮೇಲೆ ನಿಲ್ಲುವ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಟ್ರಾಫಿಕ್ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಸಹಿಸುವ ಪ್ರಶ್ನೆಯೇ ಇಲ್ಲ ಎಂಬ ಎಚ್ಚರಿಕೆಯನ್ನು ಕೂಡ ಅಧಿಕಾರಿಗಳು ನೀಡಿದ್ದಾರೆ.[ಬಾವಿಗೆ ಇಳಿಯುವ ಮೊದಲು ಆಳ ನೋಡಿ ಇಳಿಯುವುದು ಉತ್ತಮ]

ಅಪರಿಮಿತ ವೇಗದಲ್ಲಿ ವಾಹನ ಚಲಾಯಿಸುವುದು, ಕರ್ಕಶ ಹಾರ್ನ್ ಉಪಯೋಗಿಸುವುದು, ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಓಡಿಸುವುದು, ಬಸ್ಸಿನ ನೇತಾಡಿಕೊಂಡು ಪ್ರಯಾಣಿಸುವುದು, ಮೂರು ಮಂದಿ ದ್ವಿಚಕ್ರ ವಾಹನದಲ್ಲಿ ಸಂಚರಿಸುವುದು, ವಾಹನ ಚಲಾಯಿಸುವಾಗ ಮೊಬೈಲ್ ಫೋನಿನಲ್ಲಿ ಮಾತನಾಡುವುದು ಹಾಗೂ ಸೀಟ್ ಬೆಲ್ಟ್ ಧರಿಸದಿರುವುದು ಮುಂತಾದ ಟ್ರಾಫಿಕ್ ನಿಯಮ ಉಲ್ಲಂಘನೆಗಳು ನಗರದಲ್ಲಿ ನಡೆಯುತ್ತಿವೆ. ಇನ್ನು ಮುಂದೆ ಈ ರೀತಿ ನಿಯಮಗಳ ಉಲ್ಲಂಘಕರ ಮೇಲೆ ಈ ಹೈ ರೆಸೊಲ್ಯೂಶನ್ ಕ್ಯಾಮರಾಗಳು ಹದ್ದಿನ ಕಣ್ಣು ಇಡಲಿವೆ.

English summary
75 high definition cameras installed in Mangaluru to control traffic. Those who violet the traffic rules will be monitored easily now with the help of these cameras.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X