ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು; ಸೇನೆಯಲ್ಲಿ ಬಳಸುವ ಗ್ರೇನೆಡ್ ಪತ್ತೆ, ಆತಂಕ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ನವೆಂಬರ್ 07; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 5 ಸಜೀವ ಹ್ಯಾಂಡ್ ಗ್ರೇನೆಡ್‌ಗಳು ಪತ್ತೆಯಾಗಿದೆ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ಇಳಂತಿಲ ಎಂಬಲ್ಲಿ ಈ ಗ್ರೇನೆಡ್ ಪತ್ತೆಯಾಗಿದ್ದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಈ ಗ್ರೇನೆಡ್ ಸುಮಾರು 40 ವರ್ಷಗಳಷ್ಟು ಹಳೆಯದು ಎಂಬುದಾಗಿ ತಿಳಿದುಬಂದಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಶನಿವಾರ ಸಂಜೆಯ ವೇಳೆಗೆ ಇಳಂತಿಲ ಗ್ರಾಮದ ನಿವಾಸಿ, ಮಾಜಿ ಸೈನಿಕ ಜಯಕುಮಾರ್ ಎಂಬುವವರಿಗೆ ಈ ಗ್ರೇನೆಡ್ ಪತ್ತೆಯಾಗಿದೆ. ಮಾಜಿ ಸೈನಿಕ ಆಗಿರುವುದರಿಂದ ಗ್ರೇನೆಡ್‌ನ ಪರಿಣಾಮದ ಬಗ್ಗೆ ಅರಿವಾಗಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಉಪ್ಪಿನಂಗಡಿ ಠಾಣಾ ಪೊಲೀಸರು ಗ್ರೇನೆಡ್ ಅನ್ನು ವಶಪಡಿಸಿಕೊಂಡಿದ್ದಾರೆ.

ಪೊಲೀಸರ ತನಿಖೆ ವೇಳೆ ಮಾಜಿ ಸೈನಿಕ ಜಯಕುಮಾರ್ ಗ್ರೇನೆಡ್ ಸಿಕ್ಕಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಶನಿವಾರ ಸಂಜೆ 6 ಗಂಟೆಯ ವೇಳಗೆ ಉಪ್ಪಿನಂಗಡಿಯಿಂದ ಮನೆಗೆ ಬರುತ್ತಿದ್ದ ವೇಳೆಯಲ್ಲಿ, ಮನೆಯ ದಾರಿಯ ಬೇಲಿ ತಂತಿಯಲ್ಲಿ ಪ್ಲಾಸ್ಟಿಕ್ ಕವರ್‌ನಲ್ಲಿ ಒಂದು ಗ್ರೇನೆಡ್ ಪತ್ತೆಯಾಗಿದೆ.

 5 Grenade Found In Belthangadi Dakshina Kannada

ಬಳಿಕ ಸ್ಥಳದಲ್ಲೇ ಮತ್ತೆ 4 ಗ್ರೇನೆಡ್‌ಗಳು ಪತ್ತೆಯಾಗಿದೆ. ಈ ಗ್ರೇನೆಡ್‌ಗಳನ್ನು ಕಾಡು ಪ್ರಾಣಿಗಳು ಅಥವಾ ಬೇರೆ ಪ್ರಾಣಿಗಳು ಕಚ್ಚಿಕೊಂಡು ಹೋದರೆ ಭಾರೀ ಅಪಾಯವಾಗಬಹುದು ಅಂತಾ ಮನೆಗೆ ತಂದಿದ್ದೇನೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮಾಜಿ ಸೈನಿಕ ಜಯಕುಮಾರ್ ಭೂ ಸೇನೆಯಲ್ಲಿ ಎಸ್‌ಸಿಒ ಆಗಿ ಕಾರ್ಯ ನಿರ್ವಹಿಸಿದ್ದು, ಕೆಲ ವರ್ಷಗಳ ಹಿಂದೆ ಸೇನೆಯಿಂದ ನಿವೃತ್ತಿ ಗೊಂಡಿದ್ದರು. ಈ ಗ್ರೇನೆಡ್‌ಗಳು ಸೇನೆಯಲ್ಲಿ ಬಳಸುವ ಸ್ಫೋಟಕವಾಗಿದ್ದು, ಸುಮಾರು 40 ವರ್ಷಗಳಷ್ಟು ಹಳೆಯದು ಅಂತಾ ಹೇಳಲಾಗಿದೆ.

