ಚಾಕ್ಲೇಟ್ ತರಲು ಹೋಗಿದ್ದ ಬಾಲಕ ರೈಲಿಗೆ ಸಿಲುಕಿ ಸಾವು

ಮಂಗಳೂರು, ಸೆಪ್ಟೆಂಬರ್ 24 : ಚಾಕ್ಲೇಟ್ ತರಲು ಹೋಗಿದ್ದ ಬಾಲಕ ರೈಲಿಗೆ ಸಿಲುಕಿ ಮೃತಪಟ್ಟ ಘಟನೆ ಮಂಗಳೂರಿನಲ್ಲಿ ನಡೆದಿದೆ. ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಮಂಗಳೂರಿನ ಮಹಾಕಾಳಿ ಪಡ್ಪು ಎಂಬಲ್ಲಿ ಈ ಘಟನೆ ನಡೆದಿದ್ದು, ಮೃತಪಟ್ಟ ಬಾಲಕನನ್ನು ಅನ್ವರ್ ಹಾಗು ಶಮೀನಾ ದಂಪತಿಯ ಮಗ ಹಫೀಲ್ (7) ಎಂದು ಗುರುತಿಸಲಾಗಿದೆ. ಮನೆಯ ಸಮೀಪದಲ್ಲೇ ಇರುವ ಅಂಗಡಿಯೊಂದಕ್ಕೆ ಚಾಕ್ಲೇಟ್‌ ತರಲು ಹಫೀಲ್ ತೆರಳಿದ್ದ.

 7 year old boy dies after hit by train at Mahakalipadpu

ಅಂಗಡಿಯಿಂದ ವಾಪಸ್ ಬರುವಾಗ ರೈಲ್ವೆ ಹಳಿ ದಾಟುವಾಗ ಕೇರಳದಿಂದ ಬರುತ್ತಿದ್ದ ಎಕ್ಸ್‌ಪ್ರೆಸ್‌ ರೈಲು ಡಿಕ್ಕಿ ಹೊಡೆದಿದೆ. ಬಾಲಕನ ದೇಹವನ್ನು ಸುಮಾರು 75 ಮೀಟರ್ ದೂರ ರೈಲು ಎಳೆದುಕೊಂಡು ಹೋಗಿದೆ.

ಹಫೀಲ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಅಪಘಾತದ ತೀವ್ರತೆಗೆ ಬಾಲಕನ ದೇಹ ಎರಡು ತುಂಡಾಗಿದೆ. ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ತನಿಖೆ ನಡೆಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+