ಉಪ್ಪಿನಂಗಡಿ ಠಾಣಾ ಪೊಲೀಸರು ಸದ್ಯ ಗ್ರೇನೆಡ್ ಅನ್ನು ತಮ್ಮ ಸುಪರ್ದಿಗೆ ಪಡೆದುಕೊಂಡಿದ್ದು, ಆರ್ಮ್ಸ್ ಆಕ್ಟ್ ಕಾಯಿದೆಯಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಸದ್ಯ ಪ್ರಕರಣವನ್ನು ಉಪ್ಪಿನಂಗಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈ ಬಗ್ಗೆ ಮಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ‌ಋಷಿಕೇಶ್ ಸೋನಾವಾಣೆ, "ನಿನ್ನೆ ಸಂಜೆಯ ವೇಳೆಗೆ ಇಳಂತಿಲ ಎಂಬಲ್ಲಿ ಈ ಗ್ರೇನೆಡ್‌ಗಳು ಪತ್ತೆಯಾಗಿದೆ. ಪ್ರಾರ್ಥಮಿಕ ತನಿಖೆ ನಡೆಸುವ ವೇಳೆ ಸುಮಾರು 40 ವರ್ಷ ಹಳೆಯದು ಎಂದು ತಿಳಿದುಬಂದಿದೆ ಮತ್ತು ಈ ಗ್ರೆನೇಡ್ ಸೇನೆಯಲ್ಲಿ ಬಳಸುತ್ತಿದ್ದರು ಎಂಬುವುದು ಕೂಡಾ ಗೊತ್ತಾಗಿದೆ. ಗ್ರೇನೆಡ್ ಮೇಲೆ ಸೇನೆಯ ರೆಜಿಮೆಂಟ್‌ನ ಹೆಸರು ಇರೋದರಿಂದ ಹೆಚ್ಚಿನ ತನಿಖೆಗೆ ಸೇನೆಯ ಸಹಕಾರ ಕೋರಲಿದ್ದೇವೆ. ಬಾಂಬ್ ನಿಷ್ಕ್ರಿಯ ದಳದಿಂದ ಗ್ರೇನೆಡ್ ಅನ್ನು ನಿಷ್ಕ್ರಿಯ ಮಾಡಲಿದ್ದೇವೆ" ಎಂದು ಹೇಳಿದ್ದಾರೆ.

ಇನ್ನು ಏಕಾಏಕಿ ಗ್ರೆನೇಡ್ ಪತ್ತೆಯಾಗಿರುವ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಗ್ರೆನೇಡ್ 40 ವರ್ಷಗಳಷ್ಟು ಹಳೆಯದಾದ ಹಿನ್ನಲೆಯಲ್ಲಿ ಹಲವು ಆಯಾಮಗಳಲ್ಲಿ ತನಿಖೆ ಮಾಡಲಾಗುತ್ತಿದೆ. ಸೇನೆಗೆ ಸೇರಿದ ವ್ಯಕ್ತಿ ಈ ಗ್ರೇನೆಡ್ ಗಳನ್ನು ತಂದು ಇದೀಗ ನಿಷ್ಕ್ರಿಯ ಮಾಡಲಾಗದೇ, ಭಯದಿಂದ ಇಟ್ಟು ಹೋಗಿರುವ ಬಗ್ಗೆಯೂ ಶಂಕೆ ವ್ಯಕ್ತಪಡಿಸಲಾಗಿದೆ.

ಒಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿ 5 ಗ್ರೆನೇಡ್ ಗಳು ಪತ್ತೆಯಾಗಿರೋದು ಸ್ಥಳೀಯರನ್ನು ಭೀತಿಗೊಳಿಸಿದೆ. ಸುಳಿವೇ ಇಲ್ಲದ ಪ್ರಕರಣವನ್ನು ಪೊಲೀಸರು ಬೆನ್ನೆತ್ತಿದ್ದು, ಗ್ರೇನೆಡ್‌ನ ಮೂಲ ಪತ್ತೆ ಹಚ್ಚುವ ಸವಾಲು ಪೊಲೀಸರ ಹೆಗಲೇರಿದೆ‌.

English summary
5 Grenade found in Belthangadi taluk of Dakshina Kannada district. Uppinangady police probing the case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X